ಚುಟುಕು ಕವನ -70
ಬದ್ಧತೆ
ಬದುಕಿನಲ್ಲಿ ಇರಬೇಕು ನಮಗೆ ಬದ್ಧತೆ
ಸರಿಯಾಗಿ ನಡೆಸಬೇಕು ನಾವು ಸಿದ್ಧತೆ
ಅರಿಯಬೇಕು ನಾವು ಕಲಿಕೆಯ ದೃಢತೆ
ವಿನಯದಿಂದ ಅರಿಯೋಣ ನಾವು ನಮ್ರತೆ
ನಿರಂತರ
ಹರಿವ ನದಿಯು ಸಾಗುವುದು ನಿರಂತರ
ಬದುಕಿನಲ್ಲಿ ಕಡಿಮೆ ಇರಲಿ ಅವಾಂತರ
ಕೆಟ್ಟವರೊಡನೆ ಇರಲಿ ಬಾಳಲಿ ಅಂತರ
ನಗುವ ಮಗುವು ನೋವಿನಲ್ಲು ಸುಂದರ
ಆಪರೇಷನ್ ಸಿಂಧೂರ
ಭಾರತದ ಸೈನಿಕರು ನಡೆಸಿದರು ಆಪರೇಷನ್ ಸಿಂಧೂರ
ಉಗ್ರರ ಸದೆಬಡಿದರು ಸಾಗಿ ಬೆಟ್ಟ ಗುಡ್ಡದ ಕಂದರ
ಮೋಸ ಅನ್ಯಾಯಗಳ ತೊರೆದು ನೋಡು ಜೀವನ ಸುಂದರ
ಉಗ್ರಗಾಮಿಗಳ ಬದುಕಿನಲ್ಲಿ ಸಾವು ಬರುವುದು ನಿರಂತರ
**************ರಚನೆ*************/
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment