ವಚನಗಳು -34
ಹೂವು ಮಲ್ಲಿಗೆಯಾದರೇನು
ಹೂವು ಸಂಪಿಗೆಯಾದರೇನು
ಹೂವು ಗುಲಾಬಿಯಾದರೇನು
ಸುವಾಸನೆಯು ಜಾತಿ ಕೇಳುವುದೇ
ಜಾತಿಯ ಮೀರಿ ನಿಂತಿಹುದು ಕಾಯಕದ ನೆಲೆಗಟ್ಟು ನಮ್ಮ ಬಸವಣ್ಣ
ಮೋಡದಿ ಮಳೆ ಸುರಿದು
ಊರ ಎಲ್ಲಾ ನೆರೆಯಾಗಿ
ಹುಲ್ಲು ಬಾಯತೆರೆದಿರಲು
ಶಿವನ ಬೇಡುವುದೇ ಕಾಯಕವ ನೋಡ ನಮ್ಮ ಬಸವಣ್ಣ
ಓದಿ ವಾದವ ಮಾಡುತಾ
ಅಂಗಿನ ಗಾದೆಯ ಹೇಳುತಾ
ವೇದ ಪುರಾಣಗಳ ಸಾರುತ
ಇಂಗು ತಿಂದ ಮಂಗನಂತೆ ಕಾಯಕವ ಮಾಡಿದರೆ ಫಲವೇನು
ನಮ್ಮ ಬಸವಣ್ಣ
**********************ರಚನೆ ************
ಡಾ. ಚಂದ್ರಶೇಖರ. ಸಿ. ಹೆಚ್
Superb
ReplyDelete