ನಿನದೆ ಅನುರಾಗ
ನನ್ನ ಒಲವ ನೆನಪಿನಲಿ
ನಿನದೆ ಅನುರಾಗ
ನನ್ನ ಉಸಿರ ಆಸೆಯಲಿ
ನೆನೆದು ಸುಯೋಗ
ಬಿರು ಬಿಸಿಲ ಬೇಸಿಗೆಯಲಿ
ತಂಗಾಳಿಯ ವೇಗ
ಮಾತುಗಳು ಇತವಾಗಿ ನನ
ಕಾಡೋ ನೆನಪಿನ ರಾಗ
ಮನದ ಬಯಕೆಗಳು
ರೆಕ್ಕೆಗಳ ಬಿಚ್ಚಿ
ಕಂಡ ಕನಸುಗಳು ಆಕಾಶದಿ
ಹಕ್ಕಿಯಂತೆ ಹಾರಿ
ನನ್ನ ಪ್ರೀತಿ ಅನುರಾಗ
ಹುಡುಕುತಿದೆ ದಾರಿ
ಮೋಡದ ನೀಲಿ ಬಾನಲಿ
ತೆಲುತಿದೆ ಹೌಹಾರಿ
ಬಣ್ಣದ ಬದುಕಿನಲಿ
ಮಿಂಚುತ್ತಿದೆ ಚಿಟ್ಟೆ
ದುಂಬಿಯು ರಸ ಹೀರಿ
ಹೂಗಳನು ಸುಟ್ಟೆ
ಹರಿವ ನೀರಿಗೆ ಮೈ ತುಂಬಿ
ಹರಿದಿದೆ ಒಡಲ ಕಟ್ಟೆ
ನನ್ನೆದೆಯ ಬಾನಿನಲ್ಲಿ
ಒಡೆದಂತೆ ಮೊಟ್ಟೆ
ಮನಸ್ಸು ಮುರಿದ ಹೃದಯ
ಕಣ್ಣಿರಲಿ ಬರಿದು
ನನ್ನವಳ ಕುಡಿ ನೋಟ
ನನ್ನನು ಕೊರೆದು
ಹೇಗೆ ಇರಲಿ ನಾನು
ಪ್ರೀತಿ ತೊರೆದು
ಬದುಕು ಸರಿಯಿತು ನೋವು
ನಲಿವುಗಳ ಕಳೆದು
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment