ಚುಟುಕು ಕವನ -67
ರಾಷ್ಟ್ರ
ನಮ್ಮ ರಾಷ್ಟ್ರ ಭಾರತ
ನಾವೆಲ್ಲ ಒಂದೇ ಎನ್ನುತ್ತಾ
ಜಾತಿ ಭೇದ ಮರೆಯುತ
ಸಾಗೋಣ ನಾವು ಹಿಂದೂ ಧರ್ಮ ಸಾರುತ
ಸಾಮರಸ್ಯ
ಬದುಕೋಣ ಬಾಳಲಿ ಸಾಮರಸ್ಯದಿ ನಾವು
ಕಿತ್ತಾಡದಿರೋಣ ಹಾವು ಮುಂಗುಸಿಯಂತೆ ನಾವು
ಬಾಳೋಣ ದ್ವೇಷ ಅಸೂಯೆ ಮರೆತು ನಾವು
ಬನ್ನಿ ಎಲ್ಲ ಒಂದೆ ಎನ್ನುತ ಬದುಕೋಣ ನಾವು
ಸ್ವಾತಂತ್ರ್ಯ
ಬಂತು ನಮಗೆ ಬ್ರಿಟಿಷರಿಂದ ಸ್ವಾತಂತ್ರ
ಬಾಳು ಆಗದೆ ಉಳಿಯಿತು ಅತಂತ್ರ
ಬಿಟ್ಟು ಹೋಯಿತು ಬಾಳಲಿ ಪರತಂತ್ರ
ಜೀವ ಕಸಿಯಿತು ಮೋಸದ ಕುತಂತ್ರ
Comments
Post a Comment