ಚುಟುಕು ಕವನ -74
ಕುಂಭಮೇಳ
ನಡೆಯಿತು ನಮ್ಮ ದೇಶದಿ ಕುಂಭಮೇಳ
ಸಾಧು ಸಂತ ಅಘೋರಿಗಳ ಜನ ಮೇಳ
ಗಂಗಾ ನದಿಯಲ್ಲಿ ಪುಣ್ಯದ ಸ್ನಾನ
ಪಾಪು ಮರೆಯಾಯಿತು ಗಂಗಾ ಸ್ಥಾನ
ದತ್ತಪೀಠ
ಬಾಬು ಬುಡನ್ ಗಿರಿಯ ದತ್ತಪೀಠ
ಹಿಂದೂ ಮುಸಲ್ಮಾನರ ಧಾರ್ಮಿಕ ಕೂಟ
ಧರಿಸಿದರು ಧರ್ಮದ ಮಾಲೆಯನ್ನು
ಸ್ಮರಿಸಿದರು ದೈವ ಸನ್ನಿಧಿಯನ್ನು
ಗಿರಿ
ನೆಲೆಸಿವೆ ನಮ್ಮಲ್ಲಿ ಹಲವು ಗಿರಿ
ಪುಣ್ಯದ ನೆಲವಂತೆ ಕಲ್ಲತ್ತಿಗಿರಿ
ಧರ್ಮದ ನೆಲೆ ಬಾಬು ಬುಡನ್ ಗಿರಿ
ಹೊಯ್ಸಳರ ದೈವವಂತೆ ಶಕುನಗಿರಿ
***********ರಚನೆ************
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment