ವಚನಗಳು -32
ಸುಳ್ಳು ನುಡಿವವರಿಗೆ ಕಾಲ, ಮೋಸಕೆ ಕಾಲ
ಕೆಡುಕು ಮಾಡುವವರಿಗೆ ಕಾಲ, ಅನ್ಯಾಯಕೆ ಕಾಲ
ಧರ್ಮದಿ ನಡೆವವರಿಗೆ ಅಧರ್ಮವು ಕಾಡಿಹುದು
ಶ್ರದ್ದೆಯಲಿ ಮಾಡುವ ಕಾಯಕವು ಧರ್ಮ ನೋಡ ನಮ್ಮ ಬಸವಣ್ಣ
ಪೂಜೆ ಮಾಡುವವನ ಮನದಿ ಕಡು ಮೋಸ
ಹೇಳುವ ಮಂತ್ರದಿ ನೂರೆಂಟು ಮಾಟ
ಪಾಪದ ಮನದ ಮನೆಯಲಿ ಪೂಜಿಸುವನು ಹೊಲೆಯ
ಕಾಯಕದಿ ಶ್ರದ್ದೆ ಪಾಪಿಗೂ ಕೈಲಾಸ ಕಾಣ ನಮ್ಮ ಬಸವಣ್ಣ
ಮೌನದಿ ಮಾಡುವ ಕೆಲಸ
ಜ್ಞಾನದಿ ತಿಳಿದ ವಿದ್ಯೆ
ಸ್ವಾಭಿಮಾನದಿ ಬೆಳಗುವ ಜ್ಯೋತಿ
ಕಾಯಕದಿ ನೀಡುವ ಸುಖವು ಸ್ವರ್ಗ ನಮ್ಮ ಬಸವಣ್ಣ
*************ರಚನೆ ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment