ಸ್ನೇಹ ಎನ್ನಲೇ
ಒಲವಿನ ಹೂವು ನೀನು
ಸ್ನೇಹದ ದುಂಬಿಯು ನಾನು
ಪ್ರಣಯದಿ ಬೆರೆವ
ಕನಸಲಿ ಮರೆವ
ಸಿಹಿ ತುತ್ತು ನೀನು
ಪ್ರೀತಿಯ ಸವಿಯಲೀ
ನಿನ್ನ ನಾ ಕಂಡೆ
ಅರಳಿದ ಬಾಳಲಿ
ಸವಿ ಬದುಕಲಿ
ಮಿಂದೆ
ಯಾರನೋ ಬಯಸಿ
ಯಾರನೋ ರಮಿಸಿ
ಯಾರೋ ಬಂದಾಗೇ
ಹೂವಿನ ಬಳಿಗೆ
ನೀನು ಹಿರಿದ ಮಕರಂದ
ಎಲ್ಲೊ ಸಿಹಿ ಜೇನ ಹಾಗೆ
ಮನಸ್ಸಿಗೆ ಮರೆತಹಾಗೆ
ನಿನ್ನಲಿ ಕಲೆತ ಹಾಗೆ
ಬದುಕಲಿ ಬೇರೆತ ಹಾಗೆ
ಕಾಣದ ನೆರೆಳೊಂದು
ಬೆಂಬಿಡದೆ ಕಾಡಿದ ಹಾಗೆ
ಅರಳುವ ಸ್ನೇಹದ
ಹೂವು ನಾನು
ಕೇರಳಿ ಕಾಡುವ
ದುಂಬಿಯು ನೀನು
ಹೇಗೆ ಹೇಳಲಿ ಒಲವೆ
ಬೆಳಗ್ಗೆ ಅರಳಿ ನಾ
ಸಂಜೆ ಮುದುಡುವ ಚೆಲುವೆ
ಯಾರದೋ ಮುಡಿಗೆ
ಕಾದಿರೋ ಕಾವ್ಯ ನಾನು
ಸಂಜೆ ಕಳೆಯೋ ಒಳಗೆ
ಬಾಡಿದ ಬೆಡಗಿ ನಾನು
ಸ್ನೇಹ ಎನ್ನಲೇ ನಾನು
ಪ್ರೇಮ ಎನ್ನಲೇ ನಾನು
ಮೋಸ ಎನ್ನಲ್ಲೇ ನಿನ್ನ
ದ್ರೋಹ ಎನ್ನಲೇ ನಿನ್ನ
ಸೂರ್ಯ ಕಂಡ ಮೇಲೆ
ಮೈದುಂಬಿ ಅರಳಿ
ಚಂದ್ರ ಮೂಡ ಒಳಗೆ
ಹೋದೆ ನಾನು ನರಳಿ
ಕಾಣದ ಕೈಯೊಂದು ಕೈ ತಾಗಿ
ಮರೆತಂತೆ
***********ರಚನೆ ********
ಡಾ ಚಂದ್ರಶೇಖರ. ಸಿ. ಹೆಚ್
Comments
Post a Comment