ಚುಟುಕು ಕವನ -73
ಸೂರ್ಯ
ಸೂರ್ಯನು ಮೂಡಿಸಿದನು ಬಾಳಲಿ ಬೆಳಕು
ತೊಲಗಿಸಿದನು ಬದುಕಿನ ಚಿಂತೆ ಕೊಳಕು
ಬೆರೆಸಿದನು ಪ್ರೀತಿ ಮಮತೆಯ ಹೊಳಪು
ಬೆಳೆಸಿದನು ನವ ಉಲ್ಲಾಸದ ಉರುಪು
ದೈವ
ಬಾಳನು ಬೆಳಗಿಸಿದ ಪ್ರೀತಿ ಹಣತೆ ದೈವ
ಉಲ್ಲಾಸದ ಚಿಲುಮೆಯ ನಾಡು ಭವ್ಯ
ಮನೆಮನ ಬೆಳಗಲಿ ಶಾಂತಿಯ ನೋಟ
ಅರಳಲಿ ಬಾಳಲಿ ನಮ್ಮಯ ಕನಸಿನ ಓಟ
ಅಯೋಧ್ಯ
ಅಯೋಧ್ಯೆಯಲ್ಲಿ ರಾಮನಿಗೆ ಮಂದಿರ
ಮೂಡಿದ ಜೀವನದಿ ಹುಣ್ಣಿಮೆ ಚಂದಿರ
ಹೊಸತನ ಅರಳಲಿ ಚುಮ್ಮುತ ಪ್ರೇಮ
ನೋವು ನಲಿವು ಎಲ್ಲಾ ನೀನೇ ರಾಮ
*************ರಚನೆ************
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment