ಜೀವನದ ಮೌಲ್ಯ
ಓಡುತ್ತಿರುವ ತಂತ್ರಜ್ಞಾನದ ಯುಗದಲ್ಲಿ ಜೀವನದ ಮೌಲ್ಯಗಳು ಸಮಾಧಿಯಾಗುತ್ತವೆ ಎಂದು ಅನಿಸದೆ ಇರಲು ಸಾಧ್ಯವೇ . ತಂದೆ ತಾಯಿಯರು ಮಕ್ಕಳನ್ನು ಸಾಕಿ ವಿದ್ಯಾಭ್ಯಾಸ ಕೊಡಿಸಿ ಮಕ್ಕಳ ಅಭಿವೃದ್ಧಿಯನ್ನು ಬಯಸುತ್ತಾರೆ, ಆದರೆ ಇಂದು ಮದುವೆಯಾದ ಹೊಸ ದಂಪತಿಗಳು ಬಯಸುವುದು ಅಪ್ಪ ಅಮ್ಮ ಇಲ್ಲದ ಮನೆಯಲ್ಲಿ ಜೀವಿಸುವುದನ್ನು ಇಷ್ಟಪಡುತ್ತಾರೆ. ಏಕೆಂದರೆ ಶಿವಪೂಜೆಯಲ್ಲಿ ಕರಡಿ ಇರಬಾರದು ಎಂದು. ಇದನ್ನು ನೋಡಿದಾಗ ತಂತ್ರಜ್ಞಾನದ ಯುಗದಲ್ಲಿ ಮನಸ್ಸುಗಳು ಸಂಕುಚಿತವಾಗುತ್ತಿವೆ ಅನಿಸದೆ ಇರದು.
ನಮ್ಮ ದೇಶ ಸಂಸ್ಕೃತಿಯಲ್ಲಿ ಸಂಪತ್ ಭರಿತ ದೇಶ ಆದರೆ ಇಂದು ನಾವುಗಳು ನಮ್ಮ ಉನ್ನತ ಸಂಸ್ಕೃತಿಯನ್ನು ಮರೆತು ಬಿಕ್ಷಾಟನೆಗೆ ನಿಂತಿದ್ದೇವೆ. ನಮ್ಮ ದೇಶ ಬೇರೆ ದೇಶಗಳಿಂದ ಸಾಲವನ್ನು ಪಡೆಯುತ್ತಿದೆ ಹಾಗೆ ನಾವುಗಳು ವೇಷ ಭೂಷಣ ಆಚಾರ ವಿಚಾರಗಳಲ್ಲಿ ಬೇರೆ ದೇಶಗಳನ್ನು ಅನುಕರಿಸುತ್ತಿದ್ದೇವೆ, ನಮ್ಮ ಸ್ವಂತಿಕೆ ಮರೆಯಾಗುತ್ತಿರುವುದು ಕಾಣಬಹುದು. ನಾವುಗಳು ವೇಷ ಭೂಷಣಗಳಲ್ಲಿ ಪರಕಿಯರನ್ನು ಅನುಸರಿಸುತ್ತಿದ್ದೇವೆ. ಎತ್ತ ಕಡೆ ಹೋದರು ಲಂಚ ಕೋರರು, ಜೂಜು ಕೊರರು, ಕಳ್ಳರು, ಮನೆಗಳಲ್ಲಿ ಹಳ್ಳಿಗಳಲ್ಲಿ, ಪಟ್ಟಣಗಳಲ್ಲಿ ,ನಗರಗಳಲ್ಲಿ, ಎತ್ತ ಕಡೆ ಹೋದರು ಭಿಕ್ಷುಕರೇ ಕಾಣುತ್ತಿದ್ದಾರೆ. ಇಂದಿನ ಯುವ ವಿದ್ಯಾರ್ಥಿಗಳು ಕೂಡ ಓದದೇ ಶ್ರಮಪಡದೆ ಅಂಕಗಳು ಜಾಸ್ತಿ ಬಂದು ನಾವು ಉತ್ತೀರ್ಣರಾಗಬೇಕು ಎಂದು ಬಯಸುವವರೇ, ಇದನ್ನು ಶಿಕ್ಷಕರು ಮತ್ತು ಪಾಲಕರು ಕೂಡ ಪೋಷಿಸುತ್ತಿದ್ದಾರೆ.
ಇಂದು ಮಕ್ಕಳು ಹೆತ್ತ ತಂದೆ ತಾಯಿಯರನ್ನು ಸಾಕಲಾಗದೆ , ಅನಾಥಶ್ರಮ ಮತ್ತು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು, ನೋಡಿದರೆ ಹೆತ್ತವರ ಬಗ್ಗೆ ವಿಶ್ವಾಸವಿಲ್ಲದೆ ಇರುವುದು ತಿಳಿಯುತ್ತದೆ. ಇದೊಂದೇ ವಿಷಯದಲ್ಲಿ ಅಲ್ಲ ಒಬ್ಬ ರೋಗಿಗೆ ಡಾಕ್ಟರ ಮೇಲೆ ವಿಶ್ವಾಸವಿಲ್ಲದೆ ಇರುವುದು ಹಾಗೆಯೇ ಸಮಾಜದ ಜನಕ್ಕೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದೆ ಇರುವುದು. ಜೀವನದ ಮೌಲ್ಯಗಳನ್ನು ನಾವು ಗಾಳಿಗೆ ತೂರಿ ಬದುಕುತ್ತಿರುವುದನ್ನು ಕಾಣಬಹುದು.
ನಾವು ನಮ್ಮ ಬದುಕಿನ ವ್ಯವಸ್ಥೆಯಲ್ಲಿ ವ್ಯವಸ್ಥೆಯಲ್ಲಿ ಎಲ್ಲವನ್ನು ಸ್ವಾರ್ಥದಿಂದ ನೋಡುತ್ತಾ ಉಪಕಾರದ ಮಹತ್ವವನ್ನು ಮರೆತಿದ್ದೇವೆ. ಬೇರೆಯವರಿಗೆ ಪರೋಪಕಾರ ಮಾಡುವುದು ದೂರದ ಮಾತು ನಮಗೆ ಉಪಕಾರ ಮಾಡಿದವರನ್ನು ನೆನೆಯದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯೆ ಕೊಟ್ಟ ಗುರು ತನ್ನ ಸ್ವಾರ್ಥಕ್ಕಾಗಿ ವಿದ್ಯಾರ್ಥಿಗಳನ್ನು ಉಪಯೋಗ ಮಾಡಿಕೊಳ್ಳುವುದು, ಇದರಿಂದ ವಿದ್ಯಾರ್ಥಿಗಳು ಕೂಡ ಗುರುಗಳ ಬಗ್ಗೆ ಆಲಸ್ಯ ಭಾವನೆ ಬರಲು ಕಾರಣವಾಗಿದೆ.
ಈ ಓಡುತ್ತಿರುವ ಕಾಲದಲ್ಲಿ ಪ್ರತಿಯೊಂದು ಕೆಲಸವು ವೇಗವಾಗಿ ಆಗಬೇಕು ಎಂದು ಬಯಸುವುದು , ಅತಿ ವೇಗವು ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವುದು ಹಾಗೆಯೇ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸತ್ಸಂಗ, ಮೌನ , ಶುಚಿತ್ವಗಳ ಮಹತ್ವವನ್ನು ಜೀವನದಲ್ಲಿ ಅರಿಯಲು ವಿಫಲರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾವಾಗಲೂ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ನಡೆ, ನುಡಿ ಆಚಾರ, ವಿಚಾರ ಸಂಸ್ಕೃತಿ ಗುರು ಹಿರಿಯರಲ್ಲಿ ಭಕ್ತಿ ಹೊಂದಿರುವ ಗೆಳೆಯನನ್ನು ಆಯ್ಕೆ ಮಾಡುವಲ್ಲಿ ಇಚ್ಚಿಸುವುದು ಬಹಳ ಮುಖ್ಯ.
ಮೌನ ನಮ್ಮ ಜೀವನದ ಶೈಲಿಯನ್ನು ಉತ್ತಮಗೊಳಿಸುವುದು ಹಾಗೆ ನಾವು ಬೆಳಗ್ಗೆ ಎದ್ದು ಶುಭ್ರವಾಗಿ ಸ್ನಾನ ಮಾಡಿ ದೇವರುಗಳನ್ನು ಪೂಜಿಸುವುದು ನಮ್ಮ ಎಳಿಗೆಗೆ ಕಾರಣವಾಗುವುದು. ಯುವಜನತೆಯಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಗುಣಲಕ್ಷಣಗಳು ಕಡಿಮೆಯಾಗುತ್ತಿವೆ . ಇಂದು ಬೆಳಗ್ಗೆ ಎದ್ದು ಓದಬೇಕು ಎಂದುಕೊಂಡು ಮಲಗುವ ವಿದ್ಯಾರ್ಥಿಯು ಚಳಿಯ ನೆಪವಡ್ಡಿ ತನ್ನ ಬೆಳಗೆಯ ಓದುವುದನ್ನು ಮುಂದೆ ಹಾಕುತ್ತಾನೆ, ಇದನ್ನು ನೋಡಿದರೆ ಸರಿಯಾದ ನಿಶ್ಚಯದ ಕೊರತೆ ಎದ್ದು ಕಾಣುತ್ತದೆ ನಾವು ಯಾವುದಾದರೂ ಕೆಲಸವನ್ನು ಅಂದುಕೊಳ್ಳುವುದು ಸುಲಭ ಆದರೆ ಅದನ್ನು ಪೂರ್ತಿ ಮಾಡುವುದು ತುಂಬಾನೇ ಕಷ್ಟ , ಇದಕ್ಕೆ ಬೇಕಾಗಿರುವುದು ದೃಢವಾದ ನಿಶ್ಚಯ. ಎಲ್ಲರೂ ನಿಶ್ಚಯಿಸಿರಿ ನಿರ್ಣಯಿಸಿರಿ ಕಾರ್ಯದಲ್ಲಿ ತೊಡಗಿ ಮುಂದಿನದನ್ನು ದೇವರಿಗೆ ಬಿಟ್ಟುಬಿಡಿ ಭಗವಂತನೇ ನಿಮ್ಮನ್ನು ಕಾಯುವನು.
ಈ ಯುಗದ ಯುವ ಜನತೆ ಕಷ್ಟಕಾಲದಲ್ಲಿ ಪರಾವಲಂಬನೆಯಾಗಿ ಜೀವಿಸುತ್ತಿರುವ ಹಿರಿಯರಿಗೆ ಆಧಾರವಾಗುವುದನ್ನು ಮರೆಯುತ್ತಿದ್ದಾರೆ. ಇದಕ್ಕೆ ಉದಾಹರಣೆ, ಕಾರನ್ನು ಓಡುಸ್ತಿದ್ದ ಡ್ರೈವರ್ ಒಬ್ಬ ಹಿರಿಯ ವಯಸ್ಸಿನ ಮುದುಕನ ಮೇಲೆ ಕಾರನ್ನು ಹತ್ತಿಸಿ ಕೊಲೆ ಮಾಡುವ ಪ್ರವೃತ್ತಿಯನ್ನು ಕಾಣುತ್ತಿದ್ದೇವೆ ಹಾಗೂ ಕೊಲೆ ಮಾಡಿ ಪಶ್ಚಾತಾಪವಿಲ್ಲದೆ ಗಾಡಿ ಚಲಾಯಿಸಿ ಪೊಲೀಸರ ಅತಿಥಿಯಾಗುವುದನ್ನು ನಾವು ಎಷ್ಟೋ ಸಲ ಟಿವಿಯಲ್ಲಿ ನೋಡುತ್ತಿದ್ದೇವೆ.
ಈ ಜಗತ್ತಿನಲ್ಲಿ ನಾವು ಎಲ್ಲರೂ ಜೀವನದ ಮೌಲ್ಯಗಳನ್ನು ಗಾಳಿಗೆ ತೂರಿ ನಾವು ಸುಖದ ಹಿಂದೆ ಓಡುತ್ತಿದ್ದೇವೆ. ಸುಖವನ್ನು ಧೂಮಪಾನ, ಕುಡಿತ ಮುಂತಾದ ಚಟಗಳನ್ನು ನಮ್ಮ ಜೀವನದಲ್ಲಿ ಕಲಿತು ಬದುಕನ್ನು ನರಕಮಯ ಮಾಡಿಕೊಳ್ಳುತ್ತಿದ್ದೇವೆ. ಇಂದಿನ ಯುವಜನತೆ ಪ್ರೀತಿ ಪ್ರೇಮ ಎಂದು ಬಲಿಯಾಗುತ್ತಿದ್ದಾರೆ. ಜೊತೆಗೆ ಯುವಕರು ಕಾಮದಹಕ್ಕೆ ಬಲಿಯಾಗಿ ಎಷ್ಟು ಯುವತಿಯರ ಮಾನಭಂಗದ ವಿಚಾರಗಳನ್ನು ನಾವು ನ್ಯೂಸ್ ಪೇಪರ್, ಟಿವಿ ಚಾನೆಲ್ ಗಳಲ್ಲಿ ನೋಡುತ್ತಿದ್ದೇವೆ ಹಾಗೂ ಕೇಳುತ್ತಿದ್ದೇವೆ. ನಾವೆಲ್ಲರೂ ಒಟ್ಟಾರೆ ಬದುಕಿನ ಭವಣೆಯಲ್ಲಿ ಜೀವನದ ಸಾರವನ್ನು ಮರೆತು ಜೀವನದ ಮೌಲ್ಯಗಳು ಮರೆಯಾಗುತ್ತಿವೆಯೆ ನೀವೇ ಹೇಳಿ?????
ಸಾರವೇ ಇಲ್ಲದ ಸಾಂಬಾರ್ ಹಾಗಿದೆ ಬಾಲ್ಯ.
ಜೀವನವೆಂಬುದು ಕೊಳೆತ ಹಣ್ಣು ತರಕಾರಿಗಳ ಪಲ್ಯ.
ಮರೆತು ನಡೆಯುತ್ತಿದ್ದೇವೆ ಜೀವನದ ಕೌಶಲ್ಯ.
ಕುಡಿತದ ಅಮಲಿನಲ್ಲಿ ನೆನೆಯುತ್ತಿದ್ದೇವೆ ವಿಜಯ ಮಲ್ಯ.
ಯುವಜನತೆ ದಾರಿ ತಪ್ಪಿದೆ ತಿಳಿಯದೆ
ಬದುಕು ಮೌಲ್ಯವೆ ಇಲ್ಲದ ಬರಡು ಭೂಮಿಯಾಗಿದೆ.
ಮನಸ್ಸು ನಾವಿಕನಿಲ್ಲದ ದೋಣಿಯಾಗಿದೆ.
ಎಲ್ಲಿ ಹುಡುಕಲಿ ನಾನು ನೀವೇ ಹೇಳಿ ಜೀವನದ ಮೌಲ್ಯ.
******ಲೇಖಕರು****
ಡಾ.ಚಂದ್ರಶೇಖರ್. ಸಿ. ಹೆಚ್
Comments
Post a Comment