ಚುಟುಕು ಕವನ-75

 


ಸರಳ 

ಜೀವನವೆಂಬುದು ತಿಳಿ ನೀ ಬಲು ಸರಳ 

ಕಷ್ಟ ಸುಖ ಅರಿತು ಬಾಳು ನೀ ಮರುಳ 

ಬದುಕು ಏಳು ಬೀಳು ತಿಳಿ ನೀನು ದುರುಳ 

ಬದುಕನ್ನು ಸವಿದವರು ಏಕೋ ಅತಿ ವಿರಳ 

ಜನತೆ 

ಜೀವನದ ಹಂಗು ತೊರೆದು ಜೀವಿಸುವ ಜನತೆ 

ಬಾಳ ಪಯಣ ಬಲು ಕಷ್ಟ ಬಾಳು ಘನತೆ 

ಬಿದ್ದವರು ಎಳುವರು ತಿಳಿದು ನಡೆ ನಿನ್ನಂತೆ

ತಗ್ಗಿ ಬಗ್ಗಿ ನಡೆಯುವುದು ಬಲು ವಿನಯತೆ 

ಜನನ 

ಬಾಳಿನಲ್ಲಿ ಬರುವುದು ಒಮ್ಮೆ ಜನನ 

ಸತ್ತ ಮೇಲೆ ಆಗುವುದು ನಿನ್ನ ಮರಣ 

ಮೂರು ದಿನದ ಈ ಬಾಳು ಒಂದು ಪಯಣ 

ಬದುಕಿನಲ್ಲಿ ಬಾಳು ನೀನು ಓ ತರುಣ

************ರಚನೆ**************

ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ

Comments

Popular posts from this blog

ಶಿಶು ಗೀತೆ -9

ಸಂತೋಷವಾಗಿರಲು ಪ್ರಯತ್ನಿಸೋಣ

ಚುಟುಕು ಕವನ-35