ನೀ ನನ್ನ ಒಲವು
ನನ್ನೆದೆಗೆ ತಾಕಿದ ಹೂವು
ನುಡಿಯಿತು ನನ ಕಂಡು
ಒಲವಾಯಿತು ನನಗೆ
ನನ್ನ ಮೂಡಿಯುವೆಯ
ತೆರೆದೆ ಹೃದಯದಿ ಕೊನೆಗೆ
ಕಾಣದ ದಾರಿಯಲಿ ನಿನ್ನಿಂದೆ
ಮನಸ್ಸು ಕಾಡಿದೆ ಒಳಗೆ
ನನ್ನ ಒಲವ ಕೊಡು ನನಗೆ
ತನುವು ಕಾಡಿದೆ ಹಾಗೆ
ನೀನೆ ನನ್ನಉಸಿರು ಎನಗೆ
ಅರಿಯದ ನಗುವು ಮನದಿ
ಕನಸ್ಸು ಒಲವಾಗೋ ಬಲದಿ
ನೀ ನನ್ನವಳೆಂಬ ಚಲದಿ
ಶುರುವಾಯಿತು ಒಲವು ಪಣದಿ
ನಸುನಕ್ಕು ಹೃದಯ ಹೇಳಿತು
ಮನದಾಸೆ ಕೇಳಿ ಕರೆಯಿತು
ಮಾತೆಲ್ಲ ಪ್ರೀತಿ ಮುತ್ತಾಯ್ತು
ನೀ ನನ್ನವಳು ಎಂದು ಬರೆಯಿತು
ತೆರೆದ ಬದುಕಿಗೆ ನೀ ದೀಪ
ನನ್ನ ಒಲವ ಕನಸ್ಸು ಪಾಪ
ಬೇಡ ಎನಗೆ ಪ್ರೀತಿ ತಾಪ
ಸಾಕು ಮಾಡು ದೇವಾ ನೀ ಕೋಪ
ಯಾರದೋ ಆತ್ಮದ ಶಾಪ
ಕಳೆದ ನೋವಿನ ಕಣ್ಣೀರ ರೂಪ
********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment