ಪಯಣ ಸೋತಿದೆ
.jpeg)
ನೋವು ಏಕೋ ಭಾರವಾಗಿ ಮನಸು ಮೌನವಾಗಿದೆ ಹೃದಯವೇಕೋ ಬಡಿದು ಬಡಿದು ಕಣ್ಣ ನೀರು ಅಳುತಿದೆ ಪಯಣದಲ್ಲಿ ಯಾರಿಗೆ ಯಾರೋ ದಾರಿ ದೂರವಾಗಿದೆ ನಡುವೆ ಬಂದ ಎಡರು ತೊಡರು ದಾರಿ ದೂಡುವಂತಿದೆ ಕಾಣದ ಊರ ನೆನೆದು ನೆನೆದು ಕಾಲ ಏಕೋ ಸೋತಿದೆ ಎದೆಯ ಗಾಯ ಜಿನುಗಿ ಜಿನುಗಿ ದೀಪ ಒಂದು ಉರಿದಿದೆ ಸತ್ತ ಮೇಲೆ ಒತ್ತಿದ ಹಣತೆ ಯಾರಿಗಾಗಿ ಬೆಳಕು ನೀಡಿದೆ ಮಳೆ ಇಲ್ಲದೆ ಬಿತ್ತಿದ ಬೀಜ ಮಣ್ಣಿನಲ್ಲಿ ಮಣ್ಣಾಗಿದೆ ಮೂರು ದಿನದ ಬಣ್ಣದ ಬದುಕು ಯಾರಿಗಾಗಿ ಕಾಲ ಕೇಳಿದೆ ನಿನ್ನ ನೀನು ಅರಿತು ಕಲಿತು ಮಾಯವಾಗು ಎಂದಿದೆ ***********ರಚನೆ********** ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ