ನಲ್ಲ ನಾನಾಗಲೇ




ಹುಡುಗಿಯ ನೋಡಿದ ಮನ

ಕುಣಿಯಿತು ಹೀಗೆ ಪ್ರತಿ ದಿನ

ಸೊಗಸಿನ ಸೌಂದರ್ಯಕೆ

ಜನ್ಮ ಜನ್ಮದ ನಲ್ಲ ನಾನಾಗಲೇ 


ಓ ಗೆಳತಿ ಆ ನಿನ್ನ ಶ್ವಾಸದಿ

ಉಸಿರು ನಾನಾಗಲೇ

ಆ ನಿನ್ನ ಹೃದಯದಿ

ಹರಿವ ರಕ್ತ ನಾನಾಗಲೇ


ಆ ನಿನ್ನ ಕೆಂಪು ತುಟಿಗೆ

ಲಿಪ್ಸ್ಟಿಕ್ ನಾನಾಗಲೇ

ನಿನ್ನ ಹೊಳೆವ ಕಣ್ಣ ರೆಪ್ಪೆಗೆ

ಕಾಡಿಗೆ ನಾನಾಗಲೇ


ನಿನ್ನ ಸುಂದರ ಕೆನ್ನೆಗೆ

ಪೌಡರ್ ನಾನಾಗಲೇ

ನಿನ್ನ ಆ ಕುಂಚದ ಜಡೆಗೆ

ಮಲ್ಲಿಗೆ ಹೂವು ನಾನಾಗಲೇ


ನಿನ್ನ ಮೈಮಾಟಕೆ ಸೆಳೆವ 

ಹಸಿರು ಸೀರೆ ನಾನಾಗಲೇ

ನಿನ್ನ ಕೈಗಳಲಿ ಮಿನುಗುವ

ಬಳೆ ನಾನಾಗಲೇ


ಕಾಲ ಬೆರಳಿಗೆ ಪೋಣಿಸಿದ

ಕಾಲುಂಗುರ ನಾನಾಗಲೇ

ನಿನ್ನ ಕಾಲಲಿ ಘಲ್ಲ ಎನ್ನುವ 

ಗೆಜ್ಜೆ ನಾನಾಗಲೇ ಗೆಳತಿ


ಕುಣಿವ ಮನದಿ ನಿನ್ನ ಬಯಸಿ

ನಿನ್ನ ಒಲವ ಚೆಲುವಿಗೆ

ಸುಂದರ ಸೊಬಗಿನಾ ಗುಣಕೆ

ಸವಿ ನೋಟದ ಮಾತಿಗೆ 

ಸೋತು ನಲ್ಲ ನಾನಾಗಲೇ


**********ರಚನೆ **********

     ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35