ಭಾವ ಗೀತೆ -29

 


      🌹 ನಿನ್ನ ಗುಳಿ ಕೆನ್ನೆ🌹


ಆ ನಿನ್ನ ಗುಳಿ ಬಿದ್ದ ಕೆನ್ನೆ

ನೋಡಿ ಸುಳಿಯಲಿ ಬಿದ್ದು ನಾ ಸೊನ್ನೆ

ಪ್ರೀತಿಯ ಕಡಲ ಆ ಗುಳಿಯಲಿ

ಈಜಿ ಬದುಕಬಲ್ಲೆನೆ // ಪಲ್ಲವಿ//


ನಿನ್ನ ಕಣ್ಣ ಕಡಲಲಿ

ಮುಳುಗಿರುವೆ ಓ ನನ್ನ ಚಿನ್ನ

ಆಳ ಹಗಲ ಅದರ ತಳ

ಕಾಣುವುದೇ ನಾ ಆಗಲು ತಳಮಳ


ಮೂಕನಾದೆ ನಿನ್ನ ಮೌನದ ಹಾಡಿಗೆ

ಸಂಗೀತದ ಸ್ವರದ ಮಧುರ ಗಾನಕೆ

ಜಗವ ಮರೆಸಿದೆ ಆ ನಿನ್ನ ಹಾಡು

ನೀ ಇರದ ನನ್ನ ಬದುಕು ಒಂಟಿ ಪಾಡು


ನೀ ಇರಲು ನೀನೇ ನನ್ನ ತಂಗುದಾಣ

ಎಲ್ಲಿಗೆ ಮತ್ತೆ ಹೊರಡಲಿ ಮರು ಪ್ರಯಾಣ

ಇಷ್ಟವಿಲ್ಲದೆ ಇದ್ದರೆ ಇರಿದುಬಿಡು

ಇಲ್ಲ ನಿನ್ನೆ ಪ್ರೀತಿಸುವೆ ನಾ ಎಂದು ಬಿಡು


*********ರಚನೆ *******

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35