ಬಾರೆ ಹಕ್ಕಿ



ಗುಬ್ಬಚ್ಚಿ ಗೂಡಿನಲಿ ಕೂರು ಬಾರೆ ಹಕ್ಕಿ

ಸೂರಿನ ಗೂಡಿನಲಿ ಕುಣಿವ ಬಾರೆ ಹಕ್ಕಿ

ಕನಸ್ಸುಗಳ ರೆಕ್ಕೆ ಬಿಚ್ಚಿ ಹಾರು ಬಾರೆ ಹಕ್ಕಿ

ಆಕಾಶದಿ ಹಾರುತ ನಲಿವ ಬಾರೆ ಹಕ್ಕಿ


ಹೊಲದಲ್ಲಿ ಕಾಳುಗಳು ತಿನ್ನು ಬಾರೆ ಹಕ್ಕಿ

ಹೊಲ ಕಾಯುವ ಬಂದರೆ ಹಾರು ಬಾರೆ ಹಕ್ಕಿ

ಕೆರೆ  ನೀರಿನಲ್ಲಿ ಮೀನಾ ತಿನ್ನು ಬಾರೆ ಹಕ್ಕಿ

ಗುಟುಕು ನೀರ ಕುಡಿದು ಈಜು ಬಾರೆ ಹಕ್ಕಿ


ಪುಟ್ಟ ಹೆಜ್ಜೆ ಇಟ್ಟು ಮರದಿ ಕೂರು ಬಾರೆ ಹಕ್ಕಿ

ಮಾವಿನ ಹಣ್ಣು ತಿಂದು ತೇಗು ಬಾರೆ ಹಕ್ಕಿ

ಚಿವು ಗುಟ್ಟುತ ಮೋಡದಿ ತೇಲು ಬಾರೆ ಹಕ್ಕಿ

ಗುಡುಗು ಮಳೆಗೆ ನೆನೆದು ಗೂಡ ಸೇರು ಬಾರೆ ಹಕ್ಕಿ

ಮನೆಯಲಿ ಹಪ್ಪಳದ ಚೂರಿದೆ ಕದಿಯು ಬಾರೆ ಹಕ್ಕಿ


ಕದ್ದು ಕರೆಂಟ್ ತಂತಿ ಮೇಲೆ ಕೂತು ತಿನ್ನು ಬಾರೆ ಹಕ್ಕಿ

ಸೋರುತಿಹ ಮಾಳಿಗೆ ನಿನ್ನ ಊರೇ ಹಕ್ಕಿ

ಸೂರು ತುಂಬಾ ನಿನ್ನ ಗಾನ ಹಾಡು ಬಾರೆ ಹಕ್ಕಿ

ಹಕ್ಕಿಗಳ ಸಾಲು  ಹಾರುತಿವೆ ನೋಡು ಬಾರೆ ಹಕ್ಕಿ



**********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35