ವಚನಗಳು -33
ಆಕಾಶದಿ ಮನೆಯ ಮಾಡಿ
ನಕ್ಷತ್ರಗಳ ಸಾಲು ಹಾಕಿ
ಚಂದ್ರನ ಬೆಳಕು ಚೆಲ್ಲಿ
ಪಾಪಿಗೆ ಕಾಯಕವುಮಸಣ ನೋಡ ನಮ್ಮ ಬಸವಣ್ಣ
ಪರ್ವತವ ಏರಿದೊಡೆ ಶಿವ ಕಾಣುವನೇ
ಗಂಗೆಯನು ಪೂಜಿದೊಡೆ ಶಿವ ಕಾಣುವನೇ
ಸರ್ವಂತಯಾರ್ಮಿ ಶಿವನು ನೆಲೆ ನಿನ್ನೊಳಗೆ
ಕಾಯಕದಿ ಪೂಜು ಶಿವನ ನಮ್ಮ ಬಸವಣ್ಣ
ಉಪ್ಪಿನಕಾಯಿ ಇಲ್ಲದ ಊಟ
ಭಕ್ತಿಯೇ ಇಲ್ಲದ ಪೂಜೆ
ಮಡಿ ಇಲ್ಲದವಳ ಮನೆವಾರ್ತೆ
ಕಾಯಕವ ಮಾಡದ ಕರ್ಮಿಯ ಲಿಂಗ ಮೆಚ್ಚ ನಮ್ಮ ಬಸವಣ್ಣ
**************ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment