ಹೇ ಹುಡುಗ
ಹೆ ಹುಡುಗ
ಒಲವಾಗೋ ಮುನ್ನ
ಸೆರೆಯಾದೆನು ನಾ
ನಿನ್ನ ನೋಟದಿ
ಹೇ ಹುಡುಗ
ಹರಿವ
ನದಿಯದೇನು ನಾ
ನಿನ್ನ ಹೃದಯದಿ
ಹೇ ಹುಡುಗ
ಕಣ್ಣಸೆಳೆತೆಕ್ಕೆ ಸಿಕ್ಕು
ಬಲಿಯಾದೇನು ನಾ
ಕಣ್ಣಿರಲಿ ಬೆರೆತೋದೇನು ನಾ
ರೆಪ್ಪೆಯ ಒಳಗೆ
ಕಾಣೆಯಾದೇನು ನಾ
ಹೆ ಹುಡುಗ
ಕನಸ್ಸುಗಳ
ಸವಿ ಮೊಗ್ಗದೇನು ನಾ
ಮನದಿ ಅರಳಿದ ಪ್ರೀತಿಗೆ
ಹೂವಾದೇನು ನಾ
ಗೆಜ್ಜೆ ಸದ್ದು
ನನ್ನಲಿ ಕುಣಿವ
ಆಸೆ ತಂದಿದೆ
ನಿನ್ನ ಸೆಳೆತ
ನನ್ನ ಕರೆದು
ನೀನೆ ನನ್ನ ಉಸಿರು
ಎಂದಿದೆ
ಹೆ ಹುಡುಗ
ಬಾನಂಗಳದಿ ನಕ್ಷತ್ರ
ನಗುತಿದೆ
ಬಳಿ ಬಾ ನೀನು
ಎನುತಿದೆ
ಅಗಸವು ಕೈ ಚಾಚಿ
ಚಂದ್ರನ ಕರೆದಿದೆ
ಹೇ ಹುಡುಗ
ನನ್ನಾಸ್ಸೇ ನೀನೆ ಗೆಳೆಯ
ಕನಸಾಗು ಬಂದ ಒಡೆಯ
ನಸು ನಕ್ಕು ಕರೆದ ಹೃದಯ
ನನ್ನ ಒಲವು ನೀನೆ ಇನಿಯ
ಹೆ ಹುಡುಗ
ಒಲವಾಗೋ ಮುನ್ನ
ಸೆರೆಯಾದೇನು ನಾ
ನಿನ್ನ ನೋಟದಿ
ಹರಿವ
ನದಿಯದೇನು ನಾ
ನಿನ್ನ ಹೃದಯದಿ
***********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment