Posts

Showing posts from November, 2022

ಬಡತನದ ಬೇಗೆ

Image
  ಕಣ್ಣಿಗೆ ಕಾಣದ ದೇವರ ಬೇಡಿದೆ ಮನವೆಕೊ ನೋವಲಿ ಕೂತಿದೆ ಕಣ್ಣೀರು ರೆಪ್ಪೆಯಂಚಲಿ ಕಾದಿದೆ ಹನಿ ನೀರು ಕೆನ್ನೆಯ ಸೋಕಿದೆ ಯಾರಿಗೆ ಹೇಳಲಿ ನನ್ನಯ ನೋವು ಹೆತ್ತವಳು ಮಗು ಹಡೆದಂತ ನೋವು ನನ್ನಳಗೆ ಕಂಪಿಸಿ ಮೊಟ್ಟೆ ಇಟ್ಟಂತ ಕಾವು ಬಿಚ್ಚಿಟ್ಟೆ ಸುಡುವ ಮನದ ಸಾವು ಕಾದಿದೆ ಬೆಂದಿದೆ ಬಾಡಿದೆ ಅರಳದೇ ಮುಳ್ಳು ಚುಚ್ಚಿ ಘಾಯವಾ ಮಾಡಿದೆ ನೋವುಗಳ ಕೆದಕಿ ಕಣ್ಣೀರು ಮಾಯವಾಗಿದೆ ಮಂದಹಾಸ ನನ ಬದುಕಲಿ ಮರೆಯಾಗಿದೆ ಬಸ್ಸುಗೂಟ್ಟುವ ಹಾವೊಂದು ಕನಸಲಿ ಕಾಡಿದೆ ದೇವರೇ ಯಾಕೇ ಕೊಟ್ಟೆ ಈ ಶಾಪ ಅನುಭವಿಸಲು ಹಾಗುತ್ತಿಲ್ಲ ತಾಪ ವಿಕಾರವಾಗಿದೆ ಬಡತನದ ರೂಪ ಕನಿಕರದಿ ಬೇಡ ಯಾರೋ ಹೇಳೋ ಪಾಪ ಬ್ರಹ್ಮ ವಿಷ್ಣು ಮಹೇಶ್ವರ  ದೇವಾ ನಮಗೆ  ಕನಿಕರವೇ ಇಲ್ಲವೇ ಹಣೆಬರಹ ಬರೆದವಗೆ ಕಣ್ಣಿರಲಿ ತಣ್ಣನೆಯ ಸ್ನಾನ ಮಾಡಿದವಗೆ ಬಾಡಿದ ದೇಹದಿ ಬದುಕು ಕೊಟ್ಟವಗೆ ಸತ್ಯದ ವಿಬೂತಿಯಲಿ ಕಾಣದಂತೆ ನಟಿಸುವವಗೆ  ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಜೀವನ ರೈಲು

Image
ಬದುಕು ಒಂದೂ ಓಡುತಿಹಾ ರೈಲು ನಾವೆಲ್ಲರೂ ಒಂಥರಾ ಹೈಲುಪೈಲು ಗಾಲಿ ಹುರುಳಿ ದಿನ ಕಳೆದಂತೆ ನಮ್ಮ ಊರು ಮುಂದಿನ ಸ್ಟಾಪಂತೆ  ಪಯಣದಿ ಹೋಗೆಯಂತೆ ನೂರೆಂಟು ಚಿಂತೆ ಸುಡುವ ಕಲ್ಲಿದ್ದಲು ರೈಲ ಸಾಗಿಸಿದಂತೆ ಚಾಲಕ ಒಬ್ಬ ನಮ್ಮಯ ದೇವರಂತೆ ನಮ್ಮನು ಸಾಗಿಸೋ ವಿಧಿಯ ಆಟದಂತೆ ಸಿಗುವುದು ನಮಗೆ ಊಟ ಉಪಹಾರ ಕಷ್ಟಗಳು ಬಂದರೆ ಜೀವನ ಖಾರ ವೇಗದಿ ಓಡುವ ರೈಲು ಸಂಚಾರ ಸವಿಯುವ ನಾವ ಬಾಳ ಸಾರ ***********ರಚನೆ ********* ಡಾ. ಚಂದ್ರಶೇಖರ್. ಸಿ. ಹೆಚ್

38-ವಚನಗಳು

Image
ಮನದಿ ಮಗುವಾಗಿ ಕಾಯಕವ ಮಾಡಿದೆ ಜೀವದ ಅಂಗುತೊರೆದು ಕಾಯಕವ ಮಾಡಿದೆ ಭಾವದಿ ಭಕ್ತಿಯಿಂದ ಕಾಯಕವ ಮಾಡಿದೆ ಜ್ಞಾನದಿ ಗುರುವಿಂದ ಕಾಯಕವ ಮಾಡಿದೆ ಕಾಯಕವೇ ದೇವರೆಂದ ನಮ್ಮ ಬಸವಣ್ಣನ ಬೇಡಿದೆ ನೀಲಿ ಆಕಾಶದಿ ಕಪ್ಪು ಕಾರ್ಮೋಡ ಕವಿದು ನೀರಿಲ್ಲದ  ಕೆರೆಗೆ ಉಕ್ಕಿ ನೆರೆ ಬಂದು ಭರಡು ಭೂಮಿಯಲಿ ಹಸಿರು  ಚಿಗುರಿ ಕಾಯಕದಿ ಮನವು ಸುಖ ಕಂಡಂತೆ -ನಮ್ಮ ಬಸವಣ್ಣ ಪೂಜಿಸಿ ದೇವರ ಕೆಟ್ಟವರಿಲ್ಲ ಜ್ಞಾನದಿ ಜೀವನದಿ ನೊಂದವರಿಲ್ಲ ಅನ್ನಸಂತರ್ಪಣೆ ಮಾಡಿ ಬಡವರಾಗಿಲ್ಲ ಕಾಯಕವ ಮಾಡಿ ಕೆಟ್ಟವರಿಲ್ಲ -ನಮ್ಮ ಬಸವಣ್ಣ ************ರಚನೆ ************ ಡಾ. ಚಂದ್ರಶೇಖರ. ಸಿ. ಹೆಚ್ 

ಕಾಣದ ಬೆಳಕು

Image
ಮನಸ್ಸಿನ ಒಳಗೆ ನೂರೆಂಟು ಆಸೆ ಮರೆತ್ತೋಯ್ತು ಏಕೊ ಕೊಟ್ಟ ಭಾಷೆ ಪ್ರೀತಿಲಿ ಬದುಕು ಬಾಳಿನ ಸಿಹಿ ನೋವಲಿ ಮನವು ಅರಗಿಸದ ಕಹಿ ಅನುರಾಗ ಅರಳಿರಲು ಖುಷಿ ಮೂಡದೆ ಶುಭೋಯೋಗ ಕೂಡಿರಲು ಒಳಿತಾಗದೆ ಹೃದಯದ ಬಡಿತಕ್ಕೆ ನಿನ್ನದೆ ನೆನಪು ಮಲ್ಲಿಗೆಯ ಪರಿಮಳ ಬೀಸಿದ ಕಂಪು ಕಣ್ಣೆದುರು ಏಕೊ ಒಲವೇ ಕುರುಡು ಸೋತ ಪ್ರೀತಿಗೆ ಮನವೆಕೋ ಬರಡು ಕನಸ್ಸುಗಳು ಕಮರಿ ಬಾಳಲ್ಲಿ ಬೇಗೆ ನೋವೊಂದು ಹೃದಯದಿ ಕಂಡರೆ ಹೇಗೆ ಹೊಸತನಕೆ ಮನ ಮಿಡಿದು ಕಣ್ಣೀರು ಕೊಡಿ ಪ್ರೀತಿ ಹಣತೆಯೊಂದು ಮಾಡಿತು ಮೋಡಿ ಕತ್ತಲಲಿ ಕಂಡ ಬೆಳಕೇ ಮಿಂಚು ಜೇವನದಿ ದುಃಖ ವಿಧಿಯ ಸಂಚು ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

37-ವಚನಗಳು

Image
ತಿನ್ನುವ ಅನ್ನ ಬಾ ಎಂದರೆ ಭಾರದಯ್ಯ ಧನಕನಕ ವಜ್ರವೈಡೂರ್ಯ ಬಾ ಎಂದೊಡೆ ಭಾರದಯ್ಯ ಮಾನ ಮರ್ಯಾದೆ ಬಾ ಎಂದರೆ ಬಾರದಯ್ಯ ಕಾಯಕವು ಮಾಡು ಬಯಸಿದ್ದು ಎಲ್ಲಾ ಬರುವುದಯ್ಯ- ನಮ್ಮ ಬಸವಣ್ಣ ನಾನೊಂದು ಬಗೆದರೆ ದೈವ ತಾ ಒಂದೂ ಬಗೆವುದು ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆವುದು ಮನಸ್ಸು ಮಾಯೆ ಕನಸ್ಸು ಬರಿ ಛಾಯೆ ಕಾಯಕದಿ ಕೈಲಾಸ ಬದುಕ ಬಂಡಿ ನೋಡ -ನಮ್ಮ ಬಸವಣ್ಣ ಆಸೆಯಿಂದ ಸ್ವರ್ಗ ಕಾಣದು ನೋಡಯ್ಯ ದುಃಖ ಮನದ ಪಾಪ ಕಳೆವುದು ನೋಡಯ್ಯ ಕರ್ಮ ಬದುಕ ದಾರಿ ತರುವುದು ನೋಡಯ್ಯ ಮಾಡುವ ಕಾಯಕ ನಮ್ಮ ಜೀವನ ನಡೆಸುವುದು ನೋಡಯ್ಯ -ನಮ್ಮ ಬಸವಣ್ಣ ***********ರಚನೆ ************** ಡಾ. ಚಂದ್ರಶೇಖರ. ಸಿ. ಹೆಚ್ 

36-ವಚನಗಳು

Image
ಹೊಟ್ಟೆಯೊಳಗೆ ಮುಚ್ಚಿಟ್ಟ ಕಿಚ್ಚು ಹಾವಿನ ವಿಷದಂತೆ ಮಾವಿನ ಹಣ್ಣಿನ ರಸವೂ ಅಮೃತದ ರುಚಿಯಂತೆ ಮಲ್ಲಿಗೆಯ ಹೂವ ಪರಿಮಳ ಮನ ಅರಳಿದಂತೆ ಕಾಯಕವು ಕೈಮುಗಿದು ಮಾಡು ಜೀವಾ ಅಮೃತದಂತೆ  ಜೀವನ ನಮ್ಮ ಬಸವಣ್ಣ ಅನುಭವದಿ ಶರಣರ ಸಂಗ ಚೆಂದ ಅನುಭವದಿ ಶರಣರ ತನು ಮನ ಚೆಂದ ಅನುಭವದಿ ಶರಣರ ಭಕ್ತಿ ಚೆಂದಾ ಅನುಭವದಿ ಶರಣರ ಕಾಯಕವು ಚೆಂದಾ ನಮ್ಮ ಬಸವಣ್ಣ ಜಾತಿಬ್ರಮೆ  ಛಲಬ್ರಮೆ  ಕುಲಬ್ರಮೆ ಶಾಸ್ತ್ರ ಭ್ರಮೆ ತರ್ಕಬ್ರಮೆ ರಾಜ್ಯ ಭ್ರಮೆ ತ್ಯಾಗ ಭೋಗ ಯೋಗ ಭ್ರಮೆ ಕಾಡುತಿರಲು ಕಾಯಕದ ಕೆಲಸ ಸರ್ವಬ್ರಮೆ ಮಂತ್ರ -ನಮ್ಮ ಬಸವಣ್ಣ **********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್  A

ಮನವು ಕುಣಿದಿದೆ

Image
ಗುಡುಗೋ ಮೋಡ ಮಿಂಚಿ ಮಳೆ ಸುರಿಸದೆ ಬಿಸಿಲು ಮಳೆಯಲಿ ಒಮ್ಮೆಕಾಮನಬಿಲ್ಲು ಮೂಡದೆ ಹರಿವ ನದಿಯು ನಗುತ ಕಡಲ ಒಡಲ ಸೇರದೆ ಹಸಿರು ಕಾಡಾಲೋಮ್ಮೆ ಕಾಡಗಿಚ್ಚು ಹಬ್ಬದೆ ಪ್ರೀತಿ ಒಮ್ಮೆ ಮೋಸವಾಗಿ ನೆತ್ತರು ಹರಿಯದೆ ಕಣ್ಣ ನೋಟ ನನ್ನ ತಾಗಿ ಮನಸ್ಸು ಮಿಡಿದಿದೆ ಸೂರ್ಯನ ಬೆಳಕು ಭೂಮಿ ತಾಗಿ ಜೀವ ಕುಣಿದಿದೆ ಚಂದ್ರನ ಬೆಳಕಿನಲಿ ವನ ಮೃಗವು ಮಲಗದೆ ಹಕ್ಕಿ ರೆಕ್ಕೆ ಬಿಚ್ಚಿ ಹಾರಿ ಮತ್ತೆ ಭೂಮಿ ಸೇರದೆ ಆಕಾಶಕ್ಕೆ ಏಣಿ ಹಾಕಿದರೆ ನಕ್ಷತ್ರ ಸಿಗುವುದೇ ಬಿಳೋ ಉಲ್ಕೆ ನೋಡಿ ಭೂಮಿ ಬೀರಿವುದೇ ಭೂಮಿ ಏಕೊ ಭಾರ ಎಂದು ಭೂಕಂಪ ನಡೆವುದೇ ಯಾರೋ ಇಷ್ಟ ಪಟ್ಟ ಹೂವು ಯಾರೋ ಮುಡಿಗೋ ಯಾರೋ ಇಷ್ಟ ಪಟ್ಟ ಒಲವೋ ಯಾರ ಬಲೆಗೋ ತಿನ್ನೋ ಅನ್ನದ ಅಕ್ಕಿ ಮೇಲೆ ನನ್ನ ಹೆಸರು ಗೀಚದೆ ಪ್ರೀತಿಲಿ ಸಾಕಿದ ಗಿಣಿ  ಹದ್ದು ಹಾಗಿ ಹೃದಯ ಬಗೆದಿದೆ ಯಾರೋ ಮಾಡಿದ ಮೋಸಕೆ ಮನವು ಅಳುತಿದೆ ಕಣ್ಣ ನೀರು ಕಂಬನಿಯಾಗಿ ಜೀವ ಬಳಲಿದೆ ದೈವವನ್ನು ಬೇಡಿ ಮನವು ವಿಧಿಯ ಶಪಿಸಿದೆ ಜೀವದಾಸೆ  ಪಟ್ಟ ಒಡನೇ ಕಾದ ಸಾವು ಬಿಡುವುದೇ ********ರಚನೆ ********* ಡಾ. ಚಂದ್ರಶೇಖರ ಸಿ. ಹೆಚ್

ಓ ನನ್ನ ಒಲವೇ

Image
ನನ್ನೆದಯ ತೋಟದಿ ಆರಳಿದ ಹೂವೆ ಸೂರ್ಯನಿಗೇ ಕುಡಿ ನೋಟ ಬೀರಿದ ಚೆಲುವೆ ಮುಂಜಾನೆ ನಕ್ಕು ಸಂಜೆ ಬಾಡುವ ಒಲವೇ ಭಾವನೆಗಳ ರಂಗೋಲಿ ಬಿಡಿಸುವ ಮನವೇ  ಮೋಡದ ಒಳಗೆ ಕಾಮನಬಿಲ್ಲು ನೀನು ಕಣ್ಣ ನೋಟದಿ ಸೆರೆಯಿಡಿವ ಕಳ್ಳ ನಾನು ಮೋಡವು ಕರಗಿ ಸುರಿವ ಮಳೆ ನೀನು ಹನಿಯು ಮುತ್ತಾಗಿ ಹರಿಯುವ ಇಳೆ ನಾನು ಒಲವ ನೆನಪಿನಲಿ ಕುಣಿವ ಗೊಂಬೆಯೇ ಸಂಜೆ  ಮರೆಯಾಗುವ ಸೂರ್ಯನ ಛಾಯೆಯೇ ನನ್ನೆದುರು ನಿಂತ ಬೆದುರು ಬೊಂಬೆಯೇ ಕತ್ತಲಲಿ ಸಂಭ್ರಮಿಸೋ ಚಂದ್ರನ ಮಾಯೆಯೇ ಉಸಿರಲ್ಲಿ ಪಿಸುಗುಟ್ಟಿ ಕರೆವ ನನ್ನ ಒಲವೇ ಮುಟ್ಟಿದರೆ ಮುದುರಿ ಮುನೀವ ಗಿಡವೆ ಮುಳ್ಳಿನಲಿ ಮುದ್ದಾಗಿ ಅರಳಿದ ಗುಲಾಬಿ ಬಾಳಿನಲಿ ಮಿಂದೆದ್ದಾ ಪ್ರೀಯ ಶಾರಭಿ ************ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಮಂಜ ಹನಿ

Image
ಮಂಜು ಮುಸುಕಿದ ಮೋಡ ಮುತ್ತಿನ ಮಳೆ ಸುರಿಸಿದೆ ನೋಡ ಬಿದ್ದ  ಹನಿ ಸ್ವಾತಿ ಮುತ್ತಾಗಿದೆ ಹಸಿರು ಹಾಸಿನಲಿ ತುತ್ತಾಗಿದೆ ಮಂಜಿನ ಪರದೆಯಲಿ ನಾವು ಅದುಮಿಟ್ಟಾ ಪ್ರೀತಿಯ ಕಾವು ತಬ್ಬುಗೆಯಲಿ ಇತವಾದ ಕನಸು ನಿನ್ನಲ್ಲಿ ನನಗೇಕೋ ಮನಸ್ಸು ನಡೆದೊಷ್ಟು ದೂರ ಜೀವನ ಕುಣಿದಿದೆ ಮಂಜಲ್ಲಿ ಈ ಮನ ಮಾಸದ ಬದುಕಿನ ಕ್ಷಣ ಖುಷಿ ಕಾದಿದೆ ಮನ ಒಲವ ಈ ಬೀಸಿ ಕಣ್ಣುಗಳು ಕುಡಿ ನೋಟ ಬೀರಿದೆ ಮನಸ್ಸುಗಳು ಹೊಸ ಕಥೆ ಬರೆದಿದೆ ಹೆಜ್ಜೆ ಹೆಜ್ಜೆ ಸವಿ ಹಾಡು ಹೇಳಿದೆ ಕುಣಿಯವ ದೇಹಕೆ ಬಿಸಿ ತಾಕಿದೆ ಹಸಿಗನಸು ಮನದಿ ಮನೆ ಮಾಡಿದೆ ಹಸಿ ಬಿಸಿ ವಯಸ್ಸು ತಾಳ ಹಾಕಿದೆ ಎದೆಬಡಿತ ನಿನ್ನ ಕೂಗಿ ಕರೆದಿದೆ ಮೂಕ ಮನಸು ಮಾತನಾಡಿದೆ  ***********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಬಾರೆ ಹಕ್ಕಿ

Image
ಗುಬ್ಬಚ್ಚಿ ಗೂಡಿನಲಿ ಕೂರು ಬಾರೆ ಹಕ್ಕಿ ಸೂರಿನ ಗೂಡಿನಲಿ ಕುಣಿವ ಬಾರೆ ಹಕ್ಕಿ ಕನಸ್ಸುಗಳ ರೆಕ್ಕೆ ಬಿಚ್ಚಿ ಹಾರು ಬಾರೆ ಹಕ್ಕಿ ಆಕಾಶದಿ ಹಾರುತ ನಲಿವ ಬಾರೆ ಹಕ್ಕಿ ಹೊಲದಲ್ಲಿ ಕಾಳುಗಳು ತಿನ್ನು ಬಾರೆ ಹಕ್ಕಿ ಹೊಲ ಕಾಯುವ ಬಂದರೆ ಹಾರು ಬಾರೆ ಹಕ್ಕಿ ಕೆರೆ  ನೀರಿನಲ್ಲಿ ಮೀನಾ ತಿನ್ನು ಬಾರೆ ಹಕ್ಕಿ ಗುಟುಕು ನೀರ ಕುಡಿದು ಈಜು ಬಾರೆ ಹಕ್ಕಿ ಪುಟ್ಟ ಹೆಜ್ಜೆ ಇಟ್ಟು ಮರದಿ ಕೂರು ಬಾರೆ ಹಕ್ಕಿ ಮಾವಿನ ಹಣ್ಣು ತಿಂದು ತೇಗು ಬಾರೆ ಹಕ್ಕಿ ಚಿವು ಗುಟ್ಟುತ ಮೋಡದಿ ತೇಲು ಬಾರೆ ಹಕ್ಕಿ ಗುಡುಗು ಮಳೆಗೆ ನೆನೆದು ಗೂಡ ಸೇರು ಬಾರೆ ಹಕ್ಕಿ ಮನೆಯಲಿ ಹಪ್ಪಳದ ಚೂರಿದೆ ಕದಿಯು ಬಾರೆ ಹಕ್ಕಿ ಕದ್ದು ಕರೆಂಟ್ ತಂತಿ ಮೇಲೆ ಕೂತು ತಿನ್ನು ಬಾರೆ ಹಕ್ಕಿ ಸೋರುತಿಹ ಮಾಳಿಗೆ ನಿನ್ನ ಊರೇ ಹಕ್ಕಿ ಸೂರು ತುಂಬಾ ನಿನ್ನ ಗಾನ ಹಾಡು ಬಾರೆ ಹಕ್ಕಿ ಹಕ್ಕಿಗಳ ಸಾಲು  ಹಾರುತಿವೆ ನೋಡು ಬಾರೆ ಹಕ್ಕಿ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಆಸೆ ಮಾತು

Image
ಆಸೆಗಳಿಗೆ ಮಾತು ಬಂದಿದೆ ಕನಸ್ಸುಗಳು ಕಾದು ಕೂತಿದೆ ಬಯಕೆಗಳು ಬೆನ್ನು ಬಿದ್ದಿದ್ದೆ ಭಾವನೆಗಳಿಗೆ ಬಣ್ಣ ಬಳಿದಿದೆ ಮೌನದಲ್ಲಿ ನೂರು ಮಾತು ಅವಿತುಕುತ ಆಸೆ ತೂತು ಕನಸ್ಸು ಏಕೊ ಬಳಿ ನಿಂತು ಕಾಣದ ಒಂದೂ ಕವನ ತಂತು ಭಾರವಾದ ಹೃದಯದಲ್ಲಿ ನೋವು ಭಾವನೆಗಳಿಗೆ ಎಲ್ಲಿ ಇಲ್ಲಿ ಗೆಲುವು ಬದುಕ ಬಣ್ಣ ಉಸಿರುಗಟ್ಟಿದೆ ಜೀವ ನೊಂದು ಕಣ್ಣೀರು ಬತ್ತಿದೆ ಮಾಯದ ಘಾಯವೊಂದು ನೋವ ನೆನಪು ಹೊತ್ತು ತಂದು ಮನಸ್ಸು ಮಸಣ ಮಾಡಿದೆ ಆಸೆಗಳು ಶವದ ಯಾತ್ರೆ ಹೊರಟಿದೆ ವಿಧಿಯ ಆಟವೋ ಇದು ಪಾಠವೋ ಕನಸ್ಸು ಕಾಣೋ ಜೀವದ ಓಟವೋ ಭಾವನೆಗಳ ಬಾಡುಊಟಾವೂ ಬಯಕೆಗಳ ಹೆಣದ ಚಟ್ಟವೋ ದೇಹದ ಒಳಗೆ ಆಸೆ ಸತ್ತು ಕನಸ್ಸುಗಳ ಮೂಟೆ ಕೊಳೆತು ಬಯಕೆಗಳಿಗೆ ಬೆಂಕಿ ಬಿದ್ದು ಭಾವನೆಗಳು ಬೂದಿಯಾಗಿದೆ ಬದುಕು ಏಕೊ ಕಾಲಿ ಹಾಳೆಯಾಗಿದೆ  *******ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಜೀವನದ ಮೌಲ್ಯ

Image
  ಓಡುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಜೀವನದ ಮೌಲ್ಯಗಳು ಸಮಾಧಿಯಾಗುತ್ತವೆ ಎಂದು ಅನಿಸದೆ ಇರಲು ಸಾಧ್ಯವೇ . ತಂದೆ ತಾಯಿಯರು ಮಕ್ಕಳನ್ನು ಸಾಕಿ ವಿದ್ಯಾಭ್ಯಾಸ ಕೊಡಿಸಿ ಮಕ್ಕಳ ಅಭಿವೃದ್ಧಿಯನ್ನು ಬಯಸುತ್ತಾರೆ, ಆದರೆ ಇಂದು ಮದುವೆಯಾದ ಹೊಸ ದಂಪತಿಗಳು ಬಯಸುವುದು ಅಪ್ಪ ಅಮ್ಮ ಇಲ್ಲದ ಮನೆಯಲ್ಲಿ ಜೀವಿಸುವುದನ್ನು ಇಷ್ಟಪಡುತ್ತಾರೆ. ಏಕೆಂದರೆ ಶಿವಪೂಜೆಯಲ್ಲಿ ಕರಡಿ ಇರಬಾರದು ಎಂದು. ಇದನ್ನು ನೋಡಿದಾಗ ತಂತ್ರಜ್ಞಾನದ ಯುಗದಲ್ಲಿ ಮನಸ್ಸುಗಳು ಸಂಕುಚಿತವಾಗುತ್ತಿವೆ ಅನಿಸದೆ ಇರದು. ನಮ್ಮ ದೇಶ ಸಂಸ್ಕೃತಿಯಲ್ಲಿ ಸಂಪತ್ ಭರಿತ ದೇಶ ಆದರೆ ಇಂದು ನಾವುಗಳು ನಮ್ಮ ಉನ್ನತ ಸಂಸ್ಕೃತಿಯನ್ನು ಮರೆತು ಬಿಕ್ಷಾಟನೆಗೆ  ನಿಂತಿದ್ದೇವೆ. ನಮ್ಮ ದೇಶ ಬೇರೆ ದೇಶಗಳಿಂದ ಸಾಲವನ್ನು ಪಡೆಯುತ್ತಿದೆ ಹಾಗೆ ನಾವುಗಳು ವೇಷ ಭೂಷಣ ಆಚಾರ ವಿಚಾರಗಳಲ್ಲಿ ಬೇರೆ ದೇಶಗಳನ್ನು ಅನುಕರಿಸುತ್ತಿದ್ದೇವೆ,  ನಮ್ಮ ಸ್ವಂತಿಕೆ ಮರೆಯಾಗುತ್ತಿರುವುದು ಕಾಣಬಹುದು. ನಾವುಗಳು ವೇಷ ಭೂಷಣಗಳಲ್ಲಿ ಪರಕಿಯರನ್ನು ಅನುಸರಿಸುತ್ತಿದ್ದೇವೆ. ಎತ್ತ ಕಡೆ ಹೋದರು ಲಂಚ ಕೋರರು, ಜೂಜು ಕೊರರು, ಕಳ್ಳರು, ಮನೆಗಳಲ್ಲಿ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ,ನಗರಗಳಲ್ಲಿ, ಎತ್ತ ಕಡೆ ಹೋದರು ಭಿಕ್ಷುಕರೇ ಕಾಣುತ್ತಿದ್ದಾರೆ. ಇಂದಿನ ಯುವ ವಿದ್ಯಾರ್ಥಿಗಳು ಕೂಡ ಓದದೇ ಶ್ರಮಪಡದೆ ಅಂಕಗಳು ಜಾಸ್ತಿ ಬಂದು ನಾವು ಉತ್ತೀರ್ಣರಾಗಬೇಕು ಎಂದು ಬಯಸುವವರೇ, ಇದನ್ನು ಶಿಕ್ಷಕರು ಮತ್ತು ಪಾಲಕರು ಕೂಡ ಪೋಷಿಸುತ್ತಿದ್ದಾರೆ. ಇಂದು ಮಕ

ಹೆಮ್ಮರದ ರಕ್ತ

Image
ನನ್ನೆದೆಯ ಆಳದಿ ದುಮ್ಮಿಕಿದೆ ನರ ನಾಡಿಗಳಲಿ ರಕ್ತ ಕುದಿದೆ ಜೀವದ ಹಸಿವು ಬೋರ್ಗರೆದಿದೆ ನೆತ್ತರು ನದಿಯಂತೆ ಓಡಿದೆ ಹೆಸರು ಹಸಿರಾಗೂ ಮುನ್ನ ಕನಸ್ಸಿನ ಆಸೆಗೆ ಏಕೆ ಗುನ್ನ ಕನ್ನಡಿಯು ಬಿಂಬವೆ ಮನ್ನಾ ನಾನೇಗೆ ಮರೆಯಲೇ ನಿನ್ನ ಬದುಕು ಬೆಳದಿಂಗಳ ಮಾಯೆ ಮನೆಯಲಿ ಸೂತಕದ ಛಾಯೆ ಹೆಪ್ಪುಗಟ್ಟಿದೆ ದುಃಖ ಬಾಳಲಿ ಎಗೆ ಕರಗಿಸಲಿ ನಾ ಕರುಳಿನಲಿ ಕುಡಿಯೊಂದು ಮಸಣ ಸೇರಿತು ಮೌನ ನನ್ನ ಮನವ ಕದಡಿತು ಹೆಮ್ಮರದ ಆಸೆ ಕಡಿದು ಬಿದ್ದಿತು ಕೈಬಾಚಿ ಕೊನೆ ಉಸಿರ ತೆಗೆಯಿತು ಮರ ಬಿಕ್ಕಿ ಬಿಕ್ಕಿ ಅಳುತಾ ಕೊನೆ ಉಸಿರು ಬಿಟ್ಟಿತು ಬಾಳಲಿ ಬೆಂಡಗಾದೆ ಸೂರು ಕಟ್ಟಿತು ದೇವರ ಗುಡಿಗೆ ಚಪ್ಪರ ವಾಯಿತು ********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಅಪ್ಪ ಹಾಕಿದ ಆಲದ ಮರ

Image
  ನಾವು ಕೇಳಿರಬಹುದು ಈ ಗಾದೆ ಮಾತನ್ನು ಅಪ್ಪ ಹಾಕಿದ ಆಲದ ಮರಕ್ಕೆ ನಾವು ನೇಣುಬಿಗಿದುಕೊಳ್ಳಬೇಕೆ. ಈ ಗಾದೆ ಮಾತು ಎಲ್ಲರ ಜೀವನಕ್ಕೂ ಅನ್ವಯಿಸುತ್ತದೆ. ನಾವು ವಿದ್ಯಾಭ್ಯಾಸ ಮಾಡುತ್ತೇವೆ ನೌಕರಿಗಳನ್ನು ಹುಡುಕುತ್ತೇವೆ , ಕೆಲಸ ಮಾಡುತ್ತ ನಾವು ತಿರುಗಿ ನೋಡಿದಾಗ ನಮ್ಮ ಕೆಲಸ ನಮ್ಮ ತಂದೆ ತಾಯಿಯ ಮಾಡುವ ವೃತ್ತಿಯಾಗಿರುತ್ತದೆ .ಉದಾಹರಣೆಗೆ ನನ್ನ ತಂದೆ ಪೊಲೀಸ್, ನಾನು ಶಿಕ್ಷಕನಾಗಬೇಕು ಎಂಬ ಆಸೆ ಚಿಕ್ಕಂದಿನಲ್ಲಿ ಮೊಳೆಯುವುದು ಕಡಿಮೆ, ನನ್ನ ತಂದೆ ಪೊಲೀಸ್ ನಾನು ಕೂಡ ಪೊಲೀಸ್ ಆಗಬೇಕು ಎಂದು ಹೇಳುವ ಮಕ್ಕಳನ್ನು ನೋಡಿದ್ದೇವೆ. ನಮ್ಮ ತಂದೆ ತಾಯಿಯರು ಯಾವ ವೃತ್ತಿಯನ್ನು ಮಾಡುತ್ತಾರೋ ಆ  ವೃತ್ತಿಯನ್ನು ನಾವು ಪಡೆಯಲು ಪ್ರಯತ್ನಿಸಿದರೆ ನಮಗೆ ಸರಳವಾಗಿ ನಮ್ಮ ಕೆಲಸಗಳು ನಮ್ಮ ತಂದೆ ತಾಯಿಯರಿಗೆ ಇರುವ ಸಂಪರ್ಕದಿಂದ ಸಾಧ್ಯ ಎಂದು ತಿಳಿದುಕೊಳ್ಳಬಹುದು. ಒಂದು ಉದಾಹರಣೆ ನೋಡುವುದಾದರೆ ನಮ್ಮ ದೇಶದ ಬಹಳ ಹಳೆಯ ಪಕ್ಷ ಕಾಂಗ್ರೆಸ್ ಪಕ್ಷ , ಈ ಪಕ್ಷದ ನಾಯಕನಾಗಿ ಜವಾಹರ್ ಲಾಲ್ ನೆಹರು ಪ್ರಧಾನಮಂತ್ರಿಯಾಗಿದ್ದರು. ಅವರ ಮಗಳು ಇಂದಿರಾಗಾಂಧಿ ಕೂಡ ಪ್ರಧಾನಮಂತ್ರಿಯಾಗಿ ಕೆಲಸ ಮಾಡಿದ್ದರು ಹಾಗೂ ಇಂದಿರಾಗಾಂಧಿಯವರ ಮಗ ರಾಜೀವ್ ಗಾಂಧಿ ಕೂಡ ನಮ್ಮ ದೇಶದ ಪ್ರಧಾನಮಂತ್ರಿಯಾಗಿದ್ದರು .ಈಗ ರಾಜೀವ್ ಗಾಂಧಿಯ ಪುತ್ರ ರಾಹುಲ್ ಗಾಂಧಿ ಕೂಡ ಪ್ರಧಾನ ಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವುದರಲ್ಲಿ ಸಂಶಯವೇನು ಇಲ್ಲ. ಇದನ್ನು ನಮ್ಮ ಸಮಾಜವು ವಂಶ ಪಾರಂಪರ್ಯ ರಾಜಕೀಯ ಎಂದು ಹೇಳ

ಗೆಲುವು ಎಂದರೇನು???

Image
ನಾವು ಗೆಲುವು ಎಂದರೆ ನಿರ್ದಿಷ್ಟವಾಗಿ ಇದೆ ಎಂದು ತಿಳಿಯುವುದು ಸುಲಭವಲ್ಲ. ಗೆಲುವು ಪ್ರತಿಯೊಬ್ಬರಿಗೂ ತನ್ನದೇ ಕ್ಷೇತ್ರದಲ್ಲಿ ಕಾರ್ಯ ಮಾಡುವವರಿಗೆ ಭಿನ್ನವಾಗಿರುತ್ತದೆ. ಅದನ್ನು ಹೀಗೆ ಎಂದು ತಿಳಿಯುವುದು ಕಷ್ಟ ಸಾಧ್ಯ. ಉದಾಹರಣೆಗೆ ನಾವು ಶಿಕ್ಷಕನನ್ನು ತೆಗೆದುಕೊಂಡಾಗ ಆ ಶಿಕ್ಷಕ ಶಾಲೆಯಲ್ಲಿ ಮತ್ತು ಊರಿನಲ್ಲಿ ಶಾಲೆಯ ಮಕ್ಕಳು ಮತ್ತು ಊರಿನ ಸಾರ್ವಜನಿಕರ ಬಳಿ ಉತ್ತಮ ಪ್ರಶಂಸೆ ಪಡೆದು ಉತ್ತಮ ಶಿಕ್ಷಕ ಎಂಬ ಪ್ರಶಸ್ತಿ ಸರ್ಕಾರದಿಂದ ಅವನಿಗೆ ಲಭಿಸಿದರೆ ಅದು ಅವನ ಗೆಲುವು ಎಂದು ಹೇಳಲು ಬಹುದು  ಒಬ್ಬ ಆಟಗಾರ ಕ್ರೀಡೆಯಲ್ಲಿ ಸತತ ಪರಿಶ್ರಮದಿಂದ ಕಠಿಣ ಅಭ್ಯಾಸದಿಂದ ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿ ನಮ್ಮ ರಾಜ್ಯ ಅಥವಾ ನಮ್ಮ ದೇಶವನ್ನು ಕ್ರೀಡೆಯಲ್ಲಿ ಪ್ರತಿನಿಧಿಸಿದರೆ ಅದನ್ನು ನಾವು ಗೆಲುವು ಎಂದು ತಿಳಿಯಲು ಬಹುದು. ಹಾಗೆ ಒಬ್ಬ ಸನ್ಯಾಸಿಗೆ ಗೆಲುವು ಎಂದರೆ ಕೇಳಿದಾಗ ಕಾಮ, ಕ್ರೋಧ, ಮದ, ಮತ್ಸರ, ಲೋಭ ಇವುಗಳನ್ನು ಜಯಿಸಿ ಪರಿಶ್ರಮ ಏಕಾಗ್ರತೆಯಿಂದ ಕಾಯಕದ ಅಭ್ಯಾಸ ಜೊತೆಗೆ ದೇವರ ಸ್ಮರಣೆ ಮಾಡುತ್ತಾ ಧ್ಯಾನ ಚಿತ್ತನಾಗಿ ಮನಸ್ಸನ್ನು ಶಾಂತ ಚಿತ್ತವಾಗಿ ದೇವರನ್ನು ಕುರಿತು ಜಪಿಸುವುದು ಎಂದು ತಿಳಿಯಬಹುದು. ಅದೇ ರೀತಿ ಒಬ್ಬ ಕೋಟ್ಯಾಧಿಪತಿಯನ್ನು ಗೆಲುವು ಎಂದರೇನು ಕೇಳಿ ತಿಳಿದರೆ ನಾನು ಸದಾ ಪರಿಶ್ರಮದಿಂದ ಸಣ್ಣ ಮೊತ್ತದ ಹಣದಿಂದ ನನ್ನ ಉದ್ಯೋಗವನ್ನು ಮಾಡುತ್ತ ಬಂದ ಲಾಭದ ಹಣವನ್ನು ಬೇರೆ ಬಿಸಿನೆಸ್ ನಲ್ಲಿ ವಿನಯೋಗಿಸಿ ಶ್ರಮದಿಂದ