ಚುಟುಕು ಕವನ -69
ಸಮಾನತೆ
ಬೇಯುತ್ತಿದೆ ಬದುಕಲ್ಲಿ ಅಸಮಾನತೆ
ಎಲ್ಲಿ ಹುಡುಕಲಿ ನಾನು ಸಮಾನತೆ
ಬೊಗಳೆ ಒಡೆಯುತಿಹರು ಜೀವನ ಬೆಂದರು
ಪಾಪಿಗಳನ್ನು ತಂದು ನೆತ್ತರು ಈರುತಿಹರು
ಜಾಗೃತಿ
ಮೊಳಗಲಿ ಬೆಳಗಲಿ ಸ್ವಾತಂತ್ರದ ಜಾಗೃತಿ
ಉಳಿಯಲಿ ಬೆಳೆಯಲಿ ಹಿಂದುಗಳ ಸಂತತಿ
ತೊಲಗಲಿ ತೊಲಗಲಿ ಜಾತಿ ವೈಶಮ್ಯ
ನಾವು ಒಂದೇ ಎನ್ನುವುದು ಬಾಳಲಿ ಗಮ್ಯ
ಪ್ರಯತ್ನ
ಬಿಡದೆ ಮಾಡು ಬದುಕಲಿ ಪ್ರಯತ್ನ
ಸಿಕ್ಕೆ ಸಿಗುವುದು ನಿನಗೆ ಮುತ್ತು ರತ್ನ
ಕಳೆದುಕೊಳ್ಳದಿರು ಪ್ರೀತಿ ಸಹನೆಯನ್ನ
ಗೆದ್ದೆ ಗೆಲ್ಲುವ ನೀನು ಬರೆದಿಡು ಚಿನ್ನ
***********ರಚನೆ************
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment