ಬಡತನದ ಬೇಗೆ

 



ಕಣ್ಣಿಗೆ ಕಾಣದ ದೇವರ ಬೇಡಿದೆ

ಮನವೆಕೊ ನೋವಲಿ ಕೂತಿದೆ

ಕಣ್ಣೀರು ರೆಪ್ಪೆಯಂಚಲಿ ಕಾದಿದೆ

ಹನಿ ನೀರು ಕೆನ್ನೆಯ ಸೋಕಿದೆ


ಯಾರಿಗೆ ಹೇಳಲಿ ನನ್ನಯ ನೋವು

ಹೆತ್ತವಳು ಮಗು ಹಡೆದಂತ ನೋವು

ನನ್ನಳಗೆ ಕಂಪಿಸಿ ಮೊಟ್ಟೆ ಇಟ್ಟಂತ ಕಾವು

ಬಿಚ್ಚಿಟ್ಟೆ ಸುಡುವ ಮನದ ಸಾವು


ಕಾದಿದೆ ಬೆಂದಿದೆ ಬಾಡಿದೆ ಅರಳದೇ

ಮುಳ್ಳು ಚುಚ್ಚಿ ಘಾಯವಾ ಮಾಡಿದೆ

ನೋವುಗಳ ಕೆದಕಿ ಕಣ್ಣೀರು ಮಾಯವಾಗಿದೆ

ಮಂದಹಾಸ ನನ ಬದುಕಲಿ ಮರೆಯಾಗಿದೆ

ಬಸ್ಸುಗೂಟ್ಟುವ ಹಾವೊಂದು ಕನಸಲಿ ಕಾಡಿದೆ


ದೇವರೇ ಯಾಕೇ ಕೊಟ್ಟೆ ಈ ಶಾಪ

ಅನುಭವಿಸಲು ಹಾಗುತ್ತಿಲ್ಲ ತಾಪ

ವಿಕಾರವಾಗಿದೆ ಬಡತನದ ರೂಪ

ಕನಿಕರದಿ ಬೇಡ ಯಾರೋ ಹೇಳೋ ಪಾಪ


ಬ್ರಹ್ಮ ವಿಷ್ಣು ಮಹೇಶ್ವರ  ದೇವಾ ನಮಗೆ 

ಕನಿಕರವೇ ಇಲ್ಲವೇ ಹಣೆಬರಹ ಬರೆದವಗೆ

ಕಣ್ಣಿರಲಿ ತಣ್ಣನೆಯ ಸ್ನಾನ ಮಾಡಿದವಗೆ

ಬಾಡಿದ ದೇಹದಿ ಬದುಕು ಕೊಟ್ಟವಗೆ

ಸತ್ಯದ ವಿಬೂತಿಯಲಿ ಕಾಣದಂತೆ ನಟಿಸುವವಗೆ 


********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35