ನಸು ನಕ್ಕವಳು




ನನ್ನೆದೆಯ ಅರಮನೆಗೆ ನೀ ಅದೇ ಒಡತಿ

ನನ್ನ ಉಸಿರ ಸವಿ ಒಲವಿಗೆ ನೀ ಗೆಳತಿ

ನನ್ನಾಸೆಯ ಕನಸ್ಸಿಗೆ ನಿನ್ನಾದೆ ದಾರಿ

ನನ್ನ ಮನವ ಗೆದ್ದ ಪ್ರೀತಿ ಚೋರಿ


ನಡೆವ ದಾರಿಯಲಿ ನಿನ್ನದೆ ಹೆಸರು

ಮನದ ಮಾತು ಹೊಂಗನಸಂತೆ ಹಸಿರು

ನನ್ನ ಸೆಳೆದ ಮಾಮರದ ಒಲವ ಚಿಗುರು

ನನ್ನ ಪ್ರೀತಿ ತೋಟದ ಮುದ್ದು ಪಾರು


ಏಕಾಂತದಿ ಮನಸ ಸೋಕಿದ ಕನಸ್ಸು

ಒಲವ ಬಯಕೆ ನಸುನಕ್ಕಂತೆ ಸೊಗಸು

ಬದುಕು ಭರವಸೆಗಳ ಹಸಿ ಮುನಿಸು

ಇರುಳ ಬೆಳಕಲಿ ಚಂದ್ರನ ನೋಡಿ ನಕ್ಕಂತೆ ಕೂಸು


ಜೀವನದ ಹಾದಿಯಲಿ ಪ್ರೀತಿ ಸಹಜ

ಮನಸ್ಸು ಗೆಲ್ಲಬೇಕು ಒ ಜಲಜ 

ನನ್ನಾಸೆ ಒಲವು ಕೇಳಿತು ತನುಜಾ

ಪ್ರೀತಿ ಮನ ತುಂಬಿದಂತೆ ಹೊನ್ನ ಕಣಜ


********ರಚನೆ *******

 ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35