ಚುಟುಕು ಕವನ -71
ಧರ್ಮಸ್ಥಳ
ಧರ್ಮಸ್ಥಳದಲ್ಲಿ ಸುಮ್ಮನೆ ಬುರುಡೆ ಬಂತು
ಟಿವಿ ತುಂಬಾ ಜನರಿಗೆ ಕುತೂಹಲ ತಂತು
ಧರ್ಮ ಅಧರ್ಮಗಳ ಮುಂದಿನ ಲೆಕ್ಕಾಚಾರ
ಮಂಜುನಾಥನಿಗೆ ಇವರು ಮಾಡುವ ಅಪಚಾರ
ಚಿಂತನೆ
ಎಲ್ಲಿ ನೋಡಿದರೂ ಬುದ್ಧಿಜೀವಿಗಳ ಚಿಂತನೆ
ಲೆಕ್ಕಕ್ಕೆ ಬಾರದ ಮಾತುಗಳ ಮಂತನೆ
ನ್ಯಾಯ ನೀತಿಗಳ ಸುಮ್ಮನೆ ಬೋಧನೆ
ಆಚರಿಸದ ಪೊಳ್ಳುಬರವಸೆಗಳ ರೋಧನೆ
ಕುಟುಂಬ
ಎಲ್ಲಿ ಕಾಣೆಯಾಗಿದೆ ತುಂಬು ಕುಟುಂಬಗಳು
ಟಿವಿಯಲ್ಲಿ ಕಾಣುತ್ತಿವೆ ವಸುದೈವ ಕುಟುಂಬಗಳು
ಮನೆಗಳು ಉರಿದಿವೆ ಹಣದ ವ್ಯಾಮೋಹದಲ್ಲಿ
ಸಂಸಾರಗಳು ಬೀದಿಗೆ ಬಂದಿವೆ ಹಿರಿಯರ ನೋವಿನಲ್ಲಿ
Comments
Post a Comment