ಓ ನನ್ನ ಒಲವೇ
ನನ್ನೆದಯ ತೋಟದಿ ಆರಳಿದ ಹೂವೆ
ಸೂರ್ಯನಿಗೇ ಕುಡಿ ನೋಟ ಬೀರಿದ ಚೆಲುವೆ
ಮುಂಜಾನೆ ನಕ್ಕು ಸಂಜೆ ಬಾಡುವ ಒಲವೇ
ಭಾವನೆಗಳ ರಂಗೋಲಿ ಬಿಡಿಸುವ ಮನವೇ
ಮೋಡದ ಒಳಗೆ ಕಾಮನಬಿಲ್ಲು ನೀನು
ಕಣ್ಣ ನೋಟದಿ ಸೆರೆಯಿಡಿವ ಕಳ್ಳ ನಾನು
ಮೋಡವು ಕರಗಿ ಸುರಿವ ಮಳೆ ನೀನು
ಹನಿಯು ಮುತ್ತಾಗಿ ಹರಿಯುವ ಇಳೆ ನಾನು
ಒಲವ ನೆನಪಿನಲಿ ಕುಣಿವ ಗೊಂಬೆಯೇ
ಸಂಜೆ ಮರೆಯಾಗುವ ಸೂರ್ಯನ ಛಾಯೆಯೇ
ನನ್ನೆದುರು ನಿಂತ ಬೆದುರು ಬೊಂಬೆಯೇ
ಕತ್ತಲಲಿ ಸಂಭ್ರಮಿಸೋ ಚಂದ್ರನ ಮಾಯೆಯೇ
ಉಸಿರಲ್ಲಿ ಪಿಸುಗುಟ್ಟಿ ಕರೆವ ನನ್ನ ಒಲವೇ
ಮುಟ್ಟಿದರೆ ಮುದುರಿ ಮುನೀವ ಗಿಡವೆ
ಮುಳ್ಳಿನಲಿ ಮುದ್ದಾಗಿ ಅರಳಿದ ಗುಲಾಬಿ
ಬಾಳಿನಲಿ ಮಿಂದೆದ್ದಾ ಪ್ರೀಯ ಶಾರಭಿ
************ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment