ಓದಿದ್ದು ಜ್ಞಾಪಕದಲ್ಲಿ ಇಟ್ಟು ಕೊಳ್ಳುವುದು ಹೇಗೆ

 


ಗೆಳೆಯರೆ ಎಲ್ಲರಿಗೂ ಓದಬೇಕು ಎನ್ನುವ ಹಂಬಲವಿರುತ್ತದೆ, ಆದರೇ ಓದಿದ್ದು ಹೆಚ್ಚು ಸಮಯ ಜ್ಞಾಪಕದಲ್ಲಿ ಇರುವುದಿಲ್ಲ. ನಮಗೆ ಓದು ಎನ್ನುವುದು ಒಂದು ಫನ್ ಹಾಗಬೇಕು ಮತ್ತು ನಾವು ಓದುವ ಕಾರಣ ತಿಳಿದಿರಬೇಕು
ಈ ಕೆಲವೊಂದು ಮೂಲಭೂತ ಕಾರಣಗಳು ನಮ್ಮ ಓದನ್ನು ತಿಳಿಸುತ್ತವೆ.
1) ವಿಷಯಗಳನ್ನು ಚೆನ್ನಾಗಿ ಗ್ರಹಿಸುವುದು
2) ಪ್ರಮುಖ ವಿಷಯಗಳನ್ನು ಕಲೆ ಹಾಕುವುದು
3) ನಿರ್ದಿಷ್ಟ ಪ್ರಶ್ನೆಗೆ ಉತ್ತರ ನೀಡುವುದು
4) ನಮ್ಮ ಓದನ್ನು ಮೌಲ್ಯಮಾಪನ ಮಾಡುವುದು
5) ಓದಿದ್ದನ್ನು ಅನ್ವಯಿಸಬೇಕು 
6) ನಾವು ಮನರಂಜನೆ ಪಡೆಯಲು

ಹಾಗೆಯೇ ಯಾವುದೇ ಪುಸ್ತಕವನ್ನು ಸುಲಭವಾಗಿ ಓದಲು ಈ ಮೂರು ವಿಧಗಳಿವೆ.
1) ತ್ವರಿತ ಉಲ್ಲೇಖದಿಂದ ಓದುವುದು (Quick reference reading )
2) ವಿಮರ್ಶತ್ಮಕ ಓದುವಿಕೆ (Critical reading )
3) ಆನಂದಕ್ಕಾಗಿ ಓದುವುದು (Pleasure reading )

ಓದುವುದನ್ನು ನಾವು ಕೆಲವೊಂದು ಉಪಾಯದಿಂದ ಓದುವುದು ಅಗತ್ಯ.
1) ಪುಸ್ತಕದಲ್ಲಿ ಇರುವ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳುವುದು
2) ಪಠ್ಯದ ರಚನೆಯನ್ನು ತಿಳಿಯುವುದು
3) ಪ್ರಶ್ನೆ ಕೇಳುವುದು ನಮ್ಮ ಓದನ್ನು ತಿಳಿಯಲು
4) ಪಠ್ಯವನ್ನು ಅರ್ಥ ಮಾಡಿಕೊಂಡ ನಂತರ ಮತ್ತೊಂದು ವಿಭಾಗಕ್ಕೆ ಹೋಗುವುದು
5) ತತ್ ಕ್ಷಣವೆ  ಓದಿದ್ದನ್ನು ಸಾರಾಂಶ ಬರೆಯುವುದು

ಇವೆಲ್ಲಾ ಕ್ರಮಗಳು ನಾವು ಓದಿರುವ ಪಠ್ಯವನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತವೆ.
ಪಠ್ಯವನ್ನು ಜ್ಞಾಪಕದಲ್ಲಿ ಇಡುವುದು ಬಹಳ ಅವಶ್ಯಕ ಇದು ನಮ್ಮ ಗೆಲುವಿಗೆ ಸಹಕಾರಿಯಾಗುತ್ತದೆ..

ಜ್ಞಾಪಕದಲ್ಲಿ ಇಡುವುದು ನಮ್ಮ ಮೆದುಳಿನ ಒಂದು ಕೆಲಸ
ನಮ್ಮಲ್ಲಿ ಮೂರು ರೀತಿಯ ಜ್ಞಾಪಕ ಶಕ್ತಿ ಇರುತ್ತದೆ
1)ದೀರ್ಘಕಾಲದ (Long-term) ಜ್ಞಾಪಕ :ತುಂಬಾ ದಿನಗಳ ಕಾಲ ಮೆದುಳಿನಲ್ಲಿ ಉಳಿಯುತ್ತದೆ
2)  ಅಲ್ಪಾವದಿ (short -term) ಜ್ಞಾಪಕ :20ರಿಂದ 30 ಸೆಕೆಂಡ್ ಇರುತ್ತದೆ
3) ತಕ್ಷಣ (Immediate) ಜ್ಞಾಪಕ :ಈಗೆ ಬಂದು ಹಾಗೆ ಮರೆಯುವುದು

ಯಾವುದೇ ವ್ಯಕ್ತಿ ಪಠ್ಯವನ್ನು ಶಿಸ್ತು ಬದ್ದವಾಗಿ ಓದಿದ್ದಲ್ಲಿ ಈ ರೀತಿಯಾಗಿ ಮರೆಯುತ್ತಾನೆ
46%-  ಓದಿದ 1 ದಿನದ ನಂತರ
79%- 14 ದಿನದ ನಂತರ
81%- 28 ದಿನದ ನಂತರ

ಓದಿದ್ದು ಜ್ಞಾಪಕದಲ್ಲಿ ಇಡಲು ಈ ಕೆಳಕಂಡ ಕ್ರಮಗಳು ಸಹಾಯ ಮಾಡುತ್ತವೆ.
1) ತಿಳಿಯುವುದು : ಓದಿದ ಪಠ್ಯದ ಸಂದೇಶವನ್ನು ಅರ್ಥ ಮಾಡಿಕೊಳ್ಳುವುದು. ಜ್ಞಾಪಕದಲ್ಲಿ ಇಡಲು ನಮ್ಮದೇ ಪದಗಳ  ಸಹಾಯದಿಂದ ಸಾರಾಂಶ ತಿಳಿಯುವುದು.
2) ಆಸೆ : ಓದಿದ್ದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳುವ ಆಸೆ ನಮ್ಮಲ್ಲಿ ಇರಬೇಕು, ಇಲ್ಲದಿದ್ದಲ್ಲಿ ಜ್ಞಾಪಕ ಇಡುವುದು ಸಾಧ್ಯವಾಗುವುದಿಲ್ಲ
3) ಹೆಚ್ಚು ಕಲಿಯುವುದು : ಓದಿದ ಪಠ್ಯವನ್ನು ಅರ್ಥ ಮಾಡಿಕೊಂಡು ಓದುವುದು ಹಾಗೆಯೇ ಪುನರ್ ಕಲಿಕೆ ಅವಶ್ಯಕ.
4) ವ್ಯವಸ್ಥಿತವಾಗಿ ಓದುವುದು :ಓದಿದ್ದನ್ನು ಜ್ಞಾಪಕದಲ್ಲಿಡಲು ವ್ಯವಸ್ಥಿತ ಕಲಿಕೆ ಬಹಳ ಮುಖ್ಯ.
ಇವೆರಡು ಸಂಖ್ಯೆಗಳಲಿ ಯಾವುದು ತುಂಬಾ ಸುಲಭ 538-6284 ಮತ್ತು 678-1234
ವಿವೇಚನಾ ಶಕ್ತಿಯನ್ನು ಅಭಿವೃದ್ದಿ ಮಾಡಿಕೊಳ್ಳುವುದು
5) ಸಂಗ್ರಹಿಸುವುದು : ನಿಮ್ಮ ಜ್ಞಾಪಕದಲ್ಲಿರುವ ವಿಷಯವನ್ನು ಬೇರೆ ವಿಷಯದ ಜೊತೆ ಜೋಡಣೆ ಮಾಡುವುದು.


ನಾವು ನಮ್ಮ ಮೆದುಳಿನ ಜ್ಞಾಪಕ ಶಕ್ತಿಯನ್ನು ಧಾರಣ ಮಾಡುವುದು ಅಂದರೆ ಸಂಗ್ರಹಿಸುವುದು ಮತ್ತು ಮೆದುಳಿಗೆ ಮನವರಿಕೆ ಮಾಡಿ ಕೊಡುವುದು ಹಾಗೂ ಓದಿದ್ದನು ಧೀರ್ಘವದಿ ಜ್ಞಾಪಕದಲ್ಲಿಡಲು ಓದಿರುವ ಪಠ್ಯವನ್ನು ನೆನಪಿಸಿಕೊಳ್ಳುವುದು, ಇಲ್ಲವೆಂದಲ್ಲಿ ಮತ್ತೆ ಓದುವುದು.
ಓದಿದ ಪಠ್ಯವನ್ನು ಅರ್ಥಮಾಡಿಕೊಂಡು ಅದನ್ನು ಗುರುತಿಸುವುದು ತುಂಬಾ ಅಗತ್ಯ.

ನಾವು ಸಕ್ರಿಯ ಓದುಗರಾಗಬೇಕು ಮತ್ತು ಅರ್ಥಮಾಡಿಕೊಂಡು ಓದಬೇಕು ಈಗೆ ಮಾಡುವುದು ಜ್ಞಾಪಕದ ಒಂದು ಭಾಗವಾಗಿರುತ್ತದೆ.
ಜ್ಞಾಪಕ ಶಕ್ತಿಯನ್ನು ಹರಿತಗೊಳಿಸಲು ಮೆದುಳಿಗೆ ಕೆಲಸ ನೀಡುವ ಕೆಲ ಪ್ರಯೋಗಗಳಾದ  ಗಣಿತದ ಒಗಟುಗಳು,   ಚೆಸ್   ಆಡುವುದು    , ದೃಶಿಕರಣದಿಂದ ಅರ್ಥ ಮಾಡಿಕೊಳ್ಳುವುದು, ಹೀಗೆ ಹಲವಾರು ಪ್ರಯೋಗ ಮಾಡುವುದು.

ಗೆಳೆಯರೆ ಮತ್ತು ತಂದೆ ತಾಯಂದಿರೇ ನಿಮ್ಮ ಮಕ್ಕಳು ಅಥವಾ ನಿಮ್ಮ ಸಂಬಧಿಕರು ಯಾರೇ ಆಗಲಿ ಆಂಟಿ ಸೈಕೋಟಿಕ್ ಓಷದಗಳನ್ನು ನಿದ್ರಾಹಿನತೆ, ಇನ್ಸನಾಮಿಯಾ, ಆಂಟಿ ಡೇಪರೇಸೆಂಟ್ಸ್ ಈ ಕಾಯಿಲೆಗಳಿಗೆ  ಉಪಯೋಗಿಸುತ್ತಿದ್ದರೆ ಅವರ ಜ್ಞಾಪಕ ಶಕ್ತಿ ಕ್ಷಿಣಿಸುತ್ತದೆ, ಅಂಥ   ಔಷಧಗಳ  ಪಟ್ಟಿ ಕೆಳಕಂಡಂತೆ ಇದೆ.
1) ಬೆಂಜೋ ಡೈಝಪಿಂನ್ಸ್
ಉದಾಹರಣೆ : ಲೋರಾಜಿಪಂ, ಡೈಜೀಪಂ, ತೆನಝಪಂ
2) ನನ್ ಬೆಂಜೋಡೈಝಪಿಂನ್ಸ್
ಉದಾಹರಣೆ :ಜೋಲ್ಪಿಡೆಮ್, ಜಲೇಂಪ್ಲೋನ್
3) ಆಂಟಿ ಚೋಲಿನರ್ಜಿಕ್ಸ್
ಉದಾಹರಣೆ : ದೋನೆಪೇಜಿಲ್, ಪರೋಕ್ಸತಿನೇ
4) ಆಂಟಿ ಸೈಕಾಟಿಕ್ಸ್ ಮತ್ತು ಮೂಡ್ ಸ್ಟೇಬಿಲೀಜ್ರ್ಸ್
ಉದಾಹರಣೆ : ರಿಸ್ಪೆರಿಡನ್, ಕ್ಯೂಷಪೀನೇ, ಒಳನಝಪಿನೆ
5) ಒಪಿಯಟಿಕ್ ಪೈನ್ ಮೆಡಿಕಷನ್ಸ್
ಉದಾಹರಣೆ : ಹೈದ್ರಾಯೋಕಾಡೋನೆ, ಆಕ್ಸಿಕೋಡನ್, ಮೊರಫಿನೇ, ಕಾಡೆನೇ.

ಇಂತಹ ಔಷದಿಗಳನ್ನು ತೆಗೆದುಕೊಳ್ಳುವವರು ಎಷ್ಟು ಓದಿದರೂ ಜ್ಞಾಪಕದಲ್ಲಿಡುವುದು ಕಷ್ಟ ಅದರಿಂದ ನೀವು ಹೆಚ್ಚು ಹೆಚ್ಚು ಅಭ್ಯಾಸ ಮಾಡಬೇಕು, ನಿಮ್ಮ ಔಷದಿಗಳು ನಿಮ್ಮ ಸಾಮರ್ಥ್ಯವನ್ನು, ಪ್ರತಿ ದಿನ ನೀವು ಓದಿರುವ ಜ್ಞಾಪಕ ಶಕ್ತಿಯನ್ನು ಕುಗ್ಗಿಸುತ್ತವೆ ಇದು ಡಾಕ್ಟರ್ಗಳು  ನಡೆಸಿರುವ    ಸಂಶೋಧನೆಯಲ್ಲಿ ದೃಢಪಟ್ಟಿರುತ್ತದೆ.

ನಾವು ಓದಿದ್ದು ದೀರ್ಘವದಿ ಜ್ಞಾಪಕದಲ್ಲಿ ಇದ್ದರೆ ತುಂಬಾ ದಿನಗಳು ಮರೆಯುವುದಿಲ್ಲ, ಇದಕ್ಕಾಗಿ ನಾವು ಓದಿದ್ದನ್ನು ಪುನರವರ್ತನೆ, ಹಾಗು ಸಾರಾಂಶ ಬರೆಯುವುದು, ಜ್ಞಾಪಿಸಿಕೊಳ್ಳುವುದು ಅಗತ್ಯ.

ಮರೆತು ಹೋಗುವ ಕಾಯಿಲೆಯೇ ಚೆನ್ನಾ
ದಿನವೂ ಅರಿಯಬೇಕು ನೀನು ನಿನ್ನಾ
ಕಲಿತು ಕುಣಿದು ಬೇರೆತ ಘಳಿಗೆ ಸುಖವು
ಕಾಣದ ಜೀವನದ ಮರೆವೆಂಬ ತಿರುವು
ಬನ್ನಿ ಅಣ್ಣ ಓದೋಣ ಮತ್ತೆ ಮತ್ತೆ ಮರೆಯೋಣ
ಮನಸ್ಸಲಿ ಕುಣಿದು ಕುಣಿದು ಕಲಿಯೋಣ

*************ಲೇಖಕರು *************
             ಡಾ. ಚಂದ್ರಶೇಖರ. ಸಿ. ಹೆಚ್ 

Comments

Post a Comment

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20