Posts

Showing posts from August, 2022

ವಿಘ್ನ ವಿನಾಯಕ

Image
ಬಾಳುವ ಬದುಕಿನಲಿ ಜೀವನ ಪಾವನ  ಕೈಮುಗಿದು ಬೇಡು ಸೊಂಡಿಲ ಗಣೇಶನ ಮೊಗದಲ್ಲಿ ಮಂದಹಾಸ ಮೂಡಿ ನಗುವಿನಲಿ ಹರಿವ ನದಿ ಓಡಿ ಕೆನ್ನೆಯಲಿ ಕೆಂಪು ನೆಲದ ಕಂಪು ಮೂಗಿನಲಿ ಆನೆ ಸೊಂಡಿಲ ತಂಪು ಇಲಿ ಏಕೆ ನಿನ್ನ  ಹೊರುವ ವಾಹನ ಕೂರಲು ನಿನಗೆ ಬೇಕು ಸೋಪಾನ ವಿದ್ಯೆಗೆ ನೀನೆ ಅಧಿಪತಿ ಗಣಪ ಹಿಡಿದು ಬೇಡಬೇಕು ಸ್ಲೆಟು ಬಳಪ ಶಿವ ಪರ್ವಾತಿಯ ಪುತ್ರ ನೀನು ಬೇಡಿದನ್ನು ನೀಡುವ ಪಾಪ ನಾಶಕ ನೀನು ನಮ್ಮ ಊರಿಗೆ ಗಣಪ ಬಂದ ವಿಘ್ನ ವಿನಾಶಕ ವಿನಾಯಕ ಬಂದ ,ಅಂಬಾರಿ ಏರಿ ಮೋದಕ ಬಂದ ಆಸೆ ಇಡೆರಿಸುವ ಗಜಾನನ ಬಂದ  ಮಣ್ಣಿನಲಿ ನಿನ್ನ ಆಕಾರ ಮಾಡಿ ಹೊನ್ನಿಗಾಗಿ ನಿನ್ನ ಮಾರಾಟ ಮಾಡಿ ಗಂಧ ಕರ್ಪೂರದ ಆರತಿ ಮಾಡಿ  ಭಕ್ಷ ಭೋಜನ  ನೈವೇದ್ಯ ಮಾಡಿ  ನೀರಿನಲ್ಲಿ ಮುಳಿಗಿಸುವರು ನೋಡಿ ಜೀವವಿರದ ಗೊಂಬೆ ನಿನ್ನ ಪಾಡು ಭಕ್ತಿಯಲಿ ಬೇಡುವರು ನಿನ್ನ ನೋಡು ನಿನ್ನ ಹಬ್ಬ ಮುಗಿದ ಮೇಲೆ  ಕೇಳುವವರು ಇಲ್ಲ ನಿನ್ನ ಪಾಡು ನೀರಿನಲ್ಲಿ ಕರಗಿದ ಮಣ್ಣು ನೀನು ನೋಡು ಗಣೇಶನ ಹಬ್ಬದ ಶುಭಾಶಯಗಳು ಎಲ್ಲರಿಗೂ  ************ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಕಾಮನ ಬಿಲ್ಲು ನೀನು

Image
 ಬರವಣಿಗೆ ಸಿಗದ ಪದ ಪುಂಜ ನೀನು ಪದಗಳಿಗೆ ನಿಲುಕದ ಚೆಂದದ ಕವನ ನೀನು ಕನಸ್ಸಿನ ಸಂತೆಯಲಿ ಅರಳಿದ ಹೂವು ನೀನು ಬಿಸಿಲ ಮಳೆಯಲಿ ಮೂಡಿದ ಕಾಮನಬಿಲ್ಲು ನೀನು ಹೇಗೆ ವರ್ಣಿಸಲಿ ನಿನ್ನ ಹೊಳೆವ ಆ ಬಣ್ಣ ಕದಡಿದ ನೀರಲ್ಲಿ ಕಾಣುವ ಪ್ರತಿಬಿಂಬ ಬಣ್ಣ ಮರೆತರು ನೆನಪಾಗೋ ನಿನ್ನ ಕೆಂಪು ವರ್ಣ ಹಾರಿ ಹೂವು ಹುಡುಕುವ ಬಯಕೆಯ ಚಿಟ್ಟೆ ಬಣ್ಣ ಹರಿವ ನೀರಲ್ಲಿ ಮನಸ್ಸು ಹರಿದು ಬಂದು ಕಾಣದ ಕಡಲಲಿ ಮುಳುಗಿ ಮುಳುಗಿ ಮಿಂದು ಕಡಲ ತಡಿಗೆ ಅಪ್ಪಳಿಸಿ ದಡಕೆ ಬಂದು ಸೋಕಿದ ನಿನ್ನಯ ಪಾದಕೆ ತನ್ನ ತಾನೇ ಕೊಂದು ಸಂಜೆ ಸೂರ್ಯ ಮುಳುಗುತಾ ನಕ್ಕಂತೆ ಉದಯಿಸುವ ಚಂದ್ರ ಬಾ ಎಂದು ಕರೆದಂತೆ ನಕ್ಷತ್ರಗಳ ಗೂಡಿನಲಿ ಬಾಳು ಬೆಳಕಂತೆ ನೀಲಿ ಆಕಾಶದಲಿ ನಾ ತೇಲಿ ನನ್ನೆ ನಾ ಮರೆತಂತೆ *************ರಚನೆ ******    ಡಾ. ಚಂದ್ರಶೇಖರ. ಸಿ. ಹೆಚ್

ವಚನಗಳು -35

Image
ಲಿಂಗವನು ದಿನ ಪೂಜಿ ಲಿಂಗವನು ದಿನ ನೆನೆದು ಲಿಂಗವನು ದಿನ ನೋಡಿ ಕಾಯಕವೆಂಬ ಲಿಂಗವ ಶ್ರದ್ದೆಯಲಿ ಮಾಡು ಒಲಿವನು ನೋಡು ನಮ್ಮ ಬಸವಣ್ಣ ಇಟ್ಟ ವಿಭೂತಿ ಆಣೆಯಲಿ ಹುಟ್ಟು ಭೇದದ ಜ್ಯಾತಿ ನೆಲೆಯಲಿ ನಾಸ್ತಿಕನಾದೊಡೆ ಮನದ ಮನೆಯಲಿ ಕಾಯಕದಿ ಪಾಪವ ತೊಳೆ ನಮ್ಮ ಬಸವಣ್ಣ ಐಶ್ವರ್ಯ ಬಂದಾಗ ಅಹಂಕಾರ ಬೇಡ ಮನದಿ ಲಿಂಗವ ಜರಿವ ನಡೆಬೇಡ ಪಾಪದಿ ಮನವ ದಿನ ಸುಡಬೇಡ  ಕಾಯಕವೇ ಕೈಲಾಸ ಇದು ಮರೀಬೇಡ ನಮ್ಮ ಬಸವಣ್ಣ ***********

ವಚನಗಳು -34

Image
ಹೂವು ಮಲ್ಲಿಗೆಯಾದರೇನು ಹೂವು ಸಂಪಿಗೆಯಾದರೇನು ಹೂವು ಗುಲಾಬಿಯಾದರೇನು ಸುವಾಸನೆಯು ಜಾತಿ ಕೇಳುವುದೇ ಜಾತಿಯ ಮೀರಿ ನಿಂತಿಹುದು ಕಾಯಕದ ನೆಲೆಗಟ್ಟು ನಮ್ಮ ಬಸವಣ್ಣ ಮೋಡದಿ ಮಳೆ ಸುರಿದು ಊರ ಎಲ್ಲಾ ನೆರೆಯಾಗಿ ಹುಲ್ಲು ಬಾಯತೆರೆದಿರಲು ಶಿವನ ಬೇಡುವುದೇ ಕಾಯಕವ ನೋಡ ನಮ್ಮ ಬಸವಣ್ಣ ಓದಿ ವಾದವ ಮಾಡುತಾ ಅಂಗಿನ ಗಾದೆಯ ಹೇಳುತಾ ವೇದ ಪುರಾಣಗಳ ಸಾರುತ ಇಂಗು ತಿಂದ ಮಂಗನಂತೆ ಕಾಯಕವ ಮಾಡಿದರೆ ಫಲವೇನು ನಮ್ಮ ಬಸವಣ್ಣ **********************ರಚನೆ ************             ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -32

Image
ಸುಳ್ಳು ನುಡಿವವರಿಗೆ ಕಾಲ, ಮೋಸಕೆ ಕಾಲ ಕೆಡುಕು ಮಾಡುವವರಿಗೆ ಕಾಲ, ಅನ್ಯಾಯಕೆ ಕಾಲ ಧರ್ಮದಿ ನಡೆವವರಿಗೆ ಅಧರ್ಮವು ಕಾಡಿಹುದು ಶ್ರದ್ದೆಯಲಿ ಮಾಡುವ ಕಾಯಕವು ಧರ್ಮ ನೋಡ ನಮ್ಮ ಬಸವಣ್ಣ ಪೂಜೆ ಮಾಡುವವನ ಮನದಿ ಕಡು ಮೋಸ ಹೇಳುವ ಮಂತ್ರದಿ ನೂರೆಂಟು ಮಾಟ ಪಾಪದ ಮನದ ಮನೆಯಲಿ ಪೂಜಿಸುವನು ಹೊಲೆಯ ಕಾಯಕದಿ ಶ್ರದ್ದೆ ಪಾಪಿಗೂ ಕೈಲಾಸ ಕಾಣ ನಮ್ಮ ಬಸವಣ್ಣ ಮೌನದಿ ಮಾಡುವ ಕೆಲಸ ಜ್ಞಾನದಿ ತಿಳಿದ ವಿದ್ಯೆ ಸ್ವಾಭಿಮಾನದಿ ಬೆಳಗುವ ಜ್ಯೋತಿ ಕಾಯಕದಿ ನೀಡುವ ಸುಖವು ಸ್ವರ್ಗ ನಮ್ಮ ಬಸವಣ್ಣ *************ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್ 

ವಚನಗಳು -33

Image
ಆಕಾಶದಿ ಮನೆಯ ಮಾಡಿ ನಕ್ಷತ್ರಗಳ ಸಾಲು ಹಾಕಿ ಚಂದ್ರನ ಬೆಳಕು ಚೆಲ್ಲಿ ಪಾಪಿಗೆ ಕಾಯಕವುಮಸಣ ನೋಡ ನಮ್ಮ ಬಸವಣ್ಣ  ಪರ್ವತವ ಏರಿದೊಡೆ ಶಿವ ಕಾಣುವನೇ ಗಂಗೆಯನು ಪೂಜಿದೊಡೆ ಶಿವ ಕಾಣುವನೇ   ಸರ್ವಂತಯಾರ್ಮಿ ಶಿವನು ನೆಲೆ ನಿನ್ನೊಳಗೆ ಕಾಯಕದಿ ಪೂಜು ಶಿವನ ನಮ್ಮ ಬಸವಣ್ಣ ಉಪ್ಪಿನಕಾಯಿ ಇಲ್ಲದ ಊಟ ಭಕ್ತಿಯೇ ಇಲ್ಲದ ಪೂಜೆ ಮಡಿ ಇಲ್ಲದವಳ ಮನೆವಾರ್ತೆ ಕಾಯಕವ ಮಾಡದ ಕರ್ಮಿಯ ಲಿಂಗ ಮೆಚ್ಚ ನಮ್ಮ ಬಸವಣ್ಣ **************ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್ 

ನಲ್ಲ ನಾನಾಗಲೇ

Image
ಹುಡುಗಿಯ ನೋಡಿದ ಮನ ಕುಣಿಯಿತು ಹೀಗೆ ಪ್ರತಿ ದಿನ ಸೊಗಸಿನ ಸೌಂದರ್ಯಕೆ ಜನ್ಮ ಜನ್ಮದ ನಲ್ಲ ನಾನಾಗಲೇ  ಓ ಗೆಳತಿ ಆ ನಿನ್ನ ಶ್ವಾಸದಿ ಉಸಿರು ನಾನಾಗಲೇ ಆ ನಿನ್ನ ಹೃದಯದಿ ಹರಿವ ರಕ್ತ ನಾನಾಗಲೇ ಆ ನಿನ್ನ ಕೆಂಪು ತುಟಿಗೆ ಲಿಪ್ಸ್ಟಿಕ್ ನಾನಾಗಲೇ ನಿನ್ನ ಹೊಳೆವ ಕಣ್ಣ ರೆಪ್ಪೆಗೆ ಕಾಡಿಗೆ ನಾನಾಗಲೇ ನಿನ್ನ ಸುಂದರ ಕೆನ್ನೆಗೆ ಪೌಡರ್ ನಾನಾಗಲೇ ನಿನ್ನ ಆ ಕುಂಚದ ಜಡೆಗೆ ಮಲ್ಲಿಗೆ ಹೂವು ನಾನಾಗಲೇ ನಿನ್ನ ಮೈಮಾಟಕೆ ಸೆಳೆವ  ಹಸಿರು ಸೀರೆ ನಾನಾಗಲೇ ನಿನ್ನ ಕೈಗಳಲಿ ಮಿನುಗುವ ಬಳೆ ನಾನಾಗಲೇ ಕಾಲ ಬೆರಳಿಗೆ ಪೋಣಿಸಿದ ಕಾಲುಂಗುರ ನಾನಾಗಲೇ ನಿನ್ನ ಕಾಲಲಿ ಘಲ್ಲ ಎನ್ನುವ  ಗೆಜ್ಜೆ ನಾನಾಗಲೇ ಗೆಳತಿ ಕುಣಿವ ಮನದಿ ನಿನ್ನ ಬಯಸಿ ನಿನ್ನ ಒಲವ ಚೆಲುವಿಗೆ ಸುಂದರ ಸೊಬಗಿನಾ ಗುಣಕೆ ಸವಿ ನೋಟದ ಮಾತಿಗೆ  ಸೋತು ನಲ್ಲ ನಾನಾಗಲೇ **********ರಚನೆ **********      ಚಂದ್ರಶೇಖರ. ಸಿ. ಹೆಚ್

ಓದಿದ್ದು ಜ್ಞಾಪಕದಲ್ಲಿ ಇಟ್ಟು ಕೊಳ್ಳುವುದು ಹೇಗೆ

Image
  ಗೆಳೆಯರೆ ಎಲ್ಲರಿಗೂ ಓದಬೇಕು ಎನ್ನುವ ಹಂಬಲವಿರುತ್ತದೆ, ಆದರೇ ಓದಿದ್ದು ಹೆಚ್ಚು ಸಮಯ ಜ್ಞಾಪಕದಲ್ಲಿ ಇರುವುದಿಲ್ಲ. ನಮಗೆ ಓದು ಎನ್ನುವುದು ಒಂದು ಫನ್ ಹಾಗಬೇಕು ಮತ್ತು ನಾವು ಓದುವ ಕಾರಣ ತಿಳಿದಿರಬೇಕು ಈ ಕೆಲವೊಂದು ಮೂಲಭೂತ ಕಾರಣಗಳು ನಮ್ಮ ಓದನ್ನು ತಿಳಿಸುತ್ತವೆ. 1) ವಿಷಯಗಳನ್ನು ಚೆನ್ನಾಗಿ ಗ್ರಹಿಸುವುದು 2) ಪ್ರಮುಖ ವಿಷಯಗಳನ್ನು ಕಲೆ ಹಾಕುವುದು 3) ನಿರ್ದಿಷ್ಟ ಪ್ರಶ್ನೆಗೆ ಉತ್ತರ ನೀಡುವುದು 4) ನಮ್ಮ ಓದನ್ನು ಮೌಲ್ಯಮಾಪನ ಮಾಡುವುದು 5) ಓದಿದ್ದನ್ನು ಅನ್ವಯಿಸಬೇಕು  6) ನಾವು ಮನರಂಜನೆ ಪಡೆಯಲು ಹಾಗೆಯೇ ಯಾವುದೇ ಪುಸ್ತಕವನ್ನು ಸುಲಭವಾಗಿ ಓದಲು ಈ ಮೂರು ವಿಧಗಳಿವೆ. 1) ತ್ವರಿತ ಉಲ್ಲೇಖದಿಂದ ಓದುವುದು (Quick reference reading ) 2) ವಿಮರ್ಶತ್ಮಕ ಓದುವಿಕೆ (Critical reading ) 3) ಆನಂದಕ್ಕಾಗಿ ಓದುವುದು (Pleasure reading ) ಓದುವುದನ್ನು ನಾವು ಕೆಲವೊಂದು ಉಪಾಯದಿಂದ ಓದುವುದು ಅಗತ್ಯ. 1) ಪುಸ್ತಕದಲ್ಲಿ ಇರುವ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವುದು 2) ಪಠ್ಯದ ರಚನೆಯನ್ನು ತಿಳಿಯುವುದು 3) ಪ್ರಶ್ನೆ ಕೇಳುವುದು ನಮ್ಮ ಓದನ್ನು ತಿಳಿಯಲು 4) ಪಠ್ಯವನ್ನು ಅರ್ಥ ಮಾಡಿಕೊಂಡ ನಂತರ ಮತ್ತೊಂದು ವಿಭಾಗಕ್ಕೆ ಹೋಗುವುದು 5) ತತ್ ಕ್ಷಣವೆ  ಓದಿದ್ದನ್ನು ಸಾರಾಂಶ ಬರೆಯುವುದು ಇವೆಲ್ಲಾ ಕ್ರಮಗಳು ನಾವು ಓದಿರುವ ಪಠ್ಯವನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತವೆ. ಪಠ್ಯವನ್ನು ಜ್ಞಾಪಕದಲ್ಲಿ ಇಡುವುದು ಬಹಳ ಅವಶ್ಯ

ಹೇ ಹುಡುಗ

Image
  ಹೆ ಹುಡುಗ ಒಲವಾಗೋ ಮುನ್ನ  ಸೆರೆಯಾದೆನು ನಾ ನಿನ್ನ ನೋಟದಿ ಹೇ ಹುಡುಗ  ಹರಿವ ನದಿಯದೇನು ನಾ ನಿನ್ನ ಹೃದಯದಿ ಹೇ ಹುಡುಗ  ಕಣ್ಣಸೆಳೆತೆಕ್ಕೆ ಸಿಕ್ಕು ಬಲಿಯಾದೇನು ನಾ ಕಣ್ಣಿರಲಿ ಬೆರೆತೋದೇನು ನಾ ರೆಪ್ಪೆಯ ಒಳಗೆ ಕಾಣೆಯಾದೇನು ನಾ ಹೆ ಹುಡುಗ ಕನಸ್ಸುಗಳ ಸವಿ ಮೊಗ್ಗದೇನು ನಾ ಮನದಿ ಅರಳಿದ ಪ್ರೀತಿಗೆ  ಹೂವಾದೇನು ನಾ ಗೆಜ್ಜೆ ಸದ್ದು ನನ್ನಲಿ ಕುಣಿವ ಆಸೆ ತಂದಿದೆ ನಿನ್ನ ಸೆಳೆತ ನನ್ನ ಕರೆದು ನೀನೆ ನನ್ನ ಉಸಿರು ಎಂದಿದೆ ಹೆ ಹುಡುಗ ಬಾನಂಗಳದಿ ನಕ್ಷತ್ರ ನಗುತಿದೆ ಬಳಿ ಬಾ ನೀನು ಎನುತಿದೆ ಅಗಸವು ಕೈ ಚಾಚಿ ಚಂದ್ರನ ಕರೆದಿದೆ ಹೇ ಹುಡುಗ ನನ್ನಾಸ್ಸೇ ನೀನೆ ಗೆಳೆಯ ಕನಸಾಗು ಬಂದ ಒಡೆಯ ನಸು ನಕ್ಕು ಕರೆದ ಹೃದಯ ನನ್ನ ಒಲವು ನೀನೆ ಇನಿಯ ಹೆ ಹುಡುಗ ಒಲವಾಗೋ ಮುನ್ನ  ಸೆರೆಯಾದೇನು ನಾ ನಿನ್ನ ನೋಟದಿ ಹರಿವ ನದಿಯದೇನು ನಾ ನಿನ್ನ ಹೃದಯದಿ ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ವಚನಗಳು -31

Image
ದುರ್ಜನರ ಸಂಗವ ತೋರೆದೆ, ಭಕ್ತಿಯಿಲ್ಲದವರ ತೋರೆದೆ ನಿಷ್ಠೆ ಇಲ್ಲದವರ ತೋರೆದೆ, ಕರುಣೆ ಇಲ್ಲದವರ ತೋರೆದೆ ಮಾನವೀಯತೆ ಮರೆತವರ ತೋರೆದೆ. ದುಶ್ಚಟ ದಾಸರ ತೋರೆದೆ ಕಾಯಕವ ಕೈ ಮುಗಿದು ಮಾಡುವರ ತೊರೆಯಲಾಗಲ್ಲಿಲ್ಲ ನಮ್ಮ ಬಸವಣ್ಣ. ಉಣ್ಣುವ ಊಟ ಕಾಯಕವ ಬೇಡಿದೆ ತೋಡುವ ವಸ್ತ್ರ ಕಾಯಕವ ಬೇಡಿದೆ ನೋಡುವ ನೋಟವು ಕಾಯಕಕೆ ಸೋತಿದೆ ಎನ್ನ ಸರ್ವಸ್ವವು ಕಾಯಕದಿ ಮುಕ್ತಿಗೆ ಕಾಡಿದೆ ನಮ್ಮ ಬಸವಣ್ಣ ಸೂರ್ಯನು ಉದಯಿಸಿ ಹಗಲು ಕಳೆದು ಚಂದ್ರನ ಬೆಳಕಿನಲಿ ಇರುಳು ಕಳೆದು ದಿನವೆಂಬ ಕಾಲ ಕಳೆದು ಮರಣ ಸಮೀಪಿಸುವಾಗ ಕಾಯಕದಿ ನಿನ್ನ ನೆನಪಿನ ರಾಶಿ ಉಳಿಸಣ್ಣ ನಮ್ಮ ಬಸವಣ್ಣ *************ರಚನೆ *************** ಡಾ. ಚಂದ್ರಶೇಖರ. ಸಿ. ಹೆಚ್ 

ಸ್ನೇಹ ಎನ್ನಲೇ

Image
ಒಲವಿನ ಹೂವು ನೀನು ಸ್ನೇಹದ ದುಂಬಿಯು ನಾನು ಪ್ರಣಯದಿ ಬೆರೆವ ಕನಸಲಿ ಮರೆವ ಸಿಹಿ ತುತ್ತು ನೀನು ಪ್ರೀತಿಯ ಸವಿಯಲೀ ನಿನ್ನ ನಾ ಕಂಡೆ ಅರಳಿದ ಬಾಳಲಿ ಸವಿ ಬದುಕಲಿ ಮಿಂದೆ ಯಾರನೋ ಬಯಸಿ ಯಾರನೋ ರಮಿಸಿ ಯಾರೋ ಬಂದಾಗೇ ಹೂವಿನ ಬಳಿಗೆ ನೀನು ಹಿರಿದ ಮಕರಂದ ಎಲ್ಲೊ ಸಿಹಿ ಜೇನ ಹಾಗೆ ಮನಸ್ಸಿಗೆ ಮರೆತಹಾಗೆ ನಿನ್ನಲಿ ಕಲೆತ ಹಾಗೆ ಬದುಕಲಿ ಬೇರೆತ ಹಾಗೆ ಕಾಣದ ನೆರೆಳೊಂದು ಬೆಂಬಿಡದೆ ಕಾಡಿದ ಹಾಗೆ ಅರಳುವ ಸ್ನೇಹದ ಹೂವು ನಾನು ಕೇರಳಿ ಕಾಡುವ ದುಂಬಿಯು ನೀನು ಹೇಗೆ ಹೇಳಲಿ ಒಲವೆ ಬೆಳಗ್ಗೆ ಅರಳಿ ನಾ ಸಂಜೆ ಮುದುಡುವ ಚೆಲುವೆ ಯಾರದೋ ಮುಡಿಗೆ ಕಾದಿರೋ ಕಾವ್ಯ ನಾನು ಸಂಜೆ ಕಳೆಯೋ ಒಳಗೆ ಬಾಡಿದ  ಬೆಡಗಿ ನಾನು ಸ್ನೇಹ ಎನ್ನಲೇ ನಾನು ಪ್ರೇಮ ಎನ್ನಲೇ ನಾನು ಮೋಸ ಎನ್ನಲ್ಲೇ ನಿನ್ನ ದ್ರೋಹ ಎನ್ನಲೇ ನಿನ್ನ ಸೂರ್ಯ ಕಂಡ ಮೇಲೆ ಮೈದುಂಬಿ ಅರಳಿ ಚಂದ್ರ ಮೂಡ ಒಳಗೆ ಹೋದೆ ನಾನು ನರಳಿ ಕಾಣದ ಕೈಯೊಂದು ಕೈ ತಾಗಿ ಮರೆತಂತೆ ***********ರಚನೆ ******** ಡಾ ಚಂದ್ರಶೇಖರ. ಸಿ. ಹೆಚ್

ಓದುವುದು ಹೇಗೆ

Image
ಓದುವುದು ಹೇಗೆ, ಇದು ಎಲ್ಲಾ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳಿಂದ ಹಿಡಿದು ಕಾಲೇಜಿನ ವಿದ್ಯಾರ್ಥಿಗಳವರೆಗೂ ಕೂಡ ಕಾಡುವ ಪ್ರಶ್ನೆ ಇದಾಗಿದೆ, ಓದುವ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಹೇಳುತ್ತಾರೆ ನಾನು ದಿನಕ್ಕೆ 5 ತಾಸು ಓದುತ್ತೇನೆ ಆದರಕೂಡ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಏಕೊ ಏನೋ ತಿಳಿಯುತ್ತಿಲ್ಲ ಓದಿರುವುದು ಜ್ಞಾಪಕಕ್ಕೆ ಬರುತ್ತಿಲ್ಲ. ತಂದೆ ತಾಯಿಯರು ತಮ್ಮ ಮಕ್ಕಳ ಬಗ್ಗೆ ಹೇಳುವುದು ಹೀಗೆ, ನನ್ನ ಮಗ ಅಥವಾ ಮಗಳು ಯಾವಾಗಲೂ ಪುಸ್ತಕ ಹಿಡಿದು ನಮ್ಮ  ಕಣ್ಣೆದುರಿಗೆ ಓದುತ್ತಾರೆ ಆದರೂ ಕೂಡ ಶಾಲೆಯಲ್ಲಿ ಅಂಕಗಳು ಕಡಿಮೆ ಬಂದಿರುತ್ತವೆ ಹೀಗೆ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ತುಂಬಾ ಚಿಂತಿಸುತ್ತಾರೆ. ಅವರು ಯಾಕೆ  KAS, IAS ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆಗುವ ಎಲ್ಲರ ಮುಂದಿರುವ ಪ್ರಶ್ನೆ ನಾನು ಓದುವುದು ಸರಿ ಇದೆಯೇ ಮತ್ತು ಪರೀಕ್ಷೆಯಲ್ಲಿ ಉತ್ತಿರ್ಣನಾಗುವುದು ಹೇಗೆ. ಹಾಗಾಗಿ ಈ ಅಂಕಣದಲ್ಲಿ ಓದುವುದು ಹೇಗಿರಬೇಕು ಎಂಬುದರ ಬಗ್ಗೆ ಕೆಲವು ಮಾಹಿತಿಯನ್ನು ತಿಳಿಸುತ್ತಿದ್ದೇನೆ ನೀವು ಈಗಾಗಲೇ KAS, IAS ಪರೀಕ್ಷೆ ಬರೆದವರ ಸಂದರ್ಶನಗಳನ್ನು ನೋಡಿರಬಹುದು ಕೂಡ. ನಾವು ಓದುವ ಮುಂಚೆ ಕೆಲವೊಂದು ಅಭ್ಯಾಸಗಳು ರೂಡಿಯಲ್ಲಿ ಇದ್ದರೆ ಓದುವುದು ನಮಗೆ ಸ್ವಲ್ಪ ಸರಳವಾಗಬಹುದು. 1) ಓದುವ ಮೊದಲು ಮನಸ್ಸು ಶಾಂತವಾಗಿರಬೇಕು 2) ಅದಕ್ಕಾಗಿ ಸ್ವಲ್ಪ ಸಮಯ ವ್ಯಾಯಾಮ ಮತ್ತು ಆಟಗಳನ್ನು ಆಡಿದ ಮೇಲೆ ಓದುವುದು,   ಯಾಕೆಂದರೆ ಏ

ಕೋಮು ದ್ವೇಷ

Image
ಒಳ್ಳೆ ಕೆಲಸ ಮಾಡುವರು ಸಮಾಜಕಾಗಿ ದುಡಿಯವರು ನ್ಯಾಯಕಾಗಿ ಕೂಗುವರು ಬಡವರ ಬಂದುಗಳು ಇವರಯ್ಯ  ಪ್ರೀತಿ ಪ್ರೇಮದಿ ಜನಗಳ ನೋಡುತ ನಗಿಸುವರು ಕಾಣಯ್ಯ  ಕಾಣದ ಸಂಚಿಗೆ ಮೋಸದ ಹೊಡೆತಕ್ಕೆ ನೆತ್ತರಲಿ ಬಿದ್ದಿಹರು ಹೆಣವಾಗಿ ನೋಡಯ್ಯ  ನಡೆದು ಹೋಗೊ ದಾರಿಯಲಿ ಮಲಗಿಹರು ಕೇಳಯ್ಯ  ಸಾವಿನಲ್ಲೂ ರಾಜಕೀಯ ಹೆಣದ ಮುಂದೆ ನಾಟಕೀಯ ಬೇಯಿಸುವರು  ಸಾವಲ್ಲಿ ಬೆಳೆಯ ಹೆತ್ತ ಕರುಳು ಕೂಗುತಿದೆ ಮತ್ತೆ ಬಾ ಎನ್ನುತ್ತಿದೆ ಜೀವ ತಂದು ಕೊಡುವವರು  ಯಾರು ಹೇಳಯ್ಯ  ಹೆಣದ ಮುಂದೆ ರಾಜಕೀಯ ಪೊಳ್ಳು ಬರವಸೆಗಳ ನಾಟಕೀಯ ಹೆತ್ತವರ ಬಿಟ್ಟು ಹೋದ ನಮ್ಮ ಗೆಳೆಯ ಕೋಮು ಗಲಭೆ ಸೃಷ್ಟಿಸಿ ಜೀವವವನ್ನು ತೆಗೆಯವರು ಹಣವ ಸುರಿದು ನೆತ್ತರಿಗೆ ಬೆಲೆಯನ್ನು ಕಟ್ಟೀಹರು ಹೋದ ಜೀವ ಮತ್ತೆ ಬರುವುದೇನಯ್ಯ  ಎತಕಾಗಿ ಈ ಸಾವು ಹೆತ್ತೂರಿಗೆ ಬರಿ ನೋವು ಕೋಮು ದ್ವೇಷದ ಕಾವು ದೇಶವನ್ನು ಸುಡುತಿದೆ ನೋಡಯ್ಯ ಮಾಡುವರು ರಾಜಕೀಯ ಸತ್ತವನಿಲ್ಲಿ ಆಹಾರವಯ್ಯ ದ್ವೇಷ ಬಿತ್ತಿ ರಕ್ತ ಕುಡಿಯುತಿಹರು ಕೆಳ್ಳಯ್ಯ  *****†******ರಚನೆ******** ಡಾ. ಚಂದ್ರಶೇಖರ. ಸಿ. ಹೆಚ್