ತೀರದ ಅಲೆ
ನಾನು ನೀನು ತೀರದ ಅಲೆ
ನಗುವೇಕೋ ಮಾತಿನ ಸೆಲೆ
ಆಸೆ ಒಂದು ಬದುಕಿನ ಬಲೆ
ಹುಡುಕಲಿ ಹೇಗೆ ನಾನು ನೆಲೆ
ಹೃದಯದಿ ಬಡಿವ ಬಡಿತ
ಏಕೊ ಏನೋ ನಿನ್ನ ಸೆಳೆತ
ಮನದಲಿ ಪ್ರೀತಿ ಮೊರೆತ
ನನ್ನಲಿ ಇಂದು ನವಿಲ ಕುಣಿತ
ಕಾಣದ ದಾರಿ ನೀನೆ ತೋರಿ
ಮರೆತರೆ ಎಗೆ ಒಲವಲಿ ಜಾರಿ
ಕನಸು ಕರೆದಿದೆ ಪ್ರತಿ ಬಾರಿ
ನೀನೆ ನನ್ನ ಪ್ರೀತಿಯ ನಾರಿ
ಹೊಸತನ ಹುಡುಕಿದೆ ಇಂದು
ನೆನಪುಗಳು ಮೌನದ ಬಿಂದು
ಆಸೆಗಳ ಬಾನಡಿ ನಾ ಕೊಂದು
ಜಾರಿದೆ ಮನವು ನನ್ನವಳೆಂದು
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment