ವಚನಗಳು -31
ದುರ್ಜನರ ಸಂಗವ ತೋರೆದೆ, ಭಕ್ತಿಯಿಲ್ಲದವರ ತೋರೆದೆ
ನಿಷ್ಠೆ ಇಲ್ಲದವರ ತೋರೆದೆ, ಕರುಣೆ ಇಲ್ಲದವರ ತೋರೆದೆ
ಮಾನವೀಯತೆ ಮರೆತವರ ತೋರೆದೆ. ದುಶ್ಚಟ ದಾಸರ ತೋರೆದೆ
ಕಾಯಕವ ಕೈ ಮುಗಿದು ಮಾಡುವರ ತೊರೆಯಲಾಗಲ್ಲಿಲ್ಲ ನಮ್ಮ ಬಸವಣ್ಣ.
ಉಣ್ಣುವ ಊಟ ಕಾಯಕವ ಬೇಡಿದೆ
ತೋಡುವ ವಸ್ತ್ರ ಕಾಯಕವ ಬೇಡಿದೆ
ನೋಡುವ ನೋಟವು ಕಾಯಕಕೆ ಸೋತಿದೆ
ಎನ್ನ ಸರ್ವಸ್ವವು ಕಾಯಕದಿ ಮುಕ್ತಿಗೆ ಕಾಡಿದೆ ನಮ್ಮ ಬಸವಣ್ಣ
ಸೂರ್ಯನು ಉದಯಿಸಿ ಹಗಲು ಕಳೆದು
ಚಂದ್ರನ ಬೆಳಕಿನಲಿ ಇರುಳು ಕಳೆದು
ದಿನವೆಂಬ ಕಾಲ ಕಳೆದು ಮರಣ ಸಮೀಪಿಸುವಾಗ
ಕಾಯಕದಿ ನಿನ್ನ ನೆನಪಿನ ರಾಶಿ ಉಳಿಸಣ್ಣ ನಮ್ಮ ಬಸವಣ್ಣ
*************ರಚನೆ ***************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment