Posts

Showing posts from June, 2022

ಭರವಸೆಯ ಬೆಳಕು

Image
ಬದುಕು ಭರವಸೆಯ ಬೆಳಕು ಜೀವನ ಸುಖ ದುಃಖದ ಸರಕು ಬಾಳು ನೋವು ನಲಿವಿನ ಮೆಲುಕು ಆಸೆ ವಿಧಿ ಆಡಿಸೋ ತುಣುಕು ಪ್ರೀತಿ ಪ್ರೇಮದಿ ಮನಸ್ಸು ಖುಷಿ ಕಾಮ ಕ್ರೋದ ದಹಿಸಿದವ ಋಷಿ ಕನಸ್ಸು ಮನಕೆ ನೀಡುವ ಸಿಹಿ ಜೀವ ಮಸಣದಿ ಖಾಲಿ ಹಾಳೆ ಸಹಿ ಮನದ ಆಸೆಗೆ ಹಾಕಿದರೆ ಬೇಲಿ ನೋವ ಸಂತೆ ಹೃದಯದಿ ಖಾಲಿ ದೇವರು ಕೊಟ್ಟು ಪಡೆವ ಮಾಲಿ ಆಡಿಸಿದಂತೆ ಆಡುವ ನಾವೇ ಕೂಲಿ ಬೆಳುಕು ಕಂಡ ಮೇಲೆ ಇರುಳು ನೋವು ಉಂಡ ಮನಕೇ ನೆರಳು ಮನುಷ್ಯ ನೀ ಆಗುವೆ ಮರುಳು ಪ್ರೀತಿಲಿ ಮಿಡಿದಿದೆ ಹೆತ್ತ ಕರುಳು ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಓ ಹೃದಯ

Image
ಓ ಹೃದಯ ಓ ಹೃದಯ ನೆನಪುಗಳು ಏಕೊ ಕಾಡಿದೆ ಮನವೆಕೋ ಬಳಲಿ ಬೇಡಿದೆ ನನ್ನಾಸೆ ಕೊಳದಲ್ಲಿ ತೇಲಿದೆ ಕಣ್ಣಸನ್ನೆ ಕರೆದಂತೆ ನನ್ನ ಪ್ರತಿಬಿಂಬ ಮರೆಯಾಗೋ ಮುನ್ನ ಮಾತು ಮಾತು ಇತವಾಯ್ತು ಎರಡು ಮನಸು ಜೊತೆಯಾಯ್ತು ಜೋಡಿ ಹಕ್ಕಿ ಕುಣಿದಂತೆ ನಮ್ಮ ಪ್ರೀತಿ ನಗುವ ಈ ಸಂತೆ ಬಯಕೆಗಳು ಚಿಗುರಿ ಕನಸ್ಸುಗಳು ಕುಣಿದಂಗೆ ನಲಿದ್ಯತೆ ವಯಸ್ಸು ಆದಂತೆ ನನಸ್ಸು ಕುಣಿವ ಕಾಲುಗಳಲಿ ಗೆಜ್ಜೆಯ ನಾದ ನನ್ನೆದೆಯು ಕೇಳಿ ನುಡಿದಂತೆ ರಾಗ ಮಿಡಿವ ಪ್ರೀತಿಗೆ ಕಣ್ಣೀರ ಮಳೆ ನಾನು ನೀನು ಸೇರಿ ನಡೆವಾಗ ಬೆಳೆದಂತೆ ಬೆಳೆ ಮನದ ಆಸೆ ಏಕೊ ಮುಗಿಲು ನಕ್ಷತ್ರಗಳ ಊರಲಿ ಏಕೊ ದಿಗಿಲು ಚಂದ್ರನ ಬೆಳಕಲಿ ಕಾರ್ಮೋಡಗಳ ಬುಗಿಲು ನನ್ನವಳ ಒಲವು ನನಗಿಂತ ಮಿಗಿಲು  ********ರಚನೆ *********

ನೀ ನಡೆವ ಹಾದಿ

Image
ನೀ ನಡೆವ ಹಾದಿಯಲ್ಲಿ ಮುಳ್ಳು ಹೂವಾಯಿತು ನಿನ ಕಂಡ ನನ್ನ ಮನಕೆ ಪ್ರೀತಿ ಹುಟ್ಟಾಯಿತು ಕನಸು ಕಂಡ ಮನಸ್ಸು ನಿನ್ನ ಹೆಸರ ಕೂಗಿದೆ ಒಲವ ಬೀಸಿ ಮಳೆಗೆ ನೆನೆದು ಮನ ತಂಪಾಗಿದೆ ಹೃದಯದಿ ಸದ್ದು ನಿನ್ನ ನೋಡಿ ಬಾ ಎಂದಿದೆ ಆಕಾಶದಿ ಹಾರುವ ಬಯಕೆ ಮನದಿ ಮನೆ ಮಾಡಿದೆ ಮುಗಿಲ ಬಿಳಿ ಮೋಡದಿ ಈಜುವಸೆ ಏಕೊ ನನಗೆ ನೀಲಿ ಬಾನಲಿ ಕುಣಿವೆ ಆಸೆ ನನ್ನೀ ಸವಿ ಮನಕೆ ಆಕಾಶದ ಮೋಡದಿ ನಕ್ಷತ್ರ ಬಿತ್ತಿ ಕುಳಿತು ನಗುತಿದೆ ಮೋಡಗಳ ಮರೆಯಲಿ ಚಂದ್ರನ ಬೆಳಕು ಮಾಸಿದೆ  ಕುಣಿದು ಕುಣಿದು ಮನವು ತಣಿದು ಮಾತು ಮೌನವಾಗಿದೆ ನಿನ್ನ ಕಂಡ ನನ್ನ ಒಳಗೆ ಹಸಿರು ಆಸೆ ಮೊಳೆತಿದೆ *******ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ತೀರದ ಅಲೆ

Image
ನಾನು ನೀನು ತೀರದ ಅಲೆ ನಗುವೇಕೋ ಮಾತಿನ ಸೆಲೆ ಆಸೆ ಒಂದು ಬದುಕಿನ ಬಲೆ ಹುಡುಕಲಿ ಹೇಗೆ ನಾನು ನೆಲೆ ಹೃದಯದಿ ಬಡಿವ ಬಡಿತ ಏಕೊ ಏನೋ ನಿನ್ನ ಸೆಳೆತ ಮನದಲಿ ಪ್ರೀತಿ ಮೊರೆತ ನನ್ನಲಿ ಇಂದು ನವಿಲ ಕುಣಿತ ಕಾಣದ ದಾರಿ ನೀನೆ ತೋರಿ ಮರೆತರೆ ಎಗೆ ಒಲವಲಿ ಜಾರಿ ಕನಸು ಕರೆದಿದೆ ಪ್ರತಿ ಬಾರಿ ನೀನೆ ನನ್ನ ಪ್ರೀತಿಯ ನಾರಿ  ಹೊಸತನ ಹುಡುಕಿದೆ ಇಂದು ನೆನಪುಗಳು ಮೌನದ ಬಿಂದು ಆಸೆಗಳ ಬಾನಡಿ ನಾ ಕೊಂದು ಜಾರಿದೆ ಮನವು ನನ್ನವಳೆಂದು *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಓ ಗೆಳತಿ

Image
ಮನವ ತಣಿಸೆಯ ಗೆಳತಿ ಮನವ ತಣಿಸೆಯ ನನ್ನ ಕುಣಿಸೆಯ ಗೆಳತಿ ನಿನ್ನ ಒಲವಲಿ ನನ್ನ ಕುಣಿಸೆಯ ಗೆಳತಿ ನಿನ್ನ ನಗುವು ನನ್ನ ಕಾಡಿದೆ ಮನದ ಒಳಗೆ ಆಸೆ ಮೊಳೆತಿದೆ ಒಲವು ಚಿಗುರು ಬಿರಿದು ಬಂದಿದೆ ಗೆಳತಿ ತಂಗಾಳಿಯಲಿ ತಾಗುವ  ಉಸಿರು ನೀನಾದೆ ಗೆಳತಿ   ಸುಡುವ ಮನಕೆ ತಂಪೆರೆವಾ    ನೀರು ನೀನಾದೆ ಗೆಳತಿ  ಬೋರ್ಗರೆವಾ ಮನಕೆ   ಕಡಲ ತಡಿ ನೀನಾದೆ ಗೆಳತಿ ನಿನ್ನಯ ಸವಿ ಒಲವಲಿ  ತೆಲುವಾಸೆ ನನಗೆ ಗೆಳತಿ ನಿನ್ನಯ ಮನದ ಕಡಲಲಿ  ಈಜುವಾಸೆ ನನ್ನ ಒಡತಿ ಇಬ್ಬನಿ ಸೋಕಿದಾಗೆ ನಿನ್ನ  ಪ್ರೀತಿ ಬಿಸಿಲಿಗೆ ಕರಗಿದ ರೀತಿ ಮುಂಜಾನೆ ಮುಸುಕಲ್ಲಿ  ನೀ ಹಸಿರಾಗಿ ಅವಿತು ನಸುನಗುವ ನಿನ ಪ್ರೀತಿಯಂತೆ  ಕನಸಲಿ ಬೆರೆತು ಸೂರ್ಯನ ನಗುವಿಗೆ  ನನ್ನವಳು ಬೇವತು ಕವಳ ಮರೆಯಾದಂತೆ  ಕಣ್ಣೀರು ಕಲೆತು ನೀ ನನ್ನವಳಾದಂತೆ  ಮುನಿಸು ಮರೆತು ಗೆಳತಿ  **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಅನುರಾಗ

Image
ಮನಸಿನ ಅನುರಾಗ ನನ್ನೆದೆಯ ತಾಕಿರಲು ಹಸಿ ಕನಸ್ಸೊಂದು ಮನವನು ಕೂಗಿರಲು ಒಲವು ಸಿಹಿ ಜೇನು ಸವಿಯ ನೀಡಿರಲು ಕಾಣದ ಬೆಳಕೊಂದು ಮನೆಯ ಬೆಳಗಿರಲು ಕಣ್ಣ ನೀರು ಏಕೊ ಕಂಬನಿ ಮಿಡಿದಿರಲು  ಮಿಡಿದಿದೆ ಹೃದಯ ಒಲವ ಸವಿ ತಾಗಿ ಕಣ್ಣಂಚಲಿ ಹನಿಯೊಂದು ನೋವಲಿ ಕೂಗಿ ಹರಿವ ನದಿಯಂತೆ ಹುಕ್ಕಿ ಹರಿಯುತಿದೆ ಸೇರಲು ಬಯಸಿ ಸಮುದ್ರ ಬತ್ತಿದೆ ನೀರು ಬಾನಅಂಚಲಿ ಬದುಕು ಕೀಳುತಿದೆ ಸೂರು ಬಿಡಿಸಿ ದೇವರಿಗೆ ತಿಳಿಸುವರು ಯಾರು ಯಾರದೋ ಗಾಳಕೆ ಮೀನು ಸಿಲುಕಿತು ನೋವಿನ ಬಲೆಯಲಿ ಕುಣಿದು ನಲಿಯಿತು ಜೀವವ ತೆತ್ತು ಹೊಟ್ಟೆ ತುಂಬಿಸಿ ಆಸರೆಯಾಯಿತು ಯಾರಿಗೆ ಹೇಳಬೇಕು ಮೀನು ನೋವಿನ ಕಥೆಯ ಕಾಣದ ಜೀವದ ಬಾವನೆ ಬರಡು ಕುಣಿವ ಮನಕೆ ನೋವಿನ ನೆರಳು ಕಣ್ಣಿರಲಿ ಮುಳುಗಿದೆ ಹೆತ್ತ ಕರುಳು ಕಳೆದ ನೋವಲಿ ಸರಿದ ರಾತ್ರಿ ಇರುಳು ಮುನಿಸು ನನ್ನೆದೆಯ ಒಲವ ಸವಿ ತೀರಿಳು  *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಮನ ಕುಣಿದು

Image
ಕನಸ್ಸುಗಳು ಮನದಿ ಕುಣಿದು ಒಲವಲ್ಲಿ ನನ್ನ ಬಳಿ ಕರೆದು ನೂರಸೆ ಮಿಡಿವ ಹೃದಯ ಮನತುಂಬಿದ ಮನಸ್ಸು ನಲಿದು ನನ್ನಾಸೆಯ ಬದುಕು ಕೇಳಿತು ಮನದಾಸ್ಸೇಗೆ ಕನಸ್ಸು ಕೆರಳಿತು ಕುಣಿದು ಅರಿವ ಬಯಕೆ ಮೂಡಿತು ಸ್ನೇಹದ ಬೆಳಕು ಮತ್ತೆ ಕರೆಯಿತು ಕಣ್ಣಾ ಅಂಚಲಿ ಕುಣಿಸಿದೆ ನನ್ನ ಉಸಿರು ಹೆಸರಾಗಿ ಸೇರುವ ಮುನ್ನ ಕಾಣದ ಆಸೆ ಕಾಡಿದೆ ಇನ್ನ ಏನು ಏಳಲಿ ಪ್ರೀತಿಯೇ ನಿನ್ನ ಯಾಕೆ ನನ್ನ ಕಾಡುತಿದೆ ಒಲವು ಕಾದ ಮನಸ್ಸು ಕಂಡ ನಲಿವು ಪ್ರೀತಿ ಸೊಗಡು ನನ್ನ ತುಂಬಿ ಸೇರಲು ಸ್ವರ್ಗ ಒಲವನು ನಂಬಿ ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ನೀ ನನ್ನ ಒಲವು

Image
ನನ್ನೆದೆಗೆ ತಾಕಿದ ಹೂವು ನುಡಿಯಿತು ನನ ಕಂಡು ಒಲವಾಯಿತು    ನನಗೆ ನನ್ನ ಮೂಡಿಯುವೆಯ ತೆರೆದೆ ಹೃದಯದಿ ಕೊನೆಗೆ ಕಾಣದ ದಾರಿಯಲಿ  ನಿನ್ನಿಂದೆ ಮನಸ್ಸು ಕಾಡಿದೆ ಒಳಗೆ ನನ್ನ ಒಲವ ಕೊಡು ನನಗೆ ತನುವು ಕಾಡಿದೆ ಹಾಗೆ ನೀನೆ ನನ್ನಉಸಿರು ಎನಗೆ  ಅರಿಯದ ನಗುವು ಮನದಿ ಕನಸ್ಸು ಒಲವಾಗೋ ಬಲದಿ ನೀ ನನ್ನವಳೆಂಬ  ಚಲದಿ ಶುರುವಾಯಿತು ಒಲವು ಪಣದಿ ನಸುನಕ್ಕು ಹೃದಯ ಹೇಳಿತು ಮನದಾಸೆ ಕೇಳಿ ಕರೆಯಿತು ಮಾತೆಲ್ಲ ಪ್ರೀತಿ ಮುತ್ತಾಯ್ತು ನೀ ನನ್ನವಳು ಎಂದು ಬರೆಯಿತು ತೆರೆದ ಬದುಕಿಗೆ ನೀ ದೀಪ ನನ್ನ ಒಲವ ಕನಸ್ಸು ಪಾಪ ಬೇಡ ಎನಗೆ ಪ್ರೀತಿ ತಾಪ ಸಾಕು ಮಾಡು ದೇವಾ ನೀ ಕೋಪ ಯಾರದೋ ಆತ್ಮದ ಶಾಪ ಕಳೆದ ನೋವಿನ ಕಣ್ಣೀರ ರೂಪ  ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಬಾರೆ ಗೆಳತಿ

Image
ಮನದಾಗೆ ನೂರಾಸೆ ಗೆಳತಿ ಕನಸಾಗೇ ನೀ ನನಗೆ ಹಿಡಿಸಿ  ನಾ ಬಂದೆ ನಿನ್ನ ಅರಸಿ ಪ್ರೀತಿ ಮನದಿ ಚಿಗುರಿ ನಾ ಅದೇ ನೀ ಆಡಿಸೋ ಬುಗುರಿ ಇಟ್ಟೆ ನಾ ನಿನ ಮೇಲೆ ಆಸೆ ಕೊಡು ನೀನು ಒಲವ ಭಾಷೆ ಆಸೆಯ ಹೊತ್ತು ಬಂದೆ ನಿನ ಸೇರಗ ಹಿಡಿದು ನಿಂದೆ ಒಮ್ಮೆ ನೀನು ಹೇಳು ಗೆಳತಿ ಲವ್ ಯು ಅಂತ ನನ್ನ ಒಡತಿ ನಮ್ಮಿಬ್ಬರ ಜೋಡಿ ನೋಡಿ ಹೇಳವ್ರೆ ಹಾಡು ಹಾಡಿ ಕುಣಿದೈತಿ ಮನಸ್ಸು ಕೂಡಿ ನಲಿದೈತಿ ಹೃದಯ ಬೇಡಿ  ಮನದಾಗೆ ನೂರಾಸೆ ಗೆಳತಿ ಕನಸಾಗೇ ನೀ ನನಗೆ ಹಿಡಿಸಿ  ನಾ ಬಂದೆ ನಿನ್ನ ಅರಸಿ ಬಾನಾಂಚಿನ ನಕ್ಷತ್ರ ಕಂಡೆ ಬೆಳದಿಂಗಳ ಚಂದ್ರನ ಬೆಳಕ ಕಂಡೆ ಮೋಡದ ಮರೆಯಲಿ ಸರಿದ ಬೆಳಕಲಿ ನಿನ್ನ ಪ್ರತಿಬಿಂಬವ ಕಂಡೆ  ಸ್ವರ್ಗದಿ ಕುಣಿವ ಆಸೆ ನಂದು ನಿನ ನೆನಪಲಿ ಮನಸ್ಸು ಮಿಂದು ಕೂಗಿದೆ ಗೆಳತಿ ಬರುವೆಯಾ ನೀನು ಉಸಿರ ಅರಮನೆಗೆ ಒಡತಿ ಹೃದಯದಿ ಮುಚ್ಚಿಟ್ಟ ಕನಸ್ಸು ಹಾಗಾಯ್ತೆ ನಿನ ಮೇಲೆ ಮನಸ್ಸು ಮಾಡೋಣ ಪ್ರೀತಿಯ ನನಸ್ಸು ಕರೆದಿದೆ ಈ ನಮ್ಮ ವಯಸ್ಸು ಮನದಾಗೆ ನೂರಾಸೆ ಗೆಳತಿ ಕನಸಾಗೇ ನೀ ನನಗೆ ಹಿಡಿಸಿ  ನಾ ಬಂದೆ ನಿನ್ನ ಅರಸಿ ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ನಾ ಸೋತೆ

Image
  ಕನಸ್ಸುಗಳು ಸೋತೋದವು ಬರೆವಸೇಗಳು ಉಸಿಯಾದವು ಆಸೆಗಳು ಕಮರಿ ಹೋದವು ನನ್ನ ಒಲವ ಹೂವು ಬಾಡಿದವು ಏತಕಾಗಿ ಈ ನೋವಿನ ಪಯಣ ಕಾಣದ ಸುಖಕಾಗಿ ಇಲ್ಲಿ ಜನನ ಹುಡುಕುತ ಕನಸ್ಸುಗಳ ದಿಬ್ಬಣ ಹೊರಟಿದೆ ಗಾಡಿ ಹುಡುಕುತ ಮರಣ  ಮುಂದೆ ಸಾಗಿ ಇಂದೆ ನೋಡಿದೆ ಕಳೆದ ಕ್ಷಣಗಳ ತೂಕ ಮಾಡಿದೆ ಖುಷಿ ಮನಸು ತುಂಬಿಕುಣಿದಿದೆ  ದುಃಖ್ಖ ಜೀವ ಇಂಡಿ ತೂಪ್ಪೇ ಮಾಡಿದೆ ಎಷ್ಟು ದಿನ ಬದುಕ ಬೇಕು ಇಗೆ ನೋವಲ್ಲಿ ಕಣ್ಣೀರು ಬರುತಿದೆ ಹಾಗೆ ರಾತ್ರಿಗಳು ಕಾಣುತಿವೆ ಭಿಕ್ಷುಕನಂತೆ ಹಗಲು ನನ್ನ ಕಾಡುತಿದೆರಾಕ್ಷಸನಂತೆ  ಸಮುದ್ರದಿ ಸುನಾಮಿ ಎದಿದ್ದೆ ಮನದಿ ಅಲೆಗಳ ಹೊಡತಕೆ ನಲುಗುತಿದೆ ಜೀವ ಯಾರಿಗೆ ಹೇಳಲಿ ನಾನು ನೋವ ಕೊಡು ದೇವಾ ನನಗೆ ನೋವೇ ಇಲ್ಲದ ಸಾವ **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನಿನದೆ ಅನುರಾಗ

Image
ನನ್ನ ಒಲವ ನೆನಪಿನಲಿ                 ನಿನದೆ ಅನುರಾಗ ನನ್ನ ಉಸಿರ ಆಸೆಯಲಿ                  ನೆನೆದು ಸುಯೋಗ ಬಿರು ಬಿಸಿಲ ಬೇಸಿಗೆಯಲಿ                  ತಂಗಾಳಿಯ ವೇಗ ಮಾತುಗಳು ಇತವಾಗಿ ನನ              ಕಾಡೋ ನೆನಪಿನ ರಾಗ ಮನದ ಬಯಕೆಗಳು                  ರೆಕ್ಕೆಗಳ ಬಿಚ್ಚಿ ಕಂಡ ಕನಸುಗಳು ಆಕಾಶದಿ                ಹಕ್ಕಿಯಂತೆ ಹಾರಿ ನನ್ನ ಪ್ರೀತಿ ಅನುರಾಗ                ಹುಡುಕುತಿದೆ ದಾರಿ ಮೋಡದ ನೀಲಿ ಬಾನಲಿ                 ತೆಲುತಿದೆ ಹೌಹಾರಿ ಬಣ್ಣದ ಬದುಕಿನಲಿ               ಮಿಂಚುತ್ತಿದೆ ಚಿಟ್ಟೆ ದುಂಬಿಯು ರಸ ಹೀರಿ                ಹೂಗಳನು ಸುಟ್ಟೆ ಹರಿವ ನೀರಿಗೆ ಮೈ ತುಂಬಿ                 ಹರಿದಿದೆ ಒಡಲ ಕಟ್ಟೆ ನನ್ನೆದೆಯ ಬಾನಿನಲ್ಲಿ                  ಒಡೆದಂತೆ ಮೊಟ್ಟೆ ಮನಸ್ಸು ಮುರಿದ ಹೃದಯ                ಕಣ್ಣಿರಲಿ  ಬರಿದು ನನ್ನವಳ ಕುಡಿ ನೋಟ                 ನನ್ನನು ಕೊರೆದು ಹೇಗೆ ಇರಲಿ ನಾನು                 ಪ್ರೀತಿ ತೊರೆದು ಬದುಕು ಸರಿಯಿತು ನೋವು                ನಲಿವುಗಳ ಕಳೆದು **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಹದಿ ಹರೆಯ

Image
ಹದಿಹರೆಯಕೆ ಕನಸುಂಟು ಬಯಕೆಗಳು   ನೂರೆಂಟು ಮನ ಮಿಡಿವ ಕಥೆಉಂಟು ನೋವು ನಲಿವ ಗಂಟು ಉಂಟು ಏನೋ ಬೇಕೇನುವ ಬಯಕೆ ಆಸೆಗಳು ಕುಣಿವ  ಮನಕೆ ಕನಸ್ಸುಗಳು ದೇವರಿಗೆ ಹರಕೆ ಯಾರು ನೀಡಬೇಕು ಮದ್ದು ಈ ಜ್ವರಕೆ ಮನದಿ ಮಿಡಿತದ ಪ್ರೀತಿ ಒಲವು ಕನಸ್ಸಗೋ ರೀತಿ ಮನುವು ಕುದುರೆಯಾಗಿ ಒಡಯ್ಯತಿ ಹೃದಯ ಅರಳುವ ನೀತಿ ಯಾರು ಬಲ್ಲರು ಈ ಕಾಯಿಲೆಯ ಹದಿಹರೆಯದ ಪ್ರೀತಿ ಪ್ರಣಯ ಜೋಡಿ ಹಕ್ಕಿಗಳ ಮನೆಯ ಕುಣಿದು ನಲಿವ ಒಲವ ಸವಿಯ ಮನಸ್ಸಿನ ಒಳಗೆ ತಳಮಳ ಉಕ್ಕಿ ಹರಿಯುತಿಹಾ ಪ್ರಾಯ ಜಳ ಜಳ  ಪ್ರೀತಿ ಹೊಳೆಯುತಿಹುದು ಪಳ ಪಳ  ಕುದಿಯುತಿಹಾ ವಿರಹ ಮಳ ಮಳ **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನಸು ನಕ್ಕವಳು

Image
ನನ್ನೆದೆಯ ಅರಮನೆಗೆ ನೀ ಅದೇ ಒಡತಿ ನನ್ನ ಉಸಿರ ಸವಿ ಒಲವಿಗೆ ನೀ ಗೆಳತಿ ನನ್ನಾಸೆಯ ಕನಸ್ಸಿಗೆ ನಿನ್ನಾದೆ ದಾರಿ ನನ್ನ ಮನವ ಗೆದ್ದ ಪ್ರೀತಿ ಚೋರಿ ನಡೆವ ದಾರಿಯಲಿ ನಿನ್ನದೆ ಹೆಸರು ಮನದ ಮಾತು ಹೊಂಗನಸಂತೆ ಹಸಿರು ನನ್ನ ಸೆಳೆದ ಮಾಮರದ ಒಲವ ಚಿಗುರು ನನ್ನ ಪ್ರೀತಿ ತೋಟದ ಮುದ್ದು ಪಾರು ಏಕಾಂತದಿ ಮನಸ ಸೋಕಿದ ಕನಸ್ಸು ಒಲವ ಬಯಕೆ ನಸುನಕ್ಕಂತೆ ಸೊಗಸು ಬದುಕು ಭರವಸೆಗಳ ಹಸಿ ಮುನಿಸು ಇರುಳ ಬೆಳಕಲಿ ಚಂದ್ರನ ನೋಡಿ ನಕ್ಕಂತೆ ಕೂಸು ಜೀವನದ ಹಾದಿಯಲಿ ಪ್ರೀತಿ ಸಹಜ ಮನಸ್ಸು ಗೆಲ್ಲಬೇಕು ಒ ಜಲಜ  ನನ್ನಾಸೆ ಒಲವು ಕೇಳಿತು ತನುಜಾ ಪ್ರೀತಿ ಮನ ತುಂಬಿದಂತೆ ಹೊನ್ನ ಕಣಜ ********ರಚನೆ *******  ಡಾ. ಚಂದ್ರಶೇಖರ. ಸಿ. ಹೆಚ್