ಓದುವುದು ಹೇಗೆ
ಓದುವುದು ಹೇಗೆ, ಇದು ಎಲ್ಲಾ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳಿಂದ ಹಿಡಿದು ಕಾಲೇಜಿನ ವಿದ್ಯಾರ್ಥಿಗಳವರೆಗೂ ಕೂಡ ಕಾಡುವ ಪ್ರಶ್ನೆ ಇದಾಗಿದೆ, ಓದುವ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಹೇಳುತ್ತಾರೆ ನಾನು ದಿನಕ್ಕೆ 5 ತಾಸು ಓದುತ್ತೇನೆ ಆದರಕೂಡ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗಲಿಲ್ಲ. ಏಕೊ ಏನೋ ತಿಳಿಯುತ್ತಿಲ್ಲ ಓದಿರುವುದು ಜ್ಞಾಪಕಕ್ಕೆ ಬರುತ್ತಿಲ್ಲ.
ತಂದೆ ತಾಯಿಯರು ತಮ್ಮ ಮಕ್ಕಳ ಬಗ್ಗೆ ಹೇಳುವುದು ಹೀಗೆ, ನನ್ನ ಮಗ ಅಥವಾ ಮಗಳು ಯಾವಾಗಲೂ ಪುಸ್ತಕ ಹಿಡಿದು ನಮ್ಮ ಕಣ್ಣೆದುರಿಗೆ ಓದುತ್ತಾರೆ ಆದರೂ ಕೂಡ ಶಾಲೆಯಲ್ಲಿ ಅಂಕಗಳು ಕಡಿಮೆ ಬಂದಿರುತ್ತವೆ ಹೀಗೆ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ತುಂಬಾ ಚಿಂತಿಸುತ್ತಾರೆ.
ಅವರು ಯಾಕೆ KAS, IAS ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಆಗುವ ಎಲ್ಲರ ಮುಂದಿರುವ ಪ್ರಶ್ನೆ ನಾನು ಓದುವುದು ಸರಿ ಇದೆಯೇ ಮತ್ತು ಪರೀಕ್ಷೆಯಲ್ಲಿ ಉತ್ತಿರ್ಣನಾಗುವುದು ಹೇಗೆ.
ಹಾಗಾಗಿ ಈ ಅಂಕಣದಲ್ಲಿ ಓದುವುದು ಹೇಗಿರಬೇಕು ಎಂಬುದರ ಬಗ್ಗೆ ಕೆಲವು ಮಾಹಿತಿಯನ್ನು ತಿಳಿಸುತ್ತಿದ್ದೇನೆ
ನೀವು ಈಗಾಗಲೇ KAS, IAS ಪರೀಕ್ಷೆ ಬರೆದವರ ಸಂದರ್ಶನಗಳನ್ನು ನೋಡಿರಬಹುದು ಕೂಡ.
ನಾವು ಓದುವ ಮುಂಚೆ ಕೆಲವೊಂದು ಅಭ್ಯಾಸಗಳು ರೂಡಿಯಲ್ಲಿ ಇದ್ದರೆ ಓದುವುದು ನಮಗೆ ಸ್ವಲ್ಪ ಸರಳವಾಗಬಹುದು.
1) ಓದುವ ಮೊದಲು ಮನಸ್ಸು ಶಾಂತವಾಗಿರಬೇಕು
2) ಅದಕ್ಕಾಗಿ ಸ್ವಲ್ಪ ಸಮಯ ವ್ಯಾಯಾಮ ಮತ್ತು ಆಟಗಳನ್ನು ಆಡಿದ ಮೇಲೆ ಓದುವುದು, ಯಾಕೆಂದರೆ ಏಕಾಗ್ರತೆ ಬರುತ್ತದೆ
3) ಓದುವ ಮೊದಲು ಮನಸ್ಸನ್ನು ಶಾಂತವಾಗಿಡಲು ಧ್ಯಾನ ಸಹಾಯ ಮಾಡುವುದು
4) ಮನಸ್ಸು ಶಾಂತ ಮತ್ತು ಏಕಾಗ್ರತೆ ಇಂದ ಇರಲು ನಿಮಗೆ ಅನುಕೂಲವಾದ ಸರಳ ರೀತಿಗಳನ್ನು ಅನುಸರಿಸಬಹುದು.
ವಿದ್ಯಾರ್ಥಿಗಳು ಓದುವುದನ್ನು ಈ ಕೆಲವು ವಿಧಾನಗಳನ್ನು ಅನುಸರಿಸುತ್ತಾರೆ
1) ಜೋರಾಗಿ ಶಬ್ದದಿಂದ ಪಠ್ಯವನ್ನು ಓದುವುದು
2) ಶಾಂತವಾಗಿ ಮನಸ್ಸಿನಿಂದ ಓದುವುದು
3) ಪದಗಳ ಸಾಲುಗಳ ಮೇಲೆ ಪೆನ್ ಅಥವಾ ಪೆನ್ಸಿಲನ್ನು ಮುಂದೆ ಸಾಗಿಸುತ್ತ ಓದುವುದು
ಹಾಗೂ ಓದುವುದನ್ನು ನಾವು ಎರಡು ರೀತಿಯಲ್ಲಿ ಓದಬಹುದು
1) ಬಾಯಿಪಾಟ ಅಥವಾ ಊರುವಲು, ಗಟ್ಟು ಹೊಡೆಯುವುದು
2) ಪಠ್ಯವನ್ನು ಅರ್ಥ ಮಾಡಿ ಕೊಂಡು ಓದುವುದು
ಹೀಗೆ ವಿದ್ಯಾರ್ಥಿಗಳು ತಮ್ಮ ಪಠ್ಯ ಪುಸ್ತಕವನ್ನು ತಮಗೆ ಅನುಕೂಲವಾದ ಶೈಲಿಯಲ್ಲಿ ಅಭ್ಯಾಸ ಮಾಡಿಕೊಳ್ಳುತ್ತಾರೆ.
ಈಗ ನಾನು ಓದುವುದು ಹೇಗೆ ಎಂಬ ಪುಸ್ತಕವನ್ನು ರಾನ್ ಫ್ರೈ ಅವರು ಬರೆದಿರುವ ಇಂಗ್ಲಿಷ್ ಅವತರಿಣಿಕೆಯ ಕೆಲವು ಮಾಹಿತಿಯನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.
ಯಾವದೇ ಪುಸ್ತಕವೇ ಆಗಲಿ ನಾವು ಓದುವಾಗ ಈ ಐದು ಪ್ರಶ್ನೆಗಳು ನಮ್ಮ ತಲೆಯಲ್ಲಿ ಇರಬೇಕು, ಇದು ಓದುವ ಪಠ್ಯವನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ.
1) ಯಾರು (whom) ?..... ಯಾವುದಾದರೂ ನಿರ್ದಿಷ್ಟ ವ್ಯಕ್ತಿ ಅಥವಾ ಸಮೂಹ ವ್ಯಕ್ತಿಗಳು
2) ಯಾವಾಗ (when)?...ಇದು ಸಮಯಕೆ ಸಂಬಂದಿಸಿದ್ದು
3) ಎಲ್ಲಿ (where )?........ಇದು ಸ್ಥಳ
4) ಯಾಕೆ (why)?..... ಯಾವ ನಿರ್ದಿಷ್ಟ ಕಾರಣಕ್ಕಾಗಿ ನಡೆಯಿತು
5) ಹೇಗೆ (how)?..... ಕೆಲಸ (ಯಾವುದು ) ಮುಗಿಯಿತು, ನಡೆಯಿತು
ಇಷ್ಟು ಅಭ್ಯಾಸಗಳನ್ನು ಮಾಡಿ , ಐದು ನಿಯಮಗಳನ್ನು ಪಠ್ಯದಲ್ಲಿ ಅರ್ಥ ಮಾಡಿಕೊಳ್ಳುವುದು ಮತ್ತು ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಉತ್ತರ ಗೊತ್ತಿಲದ ಪ್ರಶ್ನೆಗಳಿಗೆ ಪುನರ್ ಅಧ್ಯಯನ , ಸಂಶೋಧನೆ. ಬೇರೆ ವಿದ್ಯಾರ್ಥಿ ಅಥವಾ ಶಿಕ್ಷಕರಿಂದ ಕೇಳಿ ತಿಳಿಯುವುದು
ವಿದ್ಯಾರ್ಥಿಗಳು ಪುಸ್ತಕವನ್ನು ಓದುವಾಗ ಕೆಲವು ಸಂದೇಶಗಳನ್ನು ಗಮನದಲಿಟ್ಟು ಹಾಗೆ ತಂದೆ ತಾಯಿಗಳು ಹಾಗು ಯಾರು ಬೇಕಾದರೂ ಈ ನಿಯಮಗಳನ್ನು ಪಾಲಿಸಿದರೆ.. ಪಠ್ಯ ಓದುವಾಗ ನಾವು ಅತ್ಯುತ್ತಮ ಅಥವಾ ಉತ್ತಮ ಇಲ್ಲವೆ.... ಅನುತ್ತಿರ್ಣ ಎಂದು ಬೇಗ ಅರ್ಥ ಮಾಡಿಕೊಳ್ಳಲು ಸಹಾಯ ಆಗುತ್ತದೆ.
1) ಓದುವುದು
ಓದುವುದರಲ್ಲಿ ಮೂರು ಮುಖ್ಯ ವಿಧಗಳು ವೇಗ
, ಗ್ರಹಿಕೆ ಮತ್ತು ನೆನಪಿಟ್ಟು ಕೊಳ್ಳುವುದು
ಪ್ರಶ್ನೆ = ಒಂದು ಪಂಕ್ತಿ ಅಥವಾ ಎರಡು ಮೂರು ಪಂಕ್ತಿ ಓದಿ ಸಾರಾಂಶವನ್ನು ತಿಳಿದುಕೊಳ್ಳುವುದು ಮತ್ತು ನೋಟ್ಸ್ ನಲ್ಲಿ ಸಾರಾಂಶವನ್ನು ನೋಡದೆ ಬರೆಯುವುದು.
ಸಮಯ ಎರಡು ನಿಮಿಷದಲ್ಲಿ ಆದರೇ A ಎಂದು, 4 ನಿಮಿಷವಾದರೆ B ಎಂದು. ನಿಗದಿತ ಸಮಯದಲ್ಲಿ ನಿಮ್ಮ ಪುಸ್ತಕದ ನೋಟ್ಸ್ ನಲ್ಲಿ ಸಾರಾಂಶವನ್ನು ಗ್ರಹಿಸಿ ಬರೆಯಲು ಸಾಧ್ಯವಾಗದೆ ಇದ್ದಲಿ C ಎಂದು ತಿಳಿವುದು.
ಪ್ರಶ್ನೆ = ನೆನಪಿನ ಶಕ್ತಿ ತಿಳಿಯಲು ಈ ಕೆಳಗಿನ ಪ್ರಶೆ ಅಭ್ಯಾಸ ಮಾಡಿ ತಿಳಿಯಿರಿ.
763245613481736
ಇದರಲ್ಲಿ 12 ಸಂಖ್ಯೆಗಳು ನೆನಪಿನಲಿಟ್ಟು ಬರೆಯಲು ಸಾಧ್ಯ ಎಂದರೆ...... A
8 ರಿಂದ 11 ಸಂಖ್ಯೆಗಳು ನೆನಪಿನಲಿಟ್ಟು ಬರೆಯಲು ಸಾಧ್ಯ ಎಂದರೆ......B
7 ಅಥವಾ ಕಮ್ಮಿ ಸಂಖ್ಯೆಗಳು ನೆನಪಿನಲಿಟ್ಟು ಬರೆಯಲು ಸಾಧ್ಯ ಎಂದರೆ...... ಸಿ
2) ಸಮಯದ ನಿರ್ವಹಣೆ
ಸಮಯದ ನಿರ್ವಹಣೆಯನ್ನು ನಾವು ಕೆಳಕಂಡ ರೀತಿ ಮಾಡಬಹುದು. ನಮಗೆ ಕೊಟ್ಟ ಕಾರ್ಯ ಯೋಜನೆಗಳನ್ನು ಸಣ್ಣ ಘಟಕಗಳಾಗಿ ನಿರ್ವಹಿಸುವ ಸಾಮರ್ಥ್ಯ.
ಉದಾಹರಣೆ : ಓದುವುದು, ಟಿಪ್ಪಣಿ ತೆಗೆದುಕೊಳ್ಳುವುದು, ರೂಪುರೆಷೆಯನ್ನು ಸಿದ್ದಪಡಿಸುವುದು ಮತ್ತು ಬರೆಯುವುದು.
ಪರೀಕ್ಷೆ = ಸಮಯವನ್ನು ನಿಗದಿಪಡಿಸಿಕೊಳ್ಳಿ
ಸರಿಯಾದ ಸಮಯದಲ್ಲಿ ಆದರೇ..... A
ಸರಿಯಾದ ಸಮಯದಲ್ಲಿ ಆಗದೆ ಇದ್ದರೆ...... B
ನೀವು ಸಮಯವನ್ನು ಹೇಳಲು ಆಗದಿದ್ದರೆ...... C
3) ಗ್ರಂಥಾಲಯ ಉಪಯೋಗ
ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಳ್ಳುವುದು,ಜಾಸ್ತಿ ಸಮಯ ಓದುವುದರಲ್ಲಿ, ಅಧ್ಯಯನ ಮತ್ತು ಸಂಶೋಧನೆಯಲ್ಲಿ ತೊಡುಗುವುದು
4) ಟಿಪ್ಪಣಿ ತೆಗೆದು ಕೊಳ್ಳುವುದು
ಬೇರೆ ಬೇರೆ ವಿಧದಲ್ಲಿ ನಾವು ಟಿಪ್ಪಣಿ ತೆಗೆದು ಕೊಳ್ಳಬಹುದು, ಪುಸ್ತಕ, ಶಾಲಾ ತರಗತಿಗಳಲ್ಲಿ, ಗ್ರಂಥಾಲಯ.... Online
a) ಪುಸ್ತಕ : ಮುಖ್ಯ ವಿಷಯದ ಚಿಂತನೆಗಳನ್ನು ಗುರುತಿಸು ವುದು, ಮಾಹಿತಿಯನ್ನು ನಮ್ಮ ಪದಗಳಲ್ಲಿ ಪುನರಾವರ್ತನೆ ಮಾಡಿ ಬೇರೆ ನೋಟ್ ಪುಸ್ತಕದಲ್ಲಿ ಟಿಪ್ಪಣಿ ಬರೆದು ಕೊಳ್ಳುವುದು. ನಮಗೆ ತಿಳಿಯದ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು
ಪ್ರಶ್ನೆಗಳನ್ನು ಬರೆದು ನಮಗೆ ತಿಳಿದ ರೀತಿ ಉತ್ತರವನ್ನು ಬರೆಯುವುದು.
ತಿಳಿಯದ ಪ್ರಶ್ನೆಗೆ ಉತ್ತರವನ್ನು ತರಗತಿಗಳಲ್ಲಿ ತಿಳಿಯುವುದು
b) ತರಗತಿ : ತರಗತಿಯಲ್ಲಿ ಪಠ್ಯ ಶುರು ಮಾಡಿರುವ ಮೊದಲು ಓದಿರುವುದು. ಇದರಿಂದ ತರಗತಿಯಲ್ಲಿ ಶಿಕ್ಷಕರು ಮಾಡುವ ಪಾಠವನ್ನು ಎಕಾಗ್ರತೆಯಿಂದ ಮತ್ತು ಶಿಕ್ಷಕರ ವ್ಯಾಖ್ಯಾನಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಹಾಗೂ ಶಿಕ್ಷಕರ ವ್ಯಾಖ್ಯಾನಗಳನ್ನು ನೋಟ್ ಪುಸ್ತಕದಲ್ಲಿ ಟಿಪ್ಪಣಿ ಮಾಡಿ ಕೊಳ್ಳುವುದು
c) ಗ್ರಂಥಾಲಯ :
ಗ್ರಂಥಾಲಯದ ಪುಸ್ತಕಗಳಿಂದ ಹಾಗೂ ತರಗತಿಯ ಶಿಕ್ಷಕರ ಪಾಠದ ಟಿಪ್ಪಣಿ ಸೇರಿ ಒಂದು ಸಂಕ್ಷಿಪ್ತ ಟಿಪ್ಪಣಿ ಮಾಡಿ ಕೊಳ್ಳುವುದರಿಂದ. ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಟ್ಟ ಸಮಯದಲ್ಲಿ ಸಹಾಯವಾಗುವುದು.
ಪರೀಕ್ಷೆ : ನೋಟ್ ಪುಸ್ತಕದ ಟಿಪ್ಪಣಿಯನ್ನು ಗ್ರಂಥಾಲಯ ಪುಸ್ತಕ ಹಾಗೂ ತರಗತಿಯ ಉಪನ್ಯಾಸಗಳಿಂದ ನೀವು ಸಮರ್ಥರಾದರೆ..... A
ಸಮರ್ಥರಾಗಲಿಲ್ಲ....B
ನಿಮ್ಮ ವಿವರಣೆಯನ್ನು ಗೆಳೆಯರಿಗೆ ತರಗತಿಯಲ್ಲಿ ತಿಳಿಸಿದರೆ... C
d) ತರಗತಿಯಲ್ಲಿ ಬಾಗವಹಿಸುವಿಕೆ:
ಎಲ್ಲಾ ತರಗತಿಯ ಶಿಕ್ಷಕರು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಓದುವುದು, ಶಾಲಾ ಮನೆಕೆಲಸಗಳನ್ನು, ಯೋಜನೆಗಳನ್ನು ಸರಿಯಾದ ಸಮಯದಲ್ಲಿ ಮಾಡಿದ್ದಾನೆಯೇ ಎಂದು ತಿಳಿದು ಅಂಕಪಟ್ಟಿ ತಯಾರು ಮಾಡುವುದು.
ಪರೀಕ್ಷೆ :
ತರಗತಿಯ ಓದು, ಶಾಲಾ ಮನೆ ಕೆಲಸ ಮತ್ತು ಯೋಜನೆಗಳು ಎಲ್ಲದರಲ್ಲಿ ಉತ್ತಮವಾಗಿದ್ದಾರೆ...... A
ಸಾಧ್ಯವಾಗದಿದ್ದಲ್ಲಿ..... B
ತರಗತಿಯಲ್ಲಿ ಉಪಯೋಗವಾಗದಿದ್ದಲ್ಲಿ.... C
5) ಮೌಕಿಕ ವರದಿ ಸಿದ್ದ ಪಡಿಸುವುದು
ಮಾಡಿರುವ ಸಂಶೋಧನೆಯ ಬಗ್ಗೆ ಬೆವರು ಸುರಿಸಿ ಸ್ಫೂರ್ತಿಯಾಗಿ ಬರೆಯುವುದು. ಈ ರೀತಿ ತಯಾರಿ ನಿಮ್ಮ ಕೌಶಲ್ಯ ಪಾಂಡಿತ್ಯದ ಮೇಲೆ ನಿಂತಿರುತ್ತದೆ.
ಪರೀಕ್ಷೆ :
ಓದುವುದು, ಗ್ರಂಥಾಲಯ ಕೌಶಲ್ಯ, ಟಿಪ್ಪಣಿ ತೆಗೆದು ಕೊಳ್ಳುವುದು, ಸಮಯದ ಸದುಪಯೋಗ ಇದ್ದರೆ..... A
ನೀವು ಪರಿಣಿತಿ ಇಲ್ಲದಿದ್ದಲ್ಲಿ....... B
ನೀವು ನಕಲು ಮಾಡುತ್ತಿದ್ದರೆ...... C
6) ಪರೀಕ್ಷಾ ತಯಾರಿ
ಯಾವ ತರಹದ ಪರೀಕ್ಷೆಯನ್ನು ಬರೆಯುತ್ತಿದ್ದೀರಿ, ಅದರ ತಯಾರಿ ಯಾವ ರೀತಿಯಿದೆ ಹಾಗು ನೀವೇ ಪ್ರಶ್ನೆಗಳನ್ನು ತಯಾರು ಮಾಡಿ, ಆ ಪ್ರಶ್ನೆಗಳು ನಿಮ್ಮ ಶಿಕ್ಷಕರು ಕೇಳುವ ಪ್ರಶ್ನೆ ಯ ರೀತಿ ಇರುವುದೇ ಹಾಗೂ ಅದನ್ನು ಪುಸ್ತಕ, ತರಗತಿ ಟಿಪ್ಪಣಿ, ಸಂಕ್ಷಿಪ್ತ ಟಿಪ್ಪಣಿ ಎಲ್ಲವನ್ನು ತಯಾರು ಮಾಡುವುದು
ಪರೀಕ್ಷೆ : ನೀವು ನಿಮ್ಮ ಶಿಕ್ಷಕರು ಕೇಳುವುದಕ್ಕಿಂತ ಕಠಿಣವಾಗಿ ತಯಾರಿ ಮಾಡಿದ್ದಾರೆ...... A
ಇಲ್ಲವಾದಲ್ಲಿ....... B
ಅನುತ್ತೀರ್ಣನಾದರೆ .. C
ಮೇಲಿನ ಎಲ್ಲಾ ಪರೀಕ್ಷೆಯಲ್ಲಿ A=2, B=1, C=0ಅಂಕಗಳನ್ನು ಕೊಟ್ಟು
ನಿಮ್ಮ ಅಂಕ...... A ಅತ್ಯುತ್ತಮ ( Excellent )
B ಉತ್ತಮ (Good)
C ಸಾಧಾರಣ (Fair )
ಹೀಗೆ ಎಲ್ಲಾ ವಿದ್ಯಾರ್ಥಿಗಳು ನಿಮ್ಮ ಓದುವ ರೀತಿಯನ್ನು ಪರೀಕ್ಷಿಸಿ ಕೊಳ್ಳಬಹುದು ಹಾಗೇ ಎಲ್ಲಾ ತಂದೆ ತಾಯಂದಿರು ತಮ್ಮ ಮಕ್ಕಳ ಓದುವ ರೀತಿಯನ್ನು ಪರೀಕ್ಷಿಸಿ ತಕ್ಕ ಪರಿಹಾರವನ್ನು ಹುಡುಕುವುದು.
ಹಾಗೆಯೇ ಈ ರೀತಿ ಸಜ್ಜದ ಮೇಲೆ ನಮ್ಮ ಓದನ್ನು ಪ್ರತಿ 3 ಅಥವಾ 4 ದಿನ ಕೊಮ್ಮೆ ಪುನರ್ ಮನನ ಮಾಡುವುದು ಇನ್ನು ಹೆಚ್ಚಿನ ಉಪಯೋಗವಾಗುತ್ತದೆ. ಯಾಕೆಂದರೆ ಎಂಥಹ ನಿಪುಣನೇ ಆಗಿರಲಿ ಅವನ ತಯ್ಯಾರಿ ಮರೆತು ಹೋಗುತ್ತದೆ.... ಮರೆಯುವಿಕೆ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ ಅದರಿಂದ ಓದಿರುವುದನ್ನು ಪುನರ್ ಮನನ ಮಾಡುವುದು ತುಂಬಾ ಮುಖ್ಯ.
ನಿಮಗೆ ಗೊತ್ತಿರಲಿ ಮರೆವು ಯಾವ KAS, IAS, IFS, IPS..... ಆದವರನ್ನು ಬಿಟ್ಟಿಲ್ಲ
ಬನ್ನಿ ಬನ್ನಿ ಎಲ್ಲಾ ಅಕ್ಷರಸ್ತರಾಗೋಣ
ಅನಕ್ಷರರತೆಯನ್ನು ಬುಡದಿ ಕಿಳೋಣ
ಬನ್ನಿ ಬನ್ನಿ ಎಲ್ಲರೂ ಪುಸ್ತಕ ಓದೋಣ
ಕಲಿತು ಮರೆತು ವಿದ್ಯಾವಂತ ರಾಗೋಣ
ಸಮಾನತೆಯನ್ನು ಅಕ್ಷರದಲ್ಲಿ ಸಾರೋಣ
ಓದು ಒಂದು ನಿರಂತರ ಅಭ್ಯಾಸ, ಬನ್ನಿ ಓದನ್ನು ನಾವು ಹವ್ಯಾಸ ಮಾಡಿಕೊಳ್ಳಣ. ಸತತ ಪರಿಶ್ರಮದಿಂದ ಏನನ್ನಾದರೂ ಸಾಧಿಸಬಹುದು ಮುಖ್ಯವಾಗಿ ನಮಗೆ ಆಸಕ್ತಿ ಇರಬೇಕು. ಆಸಕ್ತಿಯನ್ನು ಪಡೆಯಲು ನಾವು ಉತ್ತೇಜನ ( motivate ) ಆಗಬೇಕು.
*****************ಲೇಖಕರು **************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment