ಚುಟುಕು ಕವನ -65
ಗಣೇಶ
ನಮ್ಮೂರಿಗೆ ಬಂದ ಮುದ್ದು ಗಣೇಶ
ಆರತಿ ಎತ್ತಿ ಇವನಿಗೆ ಶಿವನೇ ಪ್ರಾಣೇಶ
ಯಾರು ಹೆತ್ತರು ಇವನ ಹೇಳು ಪರಮೇಶ
ಸೊಂಡಿಲ ಗಣಪನಿಗೆ ನಮಿಸು ನೀ ಈಶ
ಚಂಡೆ
ಚಂಡೆ ಮದ್ದಳೆ ಬಡಿದು ಗಣಪನ ಸ್ವಾಗತಿಸು
ಪೂಜೆ ಪುರಸ್ಕಾರ ಮಾಡಿ ನೀ ನಮಿಸು
ಭಕ್ತಿಯಲ್ಲಿ ಬೇಡಿ ಗಣಪನ ಪೂಜಿಸು
ಮೋಸ ವಂಚನೆಯ ಬಾಳಲ್ಲಿ ನೀ ತ್ಯಜಿಸು
ಹುಲಿ ಕುಣಿತ
ದಾರಿಯಲ್ಲಿ ನೋಡಿದೆ ನಾವು ಹುಲಿ ಕುಣಿತ
ವೇಷ ತೊಟ್ಟಿರುವ ಮೋಸದ ಬಲು ಮೆರೆತ
ಬೆಂಕಿ ಹಚ್ಚಿ ಸುಟ್ಟರು ನ್ಯಾಯದ ಆ ಗಣಿತ
ವಿಕೃತಿಯಲಿ ಹೇಗೆ ನಾ ಬಾಳಲಿ ಸಹಿಸುತ
super
ReplyDelete