ಚುಟುಕು ಕವನ-66
ಧರ್ಮ
ಮನುಜ ನೀನು ಕೊಲ್ಲಬೇಡ ಧರ್ಮ
ಸುಟ್ಟುಬಿಡು ನಿನ್ನ ದ್ವೇಷದ ಕರ್ಮ
ವಿಧಿ ಆಟ ಯಾರಿಗೂ ತಿಳಿಯದ ಮರ್ಮ
ಕೊಳೆತು ನಾರುವುದು ನಿನ್ನ ಮಾಂಸದ ಚರ್ಮ
ತತ್ವ
ಪ್ರೀತಿ ಪ್ರೇಮ ಸಾರಿದ ಜೀವನದ ಬಾಳು ತತ್ವ
ಮರೆಯಬೇಡ ಮನುಜ ನೀ ನಮ್ಮ ಮಾನವತ್ವ
ಮೆರೆದು ಬಾಳಬೇಡ ಬದುಕಲ್ಲಿ ಮನುಜ ಪತ್ವ
ಮನಸ್ಸು ಸಂಚಲನ ಜೀವನ ನಡೆಯಲಿ ದಿತ್ವ
ಹಿಂದುತ್ವ
ಮಾನವನ ನೀನು ಹುಡುಕು ಸಿಂಧುತ್ವ
ಮನ ಮನೆಯಲ್ಲಿ ಬೆಳಗಲಿ ಹಿಂದುತ್ವ
ನಾವೆಲ್ಲರೂ ಒಂದೇ ಎನ್ನುವುದು ಬಂದುತ್ವ
ಸಮಾನತೆಯಲ್ಲಿ ಸಾಗೋಣ ಅದೇ ಮಾನವತ್ವ
**********ರಚನೆ**********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment