ಚುಟುಕು ಕವನ-68
ದೇಶಭಕ್ತಿ
ಬನ್ನಿ ಎಲ್ಲರೂ ಒಟ್ಟಿಗೆ ದೇಶಭಕ್ತರಾಗೋಣ
ನಮ್ಮ ದೇಶವ ಭವ್ಯ ನಾಡು ಮಾಡೋಣ
ದೇಶದ ಏಳಿಗೆಗೆ ಹಗಲು ರಾತ್ರಿ ದುಡಿಯೋಣ
ನಮ್ಮ ಸಂಸ್ಕೃತಿಯನ್ನು ವಿಶ್ವಕ್ಕೆ ಸಾರೋಣ
ಸಂಘ
ನಾಡು ನುಡಿಯ ಬೆಳಗಲು ಕಟ್ಟಬೇಕು ಸಂಘ
ಮೋಸ ಅನ್ಯಾಯಗಳನ್ನು ಕಿತ್ತು ಹಾಕು ರಂಗ
ಸತ್ಯ ಅಹಿಂಸೆಯ ಮಾಡಬೇಡ ಮಾನಭಂಗ
ಸೂರ್ಯ ಚಂದ್ರರ ಸಾಯಿಸುವರು ಯಾರು ಗಂಗ
ಸಾವರ್ಕರ್
ಸಾವರ್ಕರ್ ಆರ್ ಎಸ್ ಎಸ್ ಸಂಘದ ಧೀರ
ನಾಡು ನುಡಿಯ ಕಟ್ಟಿದ ಮಹಾನ್ ಶೂರ
ಭವ್ಯ ಭಾರತದ ಕನಸಿನ ಕಣ್ಮಣಿ ಕುವರ
ಇಂದು ಅವರ ಸಾಧನೆ ಜಗದಲ್ಲೆಡೆ ಅಮರ
**********ರಚನೆ**********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment