ಕಾಮನ ಬಿಲ್ಲು ನೀನು





 ಬರವಣಿಗೆ ಸಿಗದ ಪದ ಪುಂಜ ನೀನು

ಪದಗಳಿಗೆ ನಿಲುಕದ ಚೆಂದದ ಕವನ ನೀನು

ಕನಸ್ಸಿನ ಸಂತೆಯಲಿ ಅರಳಿದ ಹೂವು ನೀನು

ಬಿಸಿಲ ಮಳೆಯಲಿ ಮೂಡಿದ ಕಾಮನಬಿಲ್ಲು ನೀನು


ಹೇಗೆ ವರ್ಣಿಸಲಿ ನಿನ್ನ ಹೊಳೆವ ಆ ಬಣ್ಣ

ಕದಡಿದ ನೀರಲ್ಲಿ ಕಾಣುವ ಪ್ರತಿಬಿಂಬ ಬಣ್ಣ

ಮರೆತರು ನೆನಪಾಗೋ ನಿನ್ನ ಕೆಂಪು ವರ್ಣ

ಹಾರಿ ಹೂವು ಹುಡುಕುವ ಬಯಕೆಯ ಚಿಟ್ಟೆ ಬಣ್ಣ


ಹರಿವ ನೀರಲ್ಲಿ ಮನಸ್ಸು ಹರಿದು ಬಂದು

ಕಾಣದ ಕಡಲಲಿ ಮುಳುಗಿ ಮುಳುಗಿ ಮಿಂದು

ಕಡಲ ತಡಿಗೆ ಅಪ್ಪಳಿಸಿ ದಡಕೆ ಬಂದು

ಸೋಕಿದ ನಿನ್ನಯ ಪಾದಕೆ ತನ್ನ ತಾನೇ ಕೊಂದು


ಸಂಜೆ ಸೂರ್ಯ ಮುಳುಗುತಾ ನಕ್ಕಂತೆ

ಉದಯಿಸುವ ಚಂದ್ರ ಬಾ ಎಂದು ಕರೆದಂತೆ

ನಕ್ಷತ್ರಗಳ ಗೂಡಿನಲಿ ಬಾಳು ಬೆಳಕಂತೆ

ನೀಲಿ ಆಕಾಶದಲಿ ನಾ ತೇಲಿ ನನ್ನೆ ನಾ ಮರೆತಂತೆ


*************ರಚನೆ ******

   ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35