37-ವಚನಗಳು
ತಿನ್ನುವ ಅನ್ನ ಬಾ ಎಂದರೆ ಭಾರದಯ್ಯ
ಧನಕನಕ ವಜ್ರವೈಡೂರ್ಯ ಬಾ ಎಂದೊಡೆ ಭಾರದಯ್ಯ
ಮಾನ ಮರ್ಯಾದೆ ಬಾ ಎಂದರೆ ಬಾರದಯ್ಯ
ಕಾಯಕವು ಮಾಡು ಬಯಸಿದ್ದು ಎಲ್ಲಾ ಬರುವುದಯ್ಯ- ನಮ್ಮ ಬಸವಣ್ಣ
ನಾನೊಂದು ಬಗೆದರೆ ದೈವ ತಾ ಒಂದೂ ಬಗೆವುದು
ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆವುದು
ಮನಸ್ಸು ಮಾಯೆ ಕನಸ್ಸು ಬರಿ ಛಾಯೆ
ಕಾಯಕದಿ ಕೈಲಾಸ ಬದುಕ ಬಂಡಿ ನೋಡ -ನಮ್ಮ ಬಸವಣ್ಣ
ಆಸೆಯಿಂದ ಸ್ವರ್ಗ ಕಾಣದು ನೋಡಯ್ಯ
ದುಃಖ ಮನದ ಪಾಪ ಕಳೆವುದು ನೋಡಯ್ಯ
ಕರ್ಮ ಬದುಕ ದಾರಿ ತರುವುದು ನೋಡಯ್ಯ
ಮಾಡುವ ಕಾಯಕ ನಮ್ಮ ಜೀವನ ನಡೆಸುವುದು ನೋಡಯ್ಯ -ನಮ್ಮ ಬಸವಣ್ಣ
***********ರಚನೆ **************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment