ಜೀವನ ರೈಲು
ಬದುಕು ಒಂದೂ ಓಡುತಿಹಾ ರೈಲು
ನಾವೆಲ್ಲರೂ ಒಂಥರಾ ಹೈಲುಪೈಲು
ಗಾಲಿ ಹುರುಳಿ ದಿನ ಕಳೆದಂತೆ
ನಮ್ಮ ಊರು ಮುಂದಿನ ಸ್ಟಾಪಂತೆ
ಪಯಣದಿ ಹೋಗೆಯಂತೆ ನೂರೆಂಟು ಚಿಂತೆ
ಸುಡುವ ಕಲ್ಲಿದ್ದಲು ರೈಲ ಸಾಗಿಸಿದಂತೆ
ಚಾಲಕ ಒಬ್ಬ ನಮ್ಮಯ ದೇವರಂತೆ
ನಮ್ಮನು ಸಾಗಿಸೋ ವಿಧಿಯ ಆಟದಂತೆ
ಸಿಗುವುದು ನಮಗೆ ಊಟ ಉಪಹಾರ
ಕಷ್ಟಗಳು ಬಂದರೆ ಜೀವನ ಖಾರ
ವೇಗದಿ ಓಡುವ ರೈಲು ಸಂಚಾರ
ಸವಿಯುವ ನಾವ ಬಾಳ ಸಾರ
***********ರಚನೆ *********
ಡಾ. ಚಂದ್ರಶೇಖರ್. ಸಿ. ಹೆಚ್
Comments
Post a Comment