ಓ ಗೆಳತಿ
ಮನವ ತಣಿಸೆಯ ಗೆಳತಿ
ಮನವ ತಣಿಸೆಯ
ನನ್ನ ಕುಣಿಸೆಯ ಗೆಳತಿ ನಿನ್ನ
ಒಲವಲಿ ನನ್ನ ಕುಣಿಸೆಯ ಗೆಳತಿ
ನಿನ್ನ ನಗುವು ನನ್ನ ಕಾಡಿದೆ
ಮನದ ಒಳಗೆ ಆಸೆ ಮೊಳೆತಿದೆ
ಒಲವು ಚಿಗುರು ಬಿರಿದು ಬಂದಿದೆ ಗೆಳತಿ
ತಂಗಾಳಿಯಲಿ ತಾಗುವ
ಉಸಿರು ನೀನಾದೆ ಗೆಳತಿ
ಸುಡುವ ಮನಕೆ ತಂಪೆರೆವಾ
ನೀರು ನೀನಾದೆ ಗೆಳತಿ
ಬೋರ್ಗರೆವಾ ಮನಕೆ
ಕಡಲ ತಡಿ ನೀನಾದೆ ಗೆಳತಿ
ನಿನ್ನಯ ಸವಿ ಒಲವಲಿ
ತೆಲುವಾಸೆ ನನಗೆ ಗೆಳತಿ
ನಿನ್ನಯ ಮನದ ಕಡಲಲಿ
ಈಜುವಾಸೆ ನನ್ನ ಒಡತಿ
ಇಬ್ಬನಿ ಸೋಕಿದಾಗೆ ನಿನ್ನ
ಪ್ರೀತಿ ಬಿಸಿಲಿಗೆ ಕರಗಿದ ರೀತಿ
ಮುಂಜಾನೆ ಮುಸುಕಲ್ಲಿ
ನೀ ಹಸಿರಾಗಿ ಅವಿತು
ನಸುನಗುವ ನಿನ ಪ್ರೀತಿಯಂತೆ
ಕನಸಲಿ ಬೆರೆತು
ಸೂರ್ಯನ ನಗುವಿಗೆ
ನನ್ನವಳು ಬೇವತು
ಕವಳ ಮರೆಯಾದಂತೆ
ಕಣ್ಣೀರು ಕಲೆತು
ನೀ ನನ್ನವಳಾದಂತೆ
ಮುನಿಸು ಮರೆತು ಗೆಳತಿ
**********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment