ಅನುರಾಗ
ಮನಸಿನ ಅನುರಾಗ ನನ್ನೆದೆಯ ತಾಕಿರಲು
ಹಸಿ ಕನಸ್ಸೊಂದು ಮನವನು ಕೂಗಿರಲು
ಒಲವು ಸಿಹಿ ಜೇನು ಸವಿಯ ನೀಡಿರಲು
ಕಾಣದ ಬೆಳಕೊಂದು ಮನೆಯ ಬೆಳಗಿರಲು
ಕಣ್ಣ ನೀರು ಏಕೊ ಕಂಬನಿ ಮಿಡಿದಿರಲು
ಮಿಡಿದಿದೆ ಹೃದಯ ಒಲವ ಸವಿ ತಾಗಿ
ಕಣ್ಣಂಚಲಿ ಹನಿಯೊಂದು ನೋವಲಿ ಕೂಗಿ
ಹರಿವ ನದಿಯಂತೆ ಹುಕ್ಕಿ ಹರಿಯುತಿದೆ
ಸೇರಲು ಬಯಸಿ ಸಮುದ್ರ ಬತ್ತಿದೆ ನೀರು
ಬಾನಅಂಚಲಿ ಬದುಕು ಕೀಳುತಿದೆ ಸೂರು
ಬಿಡಿಸಿ ದೇವರಿಗೆ ತಿಳಿಸುವರು ಯಾರು
ಯಾರದೋ ಗಾಳಕೆ ಮೀನು ಸಿಲುಕಿತು
ನೋವಿನ ಬಲೆಯಲಿ ಕುಣಿದು ನಲಿಯಿತು
ಜೀವವ ತೆತ್ತು ಹೊಟ್ಟೆ ತುಂಬಿಸಿ ಆಸರೆಯಾಯಿತು
ಯಾರಿಗೆ ಹೇಳಬೇಕು ಮೀನು ನೋವಿನ ಕಥೆಯ
ಕಾಣದ ಜೀವದ ಬಾವನೆ ಬರಡು
ಕುಣಿವ ಮನಕೆ ನೋವಿನ ನೆರಳು
ಕಣ್ಣಿರಲಿ ಮುಳುಗಿದೆ ಹೆತ್ತ ಕರುಳು
ಕಳೆದ ನೋವಲಿ ಸರಿದ ರಾತ್ರಿ ಇರುಳು
ಮುನಿಸು ನನ್ನೆದೆಯ ಒಲವ ಸವಿ ತೀರಿಳು
*********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment