ಹೆಮ್ಮರದ ರಕ್ತ




ನನ್ನೆದೆಯ ಆಳದಿ ದುಮ್ಮಿಕಿದೆ

ನರ ನಾಡಿಗಳಲಿ ರಕ್ತ ಕುದಿದೆ

ಜೀವದ ಹಸಿವು ಬೋರ್ಗರೆದಿದೆ

ನೆತ್ತರು ನದಿಯಂತೆ ಓಡಿದೆ


ಹೆಸರು ಹಸಿರಾಗೂ ಮುನ್ನ

ಕನಸ್ಸಿನ ಆಸೆಗೆ ಏಕೆ ಗುನ್ನ

ಕನ್ನಡಿಯು ಬಿಂಬವೆ ಮನ್ನಾ

ನಾನೇಗೆ ಮರೆಯಲೇ ನಿನ್ನ


ಬದುಕು ಬೆಳದಿಂಗಳ ಮಾಯೆ

ಮನೆಯಲಿ ಸೂತಕದ ಛಾಯೆ

ಹೆಪ್ಪುಗಟ್ಟಿದೆ ದುಃಖ ಬಾಳಲಿ

ಎಗೆ ಕರಗಿಸಲಿ ನಾ ಕರುಳಿನಲಿ


ಕುಡಿಯೊಂದು ಮಸಣ ಸೇರಿತು

ಮೌನ ನನ್ನ ಮನವ ಕದಡಿತು

ಹೆಮ್ಮರದ ಆಸೆ ಕಡಿದು ಬಿದ್ದಿತು

ಕೈಬಾಚಿ ಕೊನೆ ಉಸಿರ ತೆಗೆಯಿತು


ಮರ ಬಿಕ್ಕಿ ಬಿಕ್ಕಿ ಅಳುತಾ

ಕೊನೆ ಉಸಿರು ಬಿಟ್ಟಿತು

ಬಾಳಲಿ ಬೆಂಡಗಾದೆ ಸೂರು ಕಟ್ಟಿತು

ದೇವರ ಗುಡಿಗೆ ಚಪ್ಪರ ವಾಯಿತು


********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20