ಕಾಣದ ಬೆಳಕು
ಮನಸ್ಸಿನ ಒಳಗೆ ನೂರೆಂಟು ಆಸೆ
ಮರೆತ್ತೋಯ್ತು ಏಕೊ ಕೊಟ್ಟ ಭಾಷೆ
ಪ್ರೀತಿಲಿ ಬದುಕು ಬಾಳಿನ ಸಿಹಿ
ನೋವಲಿ ಮನವು ಅರಗಿಸದ ಕಹಿ
ಅನುರಾಗ ಅರಳಿರಲು ಖುಷಿ ಮೂಡದೆ
ಶುಭೋಯೋಗ ಕೂಡಿರಲು ಒಳಿತಾಗದೆ
ಹೃದಯದ ಬಡಿತಕ್ಕೆ ನಿನ್ನದೆ ನೆನಪು
ಮಲ್ಲಿಗೆಯ ಪರಿಮಳ ಬೀಸಿದ ಕಂಪು
ಕಣ್ಣೆದುರು ಏಕೊ ಒಲವೇ ಕುರುಡು
ಸೋತ ಪ್ರೀತಿಗೆ ಮನವೆಕೋ ಬರಡು
ಕನಸ್ಸುಗಳು ಕಮರಿ ಬಾಳಲ್ಲಿ ಬೇಗೆ
ನೋವೊಂದು ಹೃದಯದಿ ಕಂಡರೆ ಹೇಗೆ
ಹೊಸತನಕೆ ಮನ ಮಿಡಿದು ಕಣ್ಣೀರು ಕೊಡಿ
ಪ್ರೀತಿ ಹಣತೆಯೊಂದು ಮಾಡಿತು ಮೋಡಿ
ಕತ್ತಲಲಿ ಕಂಡ ಬೆಳಕೇ ಮಿಂಚು
ಜೇವನದಿ ದುಃಖ ವಿಧಿಯ ಸಂಚು
************ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment