ಮಂಜ ಹನಿ




ಮಂಜು ಮುಸುಕಿದ ಮೋಡ

ಮುತ್ತಿನ ಮಳೆ ಸುರಿಸಿದೆ ನೋಡ

ಬಿದ್ದ  ಹನಿ ಸ್ವಾತಿ ಮುತ್ತಾಗಿದೆ

ಹಸಿರು ಹಾಸಿನಲಿ ತುತ್ತಾಗಿದೆ


ಮಂಜಿನ ಪರದೆಯಲಿ ನಾವು

ಅದುಮಿಟ್ಟಾ ಪ್ರೀತಿಯ ಕಾವು

ತಬ್ಬುಗೆಯಲಿ ಇತವಾದ ಕನಸು

ನಿನ್ನಲ್ಲಿ ನನಗೇಕೋ ಮನಸ್ಸು


ನಡೆದೊಷ್ಟು ದೂರ ಜೀವನ

ಕುಣಿದಿದೆ ಮಂಜಲ್ಲಿ ಈ ಮನ

ಮಾಸದ ಬದುಕಿನ ಕ್ಷಣ ಖುಷಿ

ಕಾದಿದೆ ಮನ ಒಲವ ಈ ಬೀಸಿ


ಕಣ್ಣುಗಳು ಕುಡಿ ನೋಟ ಬೀರಿದೆ

ಮನಸ್ಸುಗಳು ಹೊಸ ಕಥೆ ಬರೆದಿದೆ

ಹೆಜ್ಜೆ ಹೆಜ್ಜೆ ಸವಿ ಹಾಡು ಹೇಳಿದೆ

ಕುಣಿಯವ ದೇಹಕೆ ಬಿಸಿ ತಾಕಿದೆ


ಹಸಿಗನಸು ಮನದಿ ಮನೆ ಮಾಡಿದೆ

ಹಸಿ ಬಿಸಿ ವಯಸ್ಸು ತಾಳ ಹಾಕಿದೆ

ಎದೆಬಡಿತ ನಿನ್ನ ಕೂಗಿ ಕರೆದಿದೆ

ಮೂಕ ಮನಸು ಮಾತನಾಡಿದೆ 


***********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple