ವಿಘ್ನ ವಿನಾಯಕ
ಬಾಳುವ ಬದುಕಿನಲಿ ಜೀವನ ಪಾವನ
ಕೈಮುಗಿದು ಬೇಡು ಸೊಂಡಿಲ ಗಣೇಶನ
ಮೊಗದಲ್ಲಿ ಮಂದಹಾಸ ಮೂಡಿ
ನಗುವಿನಲಿ ಹರಿವ ನದಿ ಓಡಿ
ಕೆನ್ನೆಯಲಿ ಕೆಂಪು ನೆಲದ ಕಂಪು
ಮೂಗಿನಲಿ ಆನೆ ಸೊಂಡಿಲ ತಂಪು
ಇಲಿ ಏಕೆ ನಿನ್ನ ಹೊರುವ ವಾಹನ
ಕೂರಲು ನಿನಗೆ ಬೇಕು ಸೋಪಾನ
ವಿದ್ಯೆಗೆ ನೀನೆ ಅಧಿಪತಿ ಗಣಪ
ಹಿಡಿದು ಬೇಡಬೇಕು ಸ್ಲೆಟು ಬಳಪ
ಶಿವ ಪರ್ವಾತಿಯ ಪುತ್ರ ನೀನು
ಬೇಡಿದನ್ನು ನೀಡುವ ಪಾಪ ನಾಶಕ ನೀನು
ನಮ್ಮ ಊರಿಗೆ ಗಣಪ ಬಂದ
ವಿಘ್ನ ವಿನಾಶಕ ವಿನಾಯಕ ಬಂದ
,ಅಂಬಾರಿ ಏರಿ ಮೋದಕ ಬಂದ
ಆಸೆ ಇಡೆರಿಸುವ ಗಜಾನನ ಬಂದ
ಮಣ್ಣಿನಲಿ ನಿನ್ನ ಆಕಾರ ಮಾಡಿ
ಹೊನ್ನಿಗಾಗಿ ನಿನ್ನ ಮಾರಾಟ ಮಾಡಿ
ಗಂಧ ಕರ್ಪೂರದ ಆರತಿ ಮಾಡಿ
ಭಕ್ಷ ಭೋಜನ ನೈವೇದ್ಯ ಮಾಡಿ
ನೀರಿನಲ್ಲಿ ಮುಳಿಗಿಸುವರು ನೋಡಿ
ಜೀವವಿರದ ಗೊಂಬೆ ನಿನ್ನ ಪಾಡು
ಭಕ್ತಿಯಲಿ ಬೇಡುವರು ನಿನ್ನ ನೋಡು
ನಿನ್ನ ಹಬ್ಬ ಮುಗಿದ ಮೇಲೆ
ಕೇಳುವವರು ಇಲ್ಲ ನಿನ್ನ ಪಾಡು
ನೀರಿನಲ್ಲಿ ಕರಗಿದ ಮಣ್ಣು ನೀನು ನೋಡು
ಗಣೇಶನ ಹಬ್ಬದ ಶುಭಾಶಯಗಳು ಎಲ್ಲರಿಗೂ
************ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment