ನಾ ಸೋತೆ

 



ಕನಸ್ಸುಗಳು ಸೋತೋದವು

ಬರೆವಸೇಗಳು ಉಸಿಯಾದವು

ಆಸೆಗಳು ಕಮರಿ ಹೋದವು

ನನ್ನ ಒಲವ ಹೂವು ಬಾಡಿದವು


ಏತಕಾಗಿ ಈ ನೋವಿನ ಪಯಣ

ಕಾಣದ ಸುಖಕಾಗಿ ಇಲ್ಲಿ ಜನನ

ಹುಡುಕುತ ಕನಸ್ಸುಗಳ ದಿಬ್ಬಣ

ಹೊರಟಿದೆ ಗಾಡಿ ಹುಡುಕುತ ಮರಣ 


ಮುಂದೆ ಸಾಗಿ ಇಂದೆ ನೋಡಿದೆ

ಕಳೆದ ಕ್ಷಣಗಳ ತೂಕ ಮಾಡಿದೆ

ಖುಷಿ ಮನಸು ತುಂಬಿಕುಣಿದಿದೆ 

ದುಃಖ್ಖ ಜೀವ ಇಂಡಿ ತೂಪ್ಪೇ ಮಾಡಿದೆ


ಎಷ್ಟು ದಿನ ಬದುಕ ಬೇಕು ಇಗೆ

ನೋವಲ್ಲಿ ಕಣ್ಣೀರು ಬರುತಿದೆ ಹಾಗೆ

ರಾತ್ರಿಗಳು ಕಾಣುತಿವೆ ಭಿಕ್ಷುಕನಂತೆ

ಹಗಲು ನನ್ನ ಕಾಡುತಿದೆರಾಕ್ಷಸನಂತೆ 


ಸಮುದ್ರದಿ ಸುನಾಮಿ ಎದಿದ್ದೆ ಮನದಿ

ಅಲೆಗಳ ಹೊಡತಕೆ ನಲುಗುತಿದೆ ಜೀವ

ಯಾರಿಗೆ ಹೇಳಲಿ ನಾನು ನೋವ

ಕೊಡು ದೇವಾ ನನಗೆ ನೋವೇ ಇಲ್ಲದ ಸಾವ


**********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ- ಭಾವಗೀತೆ ಸಂಕಲನ

ಸಂತೋಷವಾಗಿರಲು ಪ್ರಯತ್ನಿಸೋಣವೇ- ವ್ಯಕ್ತಿತ್ವ ವಿಕಸನ

Author biography of Chandrashekhar Channapura Halappa