ಚುಟುಕು ಕವನ
ಮಾತಾಡು
ಮೌನ ಮುರಿದು ನೀನು ಒಮ್ಮೆ ಮಾತಾಡು
ಜೀವನ ಏಳು ಬೀಳು, ಒಮ್ಮೆ ಸವಿದು ನೋಡು
ಪ್ರೀತಿಯು ಹರಿವ ನೀರಿನಂತೆ ಒಮ್ಮೆ ಕುಡಿದು ಬಿಡು
ನೋವು ಬರಡು ನೆಲದಂತೆ ಒಮ್ಮೆ ಅತ್ತುಬಿಡು
ಕುಣಿದಾಡು
ನಲ್ಲೆ ನೀನು ಮನಸಾರೆ ಕುಣಿದಾಡು
ಒಲವ ತೂಗುಯ್ಯಾಲೆಯಲ್ಲಿ ಜೋತಾಡು
ಕಷ್ಟಸುಖದಲ್ಲಿ ಬಿದ್ದು ಒದ್ದಾಡು
ಜೀವನದ ಚಿಂತೆಯ ಮರೆತು ಬಿಡು
ಹೂದೋಟ
ನಮ್ಮ ಮನೆಯಲ್ಲೊಂದು ಹೂದೋಟ
ಹಕ್ಕಿ ಪಕ್ಷಿಗಳ ಪ್ರೀತಿಯ ಹಾರಾಟ
ಹಸು ಕರುಗಳ ಪ್ರೀತಿ ನುಗ್ಗಾಟ
ನಾಯಿ ಮರಿಗಳ ಹಸಿದ ರಂಪಾಟ
ಮನಸಾರೆ
ಹುಡುಗಿ ಪ್ರೀತಿಸುವೆ ನಿನ್ನ ಮನಸಾರೆ
ನನ್ನ ಬದುಕು ದಾರಿಯಲ್ಲಿ ಕನಸಾರೆ
ಕಷ್ಟ ಸುಖಗಳ ಮರೆತು ಪ್ರೀತಿ ಸಾರೇ
ಜೀವನದ ದೋಣಿಯಲ್ಲಿ ಸಾಗು ಹುಷಾರೆ
********ರಚನೆ*********
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment