ಭರವಸೆಯ ಬೆಳಕು
ಬದುಕು ಭರವಸೆಯ ಬೆಳಕು
ಜೀವನ ಸುಖ ದುಃಖದ ಸರಕು
ಬಾಳು ನೋವು ನಲಿವಿನ ಮೆಲುಕು
ಆಸೆ ವಿಧಿ ಆಡಿಸೋ ತುಣುಕು
ಪ್ರೀತಿ ಪ್ರೇಮದಿ ಮನಸ್ಸು ಖುಷಿ
ಕಾಮ ಕ್ರೋದ ದಹಿಸಿದವ ಋಷಿ
ಕನಸ್ಸು ಮನಕೆ ನೀಡುವ ಸಿಹಿ
ಜೀವ ಮಸಣದಿ ಖಾಲಿ ಹಾಳೆ ಸಹಿ
ಮನದ ಆಸೆಗೆ ಹಾಕಿದರೆ ಬೇಲಿ
ನೋವ ಸಂತೆ ಹೃದಯದಿ ಖಾಲಿ
ದೇವರು ಕೊಟ್ಟು ಪಡೆವ ಮಾಲಿ
ಆಡಿಸಿದಂತೆ ಆಡುವ ನಾವೇ ಕೂಲಿ
ಬೆಳುಕು ಕಂಡ ಮೇಲೆ ಇರುಳು
ನೋವು ಉಂಡ ಮನಕೇ ನೆರಳು
ಮನುಷ್ಯ ನೀ ಆಗುವೆ ಮರುಳು
ಪ್ರೀತಿಲಿ ಮಿಡಿದಿದೆ ಹೆತ್ತ ಕರುಳು
********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment