ಮಕ್ಕಳ ಗೀತೆ -50
ನೆಗೆದು ನೆಗದು ಜಿಗಿದು ಜಿಗಿದು
ಓಡುತಿರುವೆ ಏಕೆ ಕಂದಮ್ಮ
ಗುಡಿಯಲ್ಲಿ ಗಣಪ ಕಾಯುತಿಹನು
ಬಾರೆ ಹೋಗೋಣ ಚಿನ್ನಮ್ಮ
ನೀರಲ್ಲಿ ಬೆಳಕು ಚುಮ್ಮುತಿಹುದು
ಬಣ್ಣ ಬಣ್ಣದ ನೀರು ಸುರಿಯುತಿಹುದು
ನೋಡಲು ಚಂದ ಬಾರಮ್ಮ
ಕುಣಿದು ಕುಣಿದು ಆಡು ಬಾರೆ ಕಂದಮ್ಮ
ಗಣಪನ ಪೂಜೆ ಮುಗಿದಿಹುದು
ಪಲ್ಲಾರವೆಲ್ಲ ಅಂಚಿಹುದು
ತಿನ್ನುವ ಬಾರೆ ಚಿನ್ನಮ್ಮ
ಜಗಿದು ತಿನ್ನು ಕಂದಮ್ಮ
ಭಾರೆ ಮನೆಗೆ ಹೋಗೋಣ
ಮುದ್ದು ನಗುವಿನ ಕಂದಮ್ಮ
ಮತ್ತೆ ನಾಳೆ ಬರೋಣ
ಗಣಪನ ಪೂಜೆ ಮಾಡೋಣ
**********ರಚನೆ**********
ಡಾ. ಚಂದ್ರಶೇಖರ ಚನ್ನಾಪುರ ಹಾಲಪ್ಪ
Comments
Post a Comment