ಕೋಮು ದ್ವೇಷ
ಒಳ್ಳೆ ಕೆಲಸ ಮಾಡುವರು
ಸಮಾಜಕಾಗಿ ದುಡಿಯವರು
ನ್ಯಾಯಕಾಗಿ ಕೂಗುವರು
ಬಡವರ ಬಂದುಗಳು ಇವರಯ್ಯ
ಪ್ರೀತಿ ಪ್ರೇಮದಿ ಜನಗಳ
ನೋಡುತ ನಗಿಸುವರು ಕಾಣಯ್ಯ
ಕಾಣದ ಸಂಚಿಗೆ
ಮೋಸದ
ಹೊಡೆತಕ್ಕೆ
ನೆತ್ತರಲಿ ಬಿದ್ದಿಹರು
ಹೆಣವಾಗಿ ನೋಡಯ್ಯ
ನಡೆದು ಹೋಗೊ
ದಾರಿಯಲಿ ಮಲಗಿಹರು ಕೇಳಯ್ಯ
ಸಾವಿನಲ್ಲೂ ರಾಜಕೀಯ
ಹೆಣದ ಮುಂದೆ ನಾಟಕೀಯ
ಬೇಯಿಸುವರು
ಸಾವಲ್ಲಿ
ಬೆಳೆಯ
ಹೆತ್ತ ಕರುಳು
ಕೂಗುತಿದೆ
ಮತ್ತೆ ಬಾ
ಎನ್ನುತ್ತಿದೆ
ಜೀವ ತಂದು ಕೊಡುವವರು
ಯಾರು ಹೇಳಯ್ಯ
ಹೆಣದ ಮುಂದೆ ರಾಜಕೀಯ
ಪೊಳ್ಳು
ಬರವಸೆಗಳ
ನಾಟಕೀಯ
ಹೆತ್ತವರ
ಬಿಟ್ಟು ಹೋದ
ನಮ್ಮ ಗೆಳೆಯ
ಕೋಮು ಗಲಭೆ
ಸೃಷ್ಟಿಸಿ
ಜೀವವವನ್ನು
ತೆಗೆಯವರು
ಹಣವ
ಸುರಿದು
ನೆತ್ತರಿಗೆ ಬೆಲೆಯನ್ನು ಕಟ್ಟೀಹರು
ಹೋದ ಜೀವ
ಮತ್ತೆ ಬರುವುದೇನಯ್ಯ
ಎತಕಾಗಿ ಈ ಸಾವು
ಹೆತ್ತೂರಿಗೆ ಬರಿ ನೋವು
ಕೋಮು ದ್ವೇಷದ ಕಾವು
ದೇಶವನ್ನು ಸುಡುತಿದೆ
ನೋಡಯ್ಯ
ಮಾಡುವರು ರಾಜಕೀಯ
ಸತ್ತವನಿಲ್ಲಿ
ಆಹಾರವಯ್ಯ
ದ್ವೇಷ ಬಿತ್ತಿ
ರಕ್ತ ಕುಡಿಯುತಿಹರು ಕೆಳ್ಳಯ್ಯ
*****†******ರಚನೆ********
ಡಾ. ಚಂದ್ರಶೇಖರ. ಸಿ. ಹೆಚ್
Super and exactly what the things are going
ReplyDelete