ನೀ ನಡೆವ ಹಾದಿ




ನೀ ನಡೆವ ಹಾದಿಯಲ್ಲಿ

ಮುಳ್ಳು ಹೂವಾಯಿತು

ನಿನ ಕಂಡ ನನ್ನ ಮನಕೆ

ಪ್ರೀತಿ ಹುಟ್ಟಾಯಿತು


ಕನಸು ಕಂಡ ಮನಸ್ಸು

ನಿನ್ನ ಹೆಸರ ಕೂಗಿದೆ

ಒಲವ ಬೀಸಿ ಮಳೆಗೆ

ನೆನೆದು ಮನ ತಂಪಾಗಿದೆ


ಹೃದಯದಿ ಸದ್ದು ನಿನ್ನ

ನೋಡಿ ಬಾ ಎಂದಿದೆ

ಆಕಾಶದಿ ಹಾರುವ ಬಯಕೆ

ಮನದಿ ಮನೆ ಮಾಡಿದೆ


ಮುಗಿಲ ಬಿಳಿ ಮೋಡದಿ

ಈಜುವಸೆ ಏಕೊ ನನಗೆ

ನೀಲಿ ಬಾನಲಿ ಕುಣಿವೆ

ಆಸೆ ನನ್ನೀ ಸವಿ ಮನಕೆ


ಆಕಾಶದ ಮೋಡದಿ ನಕ್ಷತ್ರ

ಬಿತ್ತಿ ಕುಳಿತು ನಗುತಿದೆ

ಮೋಡಗಳ ಮರೆಯಲಿ

ಚಂದ್ರನ ಬೆಳಕು ಮಾಸಿದೆ 


ಕುಣಿದು ಕುಣಿದು ಮನವು

ತಣಿದು ಮಾತು ಮೌನವಾಗಿದೆ

ನಿನ್ನ ಕಂಡ ನನ್ನ ಒಳಗೆ

ಹಸಿರು ಆಸೆ ಮೊಳೆತಿದೆ



*******ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments