ಬಾರೆ ಗೆಳತಿ
ಮನದಾಗೆ ನೂರಾಸೆ ಗೆಳತಿ
ಕನಸಾಗೇ ನೀ ನನಗೆ ಹಿಡಿಸಿ
ನಾ ಬಂದೆ ನಿನ್ನ ಅರಸಿ
ಪ್ರೀತಿ ಮನದಿ ಚಿಗುರಿ
ನಾ ಅದೇ ನೀ ಆಡಿಸೋ ಬುಗುರಿ
ಇಟ್ಟೆ ನಾ ನಿನ ಮೇಲೆ ಆಸೆ
ಕೊಡು ನೀನು ಒಲವ ಭಾಷೆ
ಆಸೆಯ ಹೊತ್ತು ಬಂದೆ
ನಿನ ಸೇರಗ ಹಿಡಿದು ನಿಂದೆ
ಒಮ್ಮೆ ನೀನು ಹೇಳು ಗೆಳತಿ
ಲವ್ ಯು ಅಂತ ನನ್ನ ಒಡತಿ
ನಮ್ಮಿಬ್ಬರ ಜೋಡಿ ನೋಡಿ
ಹೇಳವ್ರೆ ಹಾಡು ಹಾಡಿ
ಕುಣಿದೈತಿ ಮನಸ್ಸು ಕೂಡಿ
ನಲಿದೈತಿ ಹೃದಯ ಬೇಡಿ
ಮನದಾಗೆ ನೂರಾಸೆ ಗೆಳತಿ
ಕನಸಾಗೇ ನೀ ನನಗೆ ಹಿಡಿಸಿ
ನಾ ಬಂದೆ ನಿನ್ನ ಅರಸಿ
ಬಾನಾಂಚಿನ ನಕ್ಷತ್ರ ಕಂಡೆ
ಬೆಳದಿಂಗಳ ಚಂದ್ರನ ಬೆಳಕ ಕಂಡೆ
ಮೋಡದ ಮರೆಯಲಿ ಸರಿದ
ಬೆಳಕಲಿ ನಿನ್ನ ಪ್ರತಿಬಿಂಬವ ಕಂಡೆ
ಸ್ವರ್ಗದಿ ಕುಣಿವ ಆಸೆ ನಂದು
ನಿನ ನೆನಪಲಿ ಮನಸ್ಸು ಮಿಂದು
ಕೂಗಿದೆ ಗೆಳತಿ
ಬರುವೆಯಾ ನೀನು
ಉಸಿರ ಅರಮನೆಗೆ ಒಡತಿ
ಹೃದಯದಿ ಮುಚ್ಚಿಟ್ಟ ಕನಸ್ಸು
ಹಾಗಾಯ್ತೆ ನಿನ ಮೇಲೆ ಮನಸ್ಸು
ಮಾಡೋಣ ಪ್ರೀತಿಯ ನನಸ್ಸು
ಕರೆದಿದೆ ಈ ನಮ್ಮ ವಯಸ್ಸು
ಮನದಾಗೆ ನೂರಾಸೆ ಗೆಳತಿ
ಕನಸಾಗೇ ನೀ ನನಗೆ ಹಿಡಿಸಿ
ನಾ ಬಂದೆ ನಿನ್ನ ಅರಸಿ
********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment