ಆಸೆ ಮಾತು
ಆಸೆಗಳಿಗೆ ಮಾತು ಬಂದಿದೆ
ಕನಸ್ಸುಗಳು ಕಾದು ಕೂತಿದೆ
ಬಯಕೆಗಳು ಬೆನ್ನು ಬಿದ್ದಿದ್ದೆ
ಭಾವನೆಗಳಿಗೆ ಬಣ್ಣ ಬಳಿದಿದೆ
ಮೌನದಲ್ಲಿ ನೂರು ಮಾತು
ಅವಿತುಕುತ ಆಸೆ ತೂತು
ಕನಸ್ಸು ಏಕೊ ಬಳಿ ನಿಂತು
ಕಾಣದ ಒಂದೂ ಕವನ ತಂತು
ಭಾರವಾದ ಹೃದಯದಲ್ಲಿ ನೋವು
ಭಾವನೆಗಳಿಗೆ ಎಲ್ಲಿ ಇಲ್ಲಿ ಗೆಲುವು
ಬದುಕ ಬಣ್ಣ ಉಸಿರುಗಟ್ಟಿದೆ
ಜೀವ ನೊಂದು ಕಣ್ಣೀರು ಬತ್ತಿದೆ
ಮಾಯದ ಘಾಯವೊಂದು
ನೋವ ನೆನಪು ಹೊತ್ತು ತಂದು
ಮನಸ್ಸು ಮಸಣ ಮಾಡಿದೆ
ಆಸೆಗಳು ಶವದ ಯಾತ್ರೆ ಹೊರಟಿದೆ
ವಿಧಿಯ ಆಟವೋ ಇದು ಪಾಠವೋ
ಕನಸ್ಸು ಕಾಣೋ ಜೀವದ ಓಟವೋ
ಭಾವನೆಗಳ ಬಾಡುಊಟಾವೂ
ಬಯಕೆಗಳ ಹೆಣದ ಚಟ್ಟವೋ
ದೇಹದ ಒಳಗೆ ಆಸೆ ಸತ್ತು
ಕನಸ್ಸುಗಳ ಮೂಟೆ ಕೊಳೆತು
ಬಯಕೆಗಳಿಗೆ ಬೆಂಕಿ ಬಿದ್ದು
ಭಾವನೆಗಳು ಬೂದಿಯಾಗಿದೆ
ಬದುಕು ಏಕೊ ಕಾಲಿ ಹಾಳೆಯಾಗಿದೆ
*******ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment