ಮನವು ಕುಣಿದಿದೆ
ಗುಡುಗೋ ಮೋಡ ಮಿಂಚಿ ಮಳೆ ಸುರಿಸದೆ
ಬಿಸಿಲು ಮಳೆಯಲಿ ಒಮ್ಮೆಕಾಮನಬಿಲ್ಲು ಮೂಡದೆ
ಹರಿವ ನದಿಯು ನಗುತ ಕಡಲ ಒಡಲ ಸೇರದೆ
ಹಸಿರು ಕಾಡಾಲೋಮ್ಮೆ ಕಾಡಗಿಚ್ಚು ಹಬ್ಬದೆ
ಪ್ರೀತಿ ಒಮ್ಮೆ ಮೋಸವಾಗಿ ನೆತ್ತರು ಹರಿಯದೆ
ಕಣ್ಣ ನೋಟ ನನ್ನ ತಾಗಿ ಮನಸ್ಸು ಮಿಡಿದಿದೆ
ಸೂರ್ಯನ ಬೆಳಕು ಭೂಮಿ ತಾಗಿ ಜೀವ ಕುಣಿದಿದೆ
ಚಂದ್ರನ ಬೆಳಕಿನಲಿ ವನ ಮೃಗವು ಮಲಗದೆ
ಹಕ್ಕಿ ರೆಕ್ಕೆ ಬಿಚ್ಚಿ ಹಾರಿ ಮತ್ತೆ ಭೂಮಿ ಸೇರದೆ
ಆಕಾಶಕ್ಕೆ ಏಣಿ ಹಾಕಿದರೆ ನಕ್ಷತ್ರ ಸಿಗುವುದೇ
ಬಿಳೋ ಉಲ್ಕೆ ನೋಡಿ ಭೂಮಿ ಬೀರಿವುದೇ
ಭೂಮಿ ಏಕೊ ಭಾರ ಎಂದು ಭೂಕಂಪ ನಡೆವುದೇ
ಯಾರೋ ಇಷ್ಟ ಪಟ್ಟ ಹೂವು ಯಾರೋ ಮುಡಿಗೋ
ಯಾರೋ ಇಷ್ಟ ಪಟ್ಟ ಒಲವೋ ಯಾರ ಬಲೆಗೋ
ತಿನ್ನೋ ಅನ್ನದ ಅಕ್ಕಿ ಮೇಲೆ ನನ್ನ ಹೆಸರು ಗೀಚದೆ
ಪ್ರೀತಿಲಿ ಸಾಕಿದ ಗಿಣಿ ಹದ್ದು ಹಾಗಿ ಹೃದಯ ಬಗೆದಿದೆ
ಯಾರೋ ಮಾಡಿದ ಮೋಸಕೆ ಮನವು ಅಳುತಿದೆ
ಕಣ್ಣ ನೀರು ಕಂಬನಿಯಾಗಿ ಜೀವ ಬಳಲಿದೆ
ದೈವವನ್ನು ಬೇಡಿ ಮನವು ವಿಧಿಯ ಶಪಿಸಿದೆ
ಜೀವದಾಸೆ ಪಟ್ಟ ಒಡನೇ ಕಾದ ಸಾವು ಬಿಡುವುದೇ
********ರಚನೆ *********
ಡಾ. ಚಂದ್ರಶೇಖರ ಸಿ. ಹೆಚ್
Comments
Post a Comment